ನಿಮಗೆ ಗೊತ್ತೇ ನವ ದಶವತಾರಗಳೊಂದಿಗೆ ಹಾಜರಾದ ಐ-ಫೋನ್ 7..?

ಕೊನೆಗೂ ಐಫೋನ್ 7ರ ಕುತೂಹಲಕ್ಕೆ ತೆರೆಬಿದ್ದಿದೆ. ಪ್ರತಿ ಬಾರಿಯ ಸೆಪ್ಟೆಂಬರ್ 7ರ ಇವೆಂಟ್ ನ  ಸರ್ ಪ್ರೈಸ್ ಈ ಬಾರಿಯೂ ಮುಂದುವರೆದಿದೆ. ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೊಸ ಅವತಾರದ ಆಪಲ್ ಫೋನ್ ನ ಏಳನೇ ಅವತರಣಿಕೆಯನ್ನ ಆಪಲ್ ಸಿಇಓ ಟಿಮ್ ಕೂಕ್ ಬಿಡುಗಡೆಗೊಳಿಸಿದ್ದಾರೆ. ಬರೋಬ್ಬರಿ ಹತ್ತು ಹೊಸ ಅವತಾರಗಳನ್ನ ಹೊತ್ತು ಬಂದಿರುವ ಐ ಫೋನ್ 7 ಮತ್ತು 7 ಪ್ಲಸ್ ಗ್ಯಾಜೆಟ್ ಪ್ರಿಯರ ಹುಬ್ಬೇರಿಸುವಂತೆ ಮಾಡಿರುವದರಲ್ಲಿ ಸಂಶಯವೇ ಇಲ್ಲ. ಇಂಡಸ್ಟ್ರೀಯಲ್ಲಿರುವ ಎಲ್ಲ ಹೊಸತನಗಳ ಗಡಿಯನ್ನ ದಾಟಿ ಮುಂದೆ ಸಾಗಿರುವ ಐ ಫೋನ್ 7 ಕೇವಲ ಸರ್ ಪ್ರೈಸ್ ಮಾತ್ರವಲ್ಲ ಶಾಕ್ ನೀಡಿದೆಯಂದೆ ಹೇಳಬಹುದು.

i phone 7

ಹೊಸ ಹತ್ಈತು ಅವತಾರಗಳನ್ನ ಐ ಫೋನ್ 7 ಪಡೆದುಕೊಂಡಿದೆ.

1. ಹಿಂದಿನ ಸಿರೀಸ್  ಗೋಲ್ಡ್, ಸಿಲ್ವರ್ ಹಾಗೂ ಗ್ರೇ ಬಣ್ಣಗಳಲ್ಲಿ ಇದ್ದ ಫೋನ್ ಈ ಬಾರಿ ಅವುಗಳ ಜೊತೆಗೆ ಹೊಳೆಯುವ ಕಪ್ಪು ಬಣ್ಣವನ್ನ ಹೊಂದಿರುವುದು ವಿಶೇಷ.

2. ವಿನ್ಯಾಸದಲ್ಲಿ ಸಣ್ಣಮಟ್ಟದ ಬದಲಾವಣೆ ಮಾಡಿಕೊಂಡಿರುವ ಇದು ಹೋಮ್ ಬಟನ್ ಅನ್ನು ಮೊದಲಿಗಿಂತ ಚಿಕ್ಕದಾಗಿಸಿದೆ.

