ಜಿಯೋ ಬಂದಿದ್ದೆ ತಡ, ಉಳಿದವರೆಲ್ಲಾ ಲಬೋ..ಲಬೋ…

ನಿಮಗೆ ಈ ಸಂಗತಿ ಖಂಡಿತಾ ಮರೆತು ಹೋಗಿರಲಿಕ್ಕೆ ಸಾಧ‍್ಯವೇ ಇಲ್ಲ. ಅದು 2003ರ ಸಮಯ. ಆಗ ತಾನೇ ಮೊಬೈಲ್ ಅನ್ನೋ ಮಾಯೆ ಮುತ್ತಿಕೊಳ್ಳುವದಕ್ಕೆ ಹವಣಿಸುತ್ತಿತ್ತು. ಆ ಸಮಯಕ್ಕೆ ಮಾರುಕಟ್ಟೆಗೆ ಕಾಲಿಟ್ಟವರೆ ಅಂಬಾನಿ ಒಡೆತನದ ರಿಲಾಯನ್ಸ್. “ಕರ್ ಲೋ ದುನಿಯಾ ಮುಟ್ಠಿ ಮೇಂ” ಅಂತ ಹೇಳ್ತಾನೆ ಮಾರುಕಟ್ಟೆಗೆ ಬಂದ ರಿಲಾಯನ್ಸ್ ಮಾಡಿದ್ದ ಮ್ಯಾಜಿಕ್ ಅಂತೀಥದ್ದಲ್ಲ. ಆವತ್ತು ಹಾದಿ, ಬೀದಿಯಲ್ಲೆಲ್ಲಾ ಕುಳಿತು ರಿಲಾಯನ್ಸ್ ನವರು ಕೆಲವೇ ನೂರು ರೂಪಾಯಿಗಳಿಗೆ ಮೊಬೈಲ್ ಹ್ಯಾಂಡ್ ಸೆಟ್ ಸಹಿತ ಗ್ರಾಹಕರನ್ನ ತಮ್ಮ ನೆಟ್ವರ್ಕ್ ಗೆ ಸೆಳೆದುಕೊಂಡಿದ್ದರು. ರಿಲಾಯನ್ಸ್ ವರ್ಲ್ಡ್ ಮೂಲಕ ಇಂಟರ್ ನೆಟ್ ನ್ನ ಆವತ್ತು ಆ ಹಳೇ ಮಾದರಿಯ ಫೋನ್ ಗೆ ಒದಗಿಸಿ ದೊಡ್ಡ ಸಂಚಲನ ಉಂಟು ಮಾಡಿದ್ದರು.

jio launch

ಅದಾಗಿ ಬರೋಬ್ಬರಿ 13 ವರ್ಷಕ್ಕೆ ಈಗ ಮತ್ತೇ ರಿಲಾಯನ್ಸ್ ಅಂಥದ್ದೇ ಕ್ರಾಂತಿಗೆ ಮುಂದಾಗಿದೆ. ಸರಿಸುಮಾರು 70 ಸಾವಿರ ಕೋಟಿ ಬಂಡವಾಳ ಹೂಡಿ 4ಜಿ ಜಗತ್ತಿಗೆ ಕಾಲಿಡುತ್ತಿದೆ ಮುಖೇಶ್ ಒಡೆತನದ ರಿಲಾಯನ್ಸ್. ತನ್ನ ಅಧಿಕೃತ ಆಗಮನವನ್ನ ರಿಲಾಯನ್ಸ್ ಘೋಷಿಸಿದ್ದೆ ತಡ ಮಾರುಕಟ್ಟೆಯಲ್ಲಿನ ಉಳಿದ ನೆಟ್ವರ್ಕ ಪ್ರೋವೈಡರ್ಸ್ ಗಳೆಲ್ಲಾ ಲಬೋ… ಲಬೋ… ಅಂತ ಬಾಯಿ ಬಡಿದುಕೊಳ್ಳುತ್ತಿದ್ದಾರೆ. ಜಿಯೋ ಘೋಷಿಸಿದ ಆಫ್ ರ್ ಗಳ ಸುನಾಮಿಗೆ ಏರ್ ಟೆಲ್, ವೋಡಾಫೋನ್, ಐಡಿಯಾಗಳೆಲ್ಲಾ ತಲೆ ಮೇಲೆ ಕೈಹೊತ್ತು ಕುಳಿತಿದ್ದಾರೆ. ಸೆಪ್ಟೆಂಬರ್ 5ರಿಂದ ಜಿಯೋ ಅಧಿಕೃತವಾಗಿ

