ಬಾಕ್ಸಿಂಗ್‌ನಲ್ಲಿ ಭಾರತದ ಅಭಿಯಾನ ಅಂತ್ಯ

ರಿಯೊ ೨೦೧೬ರ ಒಲಿಂಪಿಕ್ಸ್‌ನಲ್ಲಿ ಭಾರತದ ಬಾಕ್ಸರ್‌ಗಳ ಅಭಿಯಾನ ಅಂತ್ಯವಾಗಿದೆ. ಪದಕದ ಖಾತೆಯನ್ನು ತೆರೆಯುವಲ್ಲಿ ವಿಫಲರಾದ ಬಾಕ್ಸರ್‌ಗಳು ನಿರಾಸೆಯನ್ನು ಮೂಡಿಸಿದ್ದಾರೆ. ಮಹತ್ವದ ಪಂದ್ಯದಲ್ಲಿ ಭರವಸೆಯ ಪುರುಷರ ಮಿಡ್ಲ್ ೭೫ ಕೆ.ಜಿ ವಿಭಾಗದ ಬಾಕ್ಸರ್ ವಿಕಾಸ್ ಕೃಷ್ಣನ್ ಅವರು ಸೋಲು ಅನುಭವಿಸಿದ್ದಾರೆ.

ಮಂಗಳವಾರ ಬೆಳಗಿನ ಜಾವ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ವಿಕಾಸ್ ಅವರು ಅಂಕಗಳಿಸುವಲ್ಲಿ ವಿಫಲರಾಗಿ ಪಂದ್ಯವನ್ನು ಕೈ ಚೆಲ್ಲಿದ್ದಾರೆ. ೦-೩ ಉಜ್ಬೇಕಿಸ್ತಾನದ ಬೆಕ್ತಿಮರ್ ಮೆಲಿಕುಜಿವ್ ಅವರ ವಿರುದ್ಧ ಸೋಲು ಅನುಭವಿಸಿದರು.

Noida: India's Vikas Krishan Yadav fight against Kenya's boxer Nickson Abaka during the AIBA Pro Boxing night in Noida on Saturday. Vikas beat Abaka by 3-0. PTI Photo (PTI6_11_2016_000202B)

ಮೊದಲ ಸೆಟ್‌ನಲ್ಲಿ ವಿಕಾಸ್ ಉತ್ತಮ ಆರಂಭವನ್ನು ನೀಡುವ ಸೂಚನೆಯನ್ನು ನೀಡಿದರು. ಆದರೆ ಎದುರಾಳಿ ಆಟಗಾರನ ಯೋಜನೆಯನ್ನು ಬೇಧಿಸುವಲ್ಲಿ ವಿಫಲರಾದರು. ರಕ್ಷಣಾತ್ಮಕ ಆಟಕ್ಕೆ ಮಣೆ ಹಾಕಿದ ವಿಕಾಸ್ ಅಂಕಗಳನ್ನು ಬಾಚಿಕೊಳ್ಳಲಿಲ್ಲ. ೨೭-೩೦ ಅಂಕಗಳಿಂದ ಸೆಟ್ ಕೈ ಬಿಟ್ಟ ವಿಕಾಸ್ ಅವರು ನಿರಾಸೆಯನ್ನು ಅನುಭವಿಸಿದರು.