3. ಬೆರಗುಗೊಳಿಸುವ ಸಂಗತಿಯೆಂದ್ರೆ ಈ ಫೋನ್ ಗೆ ಆಡಿಯೋ ಜಾಕ್ ಇಲ್ಲವಂತೆ. ಹಾಗಾದ್ರೆ ಇಯರ್ ಫೋನ್ ಬಳಸುವ ಹಾಗೇ ಇಲ್ಲವೇ ಅನ್ನೋ ಅನುಮಾನ ಬೇಡ. ಇದಕ್ಕಾಗಿ ಆಪಲ್ ಕಂಡುಕೊಂಡ ಮಾರ್ಗ ವಯರ್ ಲೆಸ್ ಇಯರ್ ಫೋನ್. ಅದಕ್ಕಾಗಿ ಸುಮಾರು  10 ಸಾವಿರ ರೂಪಾಯಿ ಪ್ರತ್ಯೇಕವಾಗಿ  ತೆರಬೇಕಾಗಿದ್ದು ಮಾತ್ರ ಕಿವಿಗೆ ಹಗುರ ಏನಿಸಿದ್ರು ಜೇಬಿಗಂತು ಖಂಡಿತಾ ಭಾರ.

4. ಇದು ಸಂಪೂರ್ಣವಾಗಿ ಡಸ್ಟ್ ಪ್ರೂಫ್ ಫೋನ್ ಹಾಗೂ ವಾಟರ್ ರೆಸಿಸ್ಟೆಂಟ್

5.  ಮೊಬೈಲ್ ಫೋಟೋಗ್ರಾಫಿಯ ಮತ್ತೊಂದು  ಸಾಧ್ಯತೆಯನ್ನ ಇದರಲ್ಲಿ ಕಾಣಬಹುದಾಗಿದೆಯಂತೆ. 12 ಮೆಗಾಪಿಕ್ಸೆಲ್ ನ ವೈಡ್ ಲೆನ್ಸ್ ಕ್ಯಾಮೆರಾ ಐ ಫೋನ್ 7ಗೆ ಇರಲಿದೆ.

6.  ಹಾಗೆಯೇ 7 ಮೆಗಾಪಿಕ್ಸೆಲ್ ಹೆಚ್ ಡಿ ಫ್ರಂಟ್ ಕ್ಯಾಮೆರಾ ಇರಲಿದೆಯಂತೆ.

7. ಕಡಿಮೆ ಬೆಳಕಿನಲ್ಲಿಯೂ ಉತ್ತಮ ಗುಣಮಟ್ಟದ ಫೋಟೋಗಳನ್ನ ತೆಗೆಯಬಹುದಂತೆ.

8. ಅಪ್ ಗ್ರೇಡೆಡ್ ರೆಟಿನಾ ಹೆಚ್ ಡಿ ಡಿಸ್ ಪ್ಲೇ ಇರಲಿದೆ.

9. ಹಿಂದಿನ ಅವತರಣಿಕೆಗಿಂತ ಎರಡು ಗಂಟೆ ಹೆಚ್ಚಿನ ಬ್ಯಾಟರಿ ಸಾಮರ್ಥ್ಯ ಹೊಂದಿರಲಿದೆಯಂತೆ

10. ಶೇಖರಣಾ ಸಾಮರ್ಥ್ಯ 32 ಜಿಬಿಯ ಜೊತೆಗೆ 128 ಹಾಗೂ 256 ಜಿಬಿಯ ಅವತರಣಿಕೆಗಳು ದೊರಕುತ್ತವೆ.

ಇಷ್ಟೇಲ್ಲಾ ಹೊಸತನಗಳೊಂದಿಗೆ ಕಾಲಿಡುತ್ತಿರುವ ಐ ಫೋನ್ 7ರ ಆರಂಭಿಕ ಬೆಲೆಯೂ 45 ರಿಂದ 50 ಸಾವಿರದ ಆಸುಪಾಸಿನಲ್ಲಿರಲಿದೆ ಅಂತ ಅಂದಾಜಿಸಲಾಗಿದೆ. ಇದೇ ತಿಂಗಳ 16ರಂದು ಹೊಸ ಐ ಫೋನ್ 7 ನಿಮ್ಮ ಕೈಗೆ ಸಿಕ್ಕರೂ ಅಚ್ಚರಿಯಿಲ್ಲ.

 

 

Comments are closed.

Social Media Auto Publish Powered By : XYZScripts.com