jio 4g plans

ಜಿಯೋ ನಂಬಲಸಾಧ್ಯ ಆಫರ್ ಗಳನ್ನ ಘೋಷಿಸಿದ್ದು, ಅದಾಗಲೇ  ಗ್ರಾಹಕರು ಸಿಮ್ ಗೋಸ್ಕರ  ಮುಗಿಬೀಳುತ್ತಿದ್ದಾರೆ. ಜಿಯೋ ಘೋಷಿಸಿರುವ ಾಫರ್ ನಲ್ಲಿ ಯಾವುದೇ ನೆಟ್ವರ್ಕ ಗೆ ಮಾಡುವ ವಾಯ್ಸ್ ಕರೆಗಳು ಸಂಪೂರ್ಣವಾಗಿ ಉಚಿತವಾಗಿದ್ದು, ಭಾರತದಾದ್ಯಂತ ರೋಮಿಂಗ್ ಶುಲ್ಕ್ ಅನ್ವಯವಾಗುವದಿಲ್ಲವೆಂದು ಘೋಷಿಸಿದೆ. ಕೇವಲ 50 ರೂಪಾಯಿಗೆ 1ಜಿಬಿ 4ಜಿ ಡಾಟಾ ನೀಡಲು ನಿರ್ಧರಿಸಿದೆ. ಏಳು ಬಗೆಯ ಟ್ಯಾರಿಫ್ ಗಳನ್ನ ಜಿಯೋ ಘೋಷಿಸಿದ್ದು, 149 ರೂ. ಯಿಂದ 4999ರ ವರೆಗೆ ವಿವಿಧ ಪ್ಯಾಕ್ ಗಳು ಲಭ್ಯವಿವೆ.

ಈಗಾಗಲೇ ಜಿಯೋ 18 ಸಾವಿರ ನಗರಗಳನ್ನ ಹಾಗೂ 2 ಲಕ್ಷ ಗ್ರಾಮಗಳನ್ನ ಕವರ್ ಮಾಡಿದೆ. ಬರುವ 2017ರ ಮಾರ್ಚ್ ವೇಳೆಗೆ ಮಾರುಕಟ್ಟೆಯ ಶೇ.90ರಷ್ಟನ್ನು ಜಿಯೋ ತನ್ನ ಮಡಿಲಿಗೆ ಹಾಕಿಕೊಳ್ಳಲಿದೆ ಅಂತ ಮುಖೇಶ್ ಘೋಷಿಸಿದ್ದಾರೆ. ಮೋದಿಯವರ ಡಿಜಿಟಲ್ ಇಂಡಿಯಾಕ್ಕೆ ಈ ಸೇವೆಯನ್ನ ಅರ್ಪಿಸಿದ ಮುಖೇಶ್ ಭವಿಷ್ಯದ ಡಿಜಿಟಲ್ ಜಗತ್ತನ್ನ ದೃಷ್ಟಿಯಲ್ಲಿಟ್ಟುಕೊಂಡು ಈ ಸೇವೆ ರೂಪಿಸಲಾಗಿದೆ ಅಂತ ಹೇಳಿದ್ದಾರೆ. ಜಿಯೋ ನುಗ್ಗುತ್ತಿರುವ ವೇಗವನ್ನ ನೋಡಿದ್ರೆ ಬಹುಶಃ ಉಳಿದ ನೆಟ್ವರ್ಕ್ ಪ್ರೊವೈಡರ್ಸ್ ಗಳು ಮಾರುಕಟ್ಟೆಯಲ್ಲಿ ಅಸ್ತಿತ್ವ ಉಳಿಸಿಕೊಳ್ಳುವುದೇ ಭಾರೀ ಸವಾಲಾಗಿದೆ. ಅದಾಗಲೇ ಒಟ್ಟಾರೆಯಾಗಿ 13 ಸಾವಿರ ಕೋಟಿಯಷ್ಟು ನಷ್ಟವನ್ನ ಉಳಿದ ನೆಟ್ವರ್ಕ ಪ್ರೊವೈಡರ್ಸ್ ಅನುಭವಿಸಿದ್ದು, ಮುಂದಿನ ದಿನಗಳಲ್ಲಿ ಅವರೆಲ್ಲರ ನಡೆ ಏನಾಗಿರುತ್ತೆ ಅನ್ನೋದೆ ಭಾರೀ ಕುತೂಹಲ ಕೆರಳಿಸಿದೆ.

Comments are closed.

Social Media Auto Publish Powered By : XYZScripts.com