ದುಬೈನಲ್ಲಿ ಅದ್ದೂರಿ ರಾಜ್ಯೋತ್ಸವ: ನಿಸಾರ್ ಅಹಮದ್ ಗೆ ಸನ್ಮಾನ

ದುಬೈನಲ್ಲಿ ನಿನ್ನೆ ಅದ್ದೂರಿ ಕನ್ನಡ ರಾಜ್ಯೋತ್ಸವ ಅಚರಣೆ ಮಾಡಲಾಯಿತು. ಕಾರ್ಯಕ್ರಮವನ್ನು ಕವಿ ನಿಸಾರ್ ಅಹಮದ್  ಉದ್ಘಾಟಿಸಿದರು. ದುಬೈ ಕನ್ನಡಿಗರು ಮಿಲಿಯನಿಯಂ ಸ್ಕೂಲ್ ನಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪೂರ್ಣ ಕುಂಭ ಸ್ವಾಗತ ನೀಡಿ, ಮೆರವಣಿಗೆಯಲ್ಲಿ ಕರೆತರಲಾಯಿತು. ದುಬೈ ಕನ್ನಡಿಗರು ಆಯೋಜಿಸಿದ್ದ ೬೧ ನೇ ಕನ್’ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ, ನಿತ್ಯೋತ್ಸವ ಕವಿ ಕೆ.ಎಸ್. ನಿಸಾರ್ ಅಹಮದ್ ಅವರಿಗೆ ಕನ್ನಡ ರತ್ನ ಬಿರುದು ನೀಡಿ ಗೌರವಿಸಲಾಯಿತು.

dubai-kannada-rajyothsava

ಸನ್ಮಾನ ಸ್ವೀಕರಿಸಿ ಮಾತನಾಡಿದ ನಿಸಾರ್ ಅಹಮದ್ ಅವರು “ಕನ್ನಡ ತಾಯಿಯ ಕೃಪೆಯಿಂದ ನಾವೆಲ್ಲಾ ಇಲ್ಲಿದ್ದೇವೆ. ಅವಳ ಸೇವೆ ಮಾಡುವುದೇ ನಮ್ಮೆಲ್ಲರ ಕರ್ತವ್ಯ.  ದುಬೈ ಕನ್ನಡಿಗರ ಅಭಿಮಾನದಿಂದ ಎದೆ ತುಂಬಿ ಬಂದಿದೆ” ಎಂದು ಹರ್ಷ ವ್ಯಕ್ತಪಡಿದರು. ದುಬೈ ಕನ್ನಡಿಗರು ಸಂಘದ ಮಾಜಿ ಅಧ್ಯಕ್ಷ
ಸದನ್ ದಾಸ್ ಮಾತನಾಡಿ “ದುಬೈನಲ್ಲಿ ಪ್ರತಿ ವರ್ಷ ರಾಜ್ಯೋತ್ಸವವನ್ನು ಆಚರಿಸ್ತೇವೆ. ಕಳೆದ ಎಂಟು ವರ್ಷದಿಂದ ರಾಜ್ಯೋತ್ವವ ಆಚರಿಸಿ, ಅರಬರ ನಾಡಿನಲ್ಲಿ ಕನ್ನಡ ಕಟ್ಟುವ ಕೆಲಸ ಮಾಡುತ್ತಿದ್ದೇವೆ. ಎಲ್ಲ ಕನ್ನಡದ ಮನಸುಗಳು ಒಂದಾಗಿ ನಿಸ್ವಾರ್ಥ ಸೇವೆಯಿಂದ ಕನ್ನಡದ ಸೇವೆ ಮಾಡುತ್ತಿದ್ದೇವೆ”  ಎಂದರು.

dubai-kannada-rajyothsava3 dubai-kannada-rajyothsava2

 

ಹಾಲಿ ಅಧ್ಯಕ್ಷೆ ಉಮಾದೆವಿ ವಿದ್ಯಾಧರ್ ಮಾತನಾಡಿ,  ದುಬೈನಲ್ಲಿ ಇದ್ದುಕೊಂಡು ಕನ್ನಡ ಕಟ್ಟುವುದು ಕಷ್ಟದ ಕೆಲಸ. ಆದ್ರೂ ಎಲ್ಲರೂ ಸೆರಿಕೊಂಡು ಕನ್ನಡ ಉಳಿಸುವ ಪ್ರಯತ್ನ ನಡೆಸುತ್ತಿದ್ದೇವೆ. ಕರ್ನಾಟಕ ಸರ್ಕಾರ ರಾಜ್ಯದಿಂದ ಕಲಾವಿದರನ್ನು ಕಳುಹಿಸಿಕೊಡಲು ಸಹಕಾರ ನೀಡಿದ್ರೆ, ಸಾಕಷ್ಟು ಅನುಕೂಲ ಆಗಲಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಧಾರವಾಡ ರಂಗಗಂಗಾ ಕಲಾ ತಂಡದಿಂದ ಕೊನೆ ನಮಸ್ಕಾರ ನಾಟಕ ಪ್ರದರ್ಶನ ಮಾಡಲಾಯಿತು. ದಬೈ ಕನ್ನಡಿಗರು ಸಂಘದ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಗೌಡ, ಮಲ್ಲಿಕಾರ್ಜುನ ಅಂಗಡಿ ಮತ್ತಿತರರು ಉಪಸ್ಥಿತರಿದ್ದರು.

Comments are closed.

Social Media Auto Publish Powered By : XYZScripts.com