ಕೇಸರಿ ಪಡೆಯ ಕಲಹ ತಪ್ಪಿಸಲು ಕೋರ್ ಕಮಿಟಿ ಸಭೆ…..!

ನಾಯಕರ ನಡುವಿನ ತಿಕ್ಕಾಟದಿಂದಾಗಿ ಮುರಿದ ಮನೆಯಂತಾಗಿರುವ ರಾಜ್ಯ ಬಿಜೆಪಿಯಲ್ಲೀಗ ಒಗ್ಗಟ್ಟಿನ ಮಂತ್ರ ಪಠಣದ ಸಮಯ ಶುರುವಾಗಿದೆ. ಪಕ್ಷದಲ್ಲಿನ ಅಸಮಾಧಾನ, ಅತೃಪ್ತಿಯನ್ನು ಹೊಗಲಾಡಿಸುವ ನಿಟ್ಟಿನಲ್ಲಿ ನಾಳೆ ಬಿಜೆಪಿ ಕೋರ್ ಕಮಿಟಿ ಸಭೆ ನಡೆಯಲಿದೆ. ಯಡಿಯೂರಪ್ಪ ಮತ್ತು ಈಶ್ವರಪ್ಪ ನಡುವಿನ ರಾಜಕೀಯ ಮುನಿಸು ಕೊನೆಗಾಣಿಸುವಲ್ಲಿ ನಾಳೆಯ ಸಭೆಯ ತಿರ್ಮಾನ ಮಹತ್ವ ಪಡೆದುಕೊಂಡಿದೆ. ಯಡಿಯೂರಪ್ಪ ಎದುರು ಇತರ ನಾಯಕರ ಅರ್ಭಟಿಸಲಿದ್ದಾರಾ ಅನ್ನೋ ಕುತೂಹಲವೂ ಮೂಡಿದೆ.

Eshwarappa

ಮುಂದಿನ ಬಾರಿ ಅಧಿಕಾರಕ್ಕೆ ಬಂದೇ ಬರುತ್ತೇವೆ ಅನ್ನೊ ಹುಮ್ಮಸ್ಸಿನಲ್ಲಿರುವ ಬಿಜೆಪಿಯಲ್ಲಿ ಈಗ ಎಲ್ಲವೂ ಸರಿಯಿಲ್ಲ. ನಾಯಕರ ನಡುವಿನ ತಿಕ್ಕಾಟಕ್ಕೆ ಕೇಸರಿ ಪಡಶಾಲೆ ತಲ್ಲಣಗೊಂಡಿದೆ. ರಾಜ್ಯ ಪದಾಧಿಕಾರಿಗಳ ನೇಮಕಕ್ಕೆ ವಿರೋಧ ವ್ಯಕ್ತವಾದಾಗಿನಿಂದ ಶುರುವಾದ ನಾಯಕರ ನಡುವಿನ ವೈಮನಸ್ಸು ಸದ್ಯಕ್ಕೆ ತಣ್ಣಗಾಗೋ ಲಕ್ಷಣ ಕಾಣ್ತಿಲ್ಲ. ಯಾವುದೇ ಕಾರಣಕ್ಕೂ ರಾಜ್ಯ ಪದಾಧಿಕಾರಿಗಳ ಪಟ್ಟಿ ಹಾಗೂ ಜಿಲ್ಲಾಧ್ಯಕ್ಷರ ಬದಲಾವಣೆಯಾಗೋದಿಲ್ಲ ಅಂತ ಸ್ಪಷ್ಟವಾಗಿ ತಿಳಿಸಿರುವ ಯಡಿಯೂರಪ್ಪ ವಿರುದ್ಧ ಕೆ.ಎಸ್.ಈಶ್ವರಪ್ಪ ತೊಡೆ ತಟ್ಟಿದ್ದಾರೆ.

