ಈ ಬೇಸಿಗೆಗೆ ಬೆಂಗಳೂರಿಗರಿಗೆ ಮಿನರಲ್ ನೀರೇ ಗತಿ

ಕಾವೇರಿ ಕೊಳ್ಳದ ಕಬಿನಿ, ಕೃಷ್ಣರಾಜ ಸಾಗರ, ಹಾರಂಗಿ ಹಾಗೂ ಹೇಮಾವತಿ ಒಳಗೊಂಡಂತೆ ನಾಲ್ಕೂ ಜಲಾಶಯಗಳಲ್ಲಿ ಪ್ರಸ್ತುತ ಲಭ್ಯವಿರುವ ನೀರನ್ನು ಸಂರಕ್ಷಿಸಿದರೆ ಮಾತ್ರ ಮೈಸೂರು, ಮಂಡ್ಯ ಸೇರಿದಂತೆ ಹುಣಸೂರಿನಿಂದ ಬೆಂಗಳೂರಿನವರೆಗೆ ಕುಡಿಯುವ ನೀರು ಪೂರೈಕೆಯನ್ನು ಸರಿದೂಗಿಸಲು ಸಾಧ್ಯ. ಇಲ್ಲವಾದಲ್ಲಿ ಈ ಭಾಗದ ಜನರು ಮುಂದಿನ ಬೇಸಿಗೆಯಲ್ಲಿ ಅತ್ಯಂತ ಕಠಿಣವಾದ ಪರಿಸ್ಥಿತಿಯನ್ನ ಎದುರಿಸುವದರಲ್ಲಿ ಅನುಮಾನವಿಲ್ಲ.

water drop
ಕಾವೇರಿ ನದಿ ನೀರು ಹಂಚಿಕೆ ಕುರಿತಂತೆ ಭಾರತದ ಸರ್ವೋಚ್ಛ ನ್ಯಾಯಾಲಯ ನೀಡಿರುವ ತೀರ್ಪಿನ ಹಿನ್ನೆಲೆಯಲ್ಲಿ ಜಲಾಶಯಗಳಲ್ಲಿನ ನೀರಿನ ಮಟ್ಟ ಹಾಗೂ ನದಿ ಪಾತ್ರದ ಜನರ ದುಃಖ-ದುಮ್ಮಾನಗಳ ವಾಸ್ತವಾಂಶದ ಚಿತ್ರಣವನ್ನು ಅರಿಯಲು ಬೆಂಗಳೂರಿನ ಮಾಧ್ಯಮ ತಂಡ ನಡೆಸಿದ ಎರಡನೇ ದಿನದ ಅಧ್ಯಯನ ಪ್ರವಾಸದಲ್ಲಿ ಈ ಅಂಶವು ಬೆಳಕಿಗೆ ಬಂದಿದೆ.
ಹಾಸನ ಜಿಲ್ಲೆಯ ಗೊರೂರಿನ ಹೇಮಾವತಿ ಜಲಾಶಯದಲ್ಲಿನ ಗರಿಷ್ಠ ನೀರು ಸಂಗ್ರಹಣಾ ಸಾಮಾಥ್ರ್ಯ 37.103 ಟಿ.ಎಂ.ಸಿ. ಇದಕ್ಕೆ ಪ್ರತಿಯಾಗಿ ಇಂದಿನ ನೀರಿನ ಸಂಗ್ರಹಣಾ ಮಟ್ಟ 4.372. ಟಿ.ಎಂ.ಸಿ ಹರಿ ನೀರಾವರಿ, ಏತ ನೀರಾವರಿ ಹಾಗೂ ಕುಡಿಯುವ ನೀರು ಬಳಕೆಗೆ ಉಪಯೋಗಿಸಲಾಗುತ್ತಿದ್ದ ಈ ನೀರನ್ನು ಇದೀಗ ಕೇವಲ ಕುಡಿಯುವ ನೀರು ಉದ್ದೇಶಕ್ಕೆ ಮಾತ್ರ ಬಳಸಲು ನಿರ್ಧರಿಸಲಾಗಿದೆ.

Comments are closed.