ಎರಡನೇ ಸೆಟ್‌ನಲ್ಲಿ ಪುಟಿದೇಳುವ ಸೂಚನೆಯನ್ನು ನೀಡಿದ ವಿಕಾಸ್ ಅವರ ರಣತಂತ್ರವೂ ಕೈ ಹಿಡಿಯಲಿಲ್ಲ. ಉಜ್ಬೇಕಿಸ್ತಾನದ ಬಾಕ್ಸರ್ ಎದುರು ಸ್ಥಿರ ಆಟವನ್ನು ಆಡುವಲ್ಲಿ ವಿಫಲರಾದ ವಿಕಾಸ್ ಅವರು ಅಂಕಗಳನ್ನು ನೀಡಿ ಕೈ ಸುಟ್ಟು ಕೊಂಡರು. ಸೆಟ್‌ನ ಯಾವುದೇ ಹಂತದಲ್ಲಿ ಉತ್ತಮ ಪ್ರತಿರೋಧವನ್ನು ಒಡ್ಡುವಲ್ಲಿ ಇವರು ವಿಫಲರಾದರು. ಪರಿಣಾಮ ಅಂಕಗಳನ್ನು ನೀಡುತ್ತಾ ಸಾಗಿದರು. ಈ ಸೆಟ್‌ನಲ್ಲಿ ೩೦-೨೬ ಅಂಕಗಳನ್ನು ಕಲೆ ಹಾಕಿದ ಬೆಕ್ತಿಮರ್ ಭಾರೀ ಮುನ್ನಡೆ ಸಾಧಿಸಿದರು.

ಮೂರನೇ ಹಾಗೂ ನಿರ್ಣಾಯಕ ಸೆಟ್‌ನಲ್ಲಿ ಆಕ್ರಮಣಕಾರಿ ಆಟವನ್ನು ಆಡುವಲ್ಲಿ ಎಡವಿದ ವಿಕಾಸ್ ತಿರುಗೇಟು ನೀಡುವಲ್ಲಿ ವಿಫಲರಾದರು. ಹಂತ ಹಂತವಾಗಿ ಪಂದ್ಯದ ಮೇಲೆ ಹಿಡಿತ ಸಾಧಿಸಿ ಬೆಕ್ತಿಮರ್ ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದರು. ೩೦-೨೬ ಅಂಕಗಳಿಂದ ಸೆಟ್ ಸೋತ ವಿಕಾಸ್ ಸೆಮಿಫೈನಲ್‌ಗೆ ಅರ್ಹತೆಯನ್ನು ಪಡೆಯುವಲ್ಲಿ ವಿಫಲರಾದರು. ಅಲ್ಲದೆ ಮೂರನೇ ಸೆಟ್ ಆಡುವಾಗ ವಿಕಾಸ್ ಕೊಂಚ ಹಿನ್ನಡೆಯನ್ನು ಅನುಭವಿಸಿದರು.

5 thoughts on “ಬಾಕ್ಸಿಂಗ್‌ನಲ್ಲಿ ಭಾರತದ ಅಭಿಯಾನ ಅಂತ್ಯ

 • October 18, 2017 at 2:40 PM
  Permalink

  Hi there are using WordPress for your site
  platform? I’m new to the blog world but I’m trying to get started and create my own. Do you require any coding expertise to make your own blog?
  Any help would be greatly appreciated!

 • October 18, 2017 at 4:19 PM
  Permalink

  Nice blog right here! Additionally your web site rather a lot
  up fast! What web host are you the usage of?
  Can I am getting your affiliate hyperlink to your host?
  I want my website loaded up as quickly as yours lol

 • October 20, 2017 at 9:32 PM
  Permalink

  Nice post. I learn something more challenging on different blogs everyday. It can always be stimulating to read content from different writers and practice a bit of something from their store. I favor to use some with the content material on my blog whether you don’t mind. Natually I give you a link in your net blog. Thanks for sharing.

 • October 21, 2017 at 12:50 AM
  Permalink

  Howdy would you mind letting me know which webhost you’re using?

  I’ve loaded your blog in 3 completely different browsers and I must say
  this blog loads a lot quicker then most.
  Can you recommend a good internet hosting provider at a fair price?
  Thank you, I appreciate it!

 • October 25, 2017 at 10:49 AM
  Permalink

  I’ve been surfing online more than 4 hours today,
  yet I never found any interesting article like yours.
  It’s pretty worth enough for me. Personally, if all website owners and bloggers made good content as you did, the web will be a lot
  more useful than ever before.

Comments are closed.

Social Media Auto Publish Powered By : XYZScripts.com