   ಜಾತಿಯ ನೆರಳಿನಲ್ಲಿ ಪಕ್ಷದಲ್ಲಿನ ತಮ್ಮ ಪ್ರಾಬಲ್ಯವನ್ನು ಮುಂದುವರಿಸಿರುವ ಈಶ್ವರಪ್ಪರಿಗೆ ಟಾಂಗ್ ನೀಡುವ ಕೆಲಸವನ್ನು ಯಡಿಯೂರಪ್ಪ ಅವರು ಮಾಡ್ತಾನೆ ಇದ್ದಾರೆ. ಹೀಗಾಗಿ ರಾಜ್ಯ ಬಿಜೆಪಿ ಘಟಕ ಮನೆಯೊಂದು ಮೂರು ಬಾಗಿಲು ಅನ್ನೋ ಹಂತಕ್ಕೆ ಬಂದು ತಲುಪಿದೆ. ಪಕ್ಷದಲ್ಲಿನ ಅಸಮಾಧಾನ, ಅತೃಪ್ತಿಗಳನ್ನು ಸರಿಪಡಿಸಿ ಸಂಘಟನೆಯ ಮಂತ್ರ ಪಠಣ ಮಾಡಬೇಕು ಅನ್ನೋ ಸಲಹೆ ಪಕ್ಷದ ವೇದಿಕೆಯಲ್ಲಿ ವ್ಯಕ್ತವಾಗಿದೆ. ಇದಕ್ಕಾಗಿ ಮೊದಲು ಕೋರ್ ಕಮಿಟಿ ಸಭೆ ಕರೆಯಬೇಕು ಅನ್ನೋ ಒತ್ತಡಕ್ಕೆ ಕೊನೆಗೂ ಯಡಿಯೂರಪ್ಪ ಮಣಿದಿದ್ದಾರೆ. ಈ ಹಿನ್ನೆಲೆಯಲ್ಲಿ ನಾಳೆ ಪಕ್ಷದ ಮಹತ್ವದ ಕೋರ್ ಕಮಿಟಿ ಸಭೆ ನಡೆಯುತ್ತಿದ್ದು, ಪಕ್ಷದಲ್ಲಿನ ಇತ್ತೀಚಿನ ಎಲ್ಲಾ ಬೆಳವಣಿಗೆಗಳ ಕುರಿತು ಗಂಭೀರವಾದ ಚರ್ಚೆಯಾಗಲಿದೆ.

ನಾಳೆಯ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಚರ್ಚೆಯಾಗುವ ವಿಚಾರಗಳ ಸಹ ಕುತೂಹಲ ಮೂಡಿಸಿದ್ದು, ಸಹಜವಾಗಿಯೇ ಪಕ್ಷದಲ್ಲಿ ಅಸಮಾಧಾನ ಹುಟ್ಟು ಹಾಕಿರುವ ವಿಚಾರಗಳೇ ಪ್ರಧಾನವಾಗಿ ಪ್ರಸ್ತಾಪವಾಗಲಿದೆ.ರಾಜ್ಯ ಪದಾಧಿಕಾರಿಗಳು ಮತ್ತು ಜಿಲ್ಲಾಧ್ಯಕ್ಷರ ನೇಮಕದ ಪಟ್ಟಿ ಪರಿಷ್ಕರಣೆ ಮಾಡಬೇಕೆಂಬ ಆಗ್ರಹ ಪ್ರಬಲವಾಗಿ ವ್ಯಕ್ತವಾಗಲಿದೆ. ಯಡಿಯೂರಪ್ಪ ಅವರ ಆಪ್ತರಿಗೆ ಹೆಚ್ಚು ಆದ್ಯತೆ ಸಿಕ್ಕಿದೆ ಅನ್ನೋ ಕಾರಣಕ್ಕೆ ಮುನಿಸಿಕೊಂಡಿರುವ ಈಶ್ವರಪ್ಪ ಅವರು ಇದೇ ವಿಚಾರವನ್ನು ಪ್ರಮುಖವಾಗಿ ಪ್ರಸ್ತಾಪ ಮಾಡಲಿದ್ದು, ಪಟ್ಟಿ ಪರಿಷ್ಕರಣೆಗೆ ಬೇಡಿಕೆ ಇಡಲಿದ್ದಾರೆ. ಪಕ್ಷದಲ್ಲಿ ಸಂಸದೆ ಹಾಗೂ ಪ್ರಧಾನ ಕಾರ್ಯದರ್ಶಿ ಶೋಭಾ ಕರಂದ್ಲಾಜೆ ಅವರ ಹಸ್ತಕ್ಷೇಪಕ್ಕೆ ಬ್ರೇಕ್ ಹಾಕಬೇಕು ವಿಚಾರವೂ ಪ್ರಸ್ತಾಪವಾಗಲಿದೆ. ಇದೇ ವೇಳೆ ಯಡಿಯೂರಪ್ಪ ವಿರುದ್ಧ ಮುನಿಸಿಕೊಂಡು ಜಾತಿ ಸಂಘಟನೆಯ ಮೂಲಕ ಪ್ರಭಾವ ಹೆಚ್ಚಿಸಿಕೊಳ್ಳಲು ಮುಂದಾಗಿರುವ ಈಶ್ವರಪ್ಪ ಅವರ ಕ್ರಮವೂ ಸಹ ಕೋರ್ ಕಮಿಟಿ ಸಭೆಯಲ್ಲಿ ಚರ್ಚೆಯಾಗಲಿದೆ.

   ಮಹದಾಯಿ ಹೋರಾಟದ ವಿಚಾರದಲ್ಲಿ ಪಕ್ಷದ ಇಮೇಜ್ ಗೆ ಧಕ್ಕೆಯಾಗುವುದನ್ನು ತಡೆಯಲು ಕೈಗೊಳ್ಳಬೇಕಿರುವ ವಿಚಾರವೂ ಪ್ರಸ್ತಾಪವಾಗಲಿದೆ. ಬಿಬಿಎಂಪಿ ಆಡಳಿತವನ್ನು ಹಿಡಿಯುವ ನಿಟ್ಟಿನಲ್ಲಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳುವ ಸಾಧಕಭಾದಕಗಳ ಕುರಿತು ಸಹ ಕೋರ್ ಕಮಿಟಿಯಲ್ಲಿ ಚರ್ಚೆಯಾಗಲಿದೆ. ರಾಜ್ಯ ಸರಕಾರದ ವಿರುದ್ಧ ಹೋರಾಟ ರೂಪಿಸುವ ನಿಟ್ಟಿನಲ್ಲಿ ವಿಭಾಗಾವಾರು ಕಾರ್ಯಕರ್ತರ ಸಮಾವೇಶ ಮಾಡುವುದು. ಕೇಂದ್ರದ ಜನಪ್ರಿಯ ಯೋಜನೆಗಳ ಕುರಿತು ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಜಾರಿ ಮಾಡುವ ಬಗ್ಗೆ ಮತ್ತು ಯಡಿಯೂರಪ್ಪ ಅವರು ರಾಜ್ಯಾಧ್ಯಕ್ಷರಾದ ಬಳಿಕ ನಡೆದ ಪಕ್ಷದ ಚಟುವಟಿಕೆಗಳ ಕುರಿತು ನಡೆದ ಬೆಳವಣಿಗೆಗಳ ಕುರಿತು ನಾಳೆಯ ಕೋರ್ ಕಮಿಟಿ ಸಭೆಯಲ್ಲಿ ಚರ್ಚೆಯಾಗುವ ಸಾಧ್ಯತೆಗಳಿವೆ.   ಹಲವು ರೀತಿಯಲ್ಲಿ ಕುತೂಹಲಕ್ಕೆ ಕಾರಣವಾಗಿರುವ ಬಿಜೆಪಿ ಕೋರ್ ಕಮಿಟಿ ಸಭೆ ಪಕ್ಷದಲ್ಲಿ ಭುಗಿಲೆದ್ದಿರುವ ಅಸಮಾಧಾನಕ್ಕೆ ಪರಿಹಾರ ನೀಡುತ್ತಾ ಅನ್ನೋದನ್ನು ಕಾದು ನೋಡಬೇಕಿದೆ.

9 thoughts on “ಕೇಸರಿ ಪಡೆಯ ಕಲಹ ತಪ್ಪಿಸಲು ಕೋರ್ ಕಮಿಟಿ ಸಭೆ…..!

 • October 18, 2017 at 12:20 PM
  Permalink

  Hi to all, it’s really a good for me to pay a quick visit this site, it includes priceless Information.|

 • October 18, 2017 at 2:06 PM
  Permalink

  I don’t know if it’s just me or if everyone else encountering problems with your website. It looks like some of the written text within your posts are running off the screen. Can someone else please provide feedback and let me know if this is happening to them too? This could be a problem with my web browser because I’ve had this happen previously. Kudos|

 • October 18, 2017 at 3:50 PM
  Permalink

  My brother suggested I might like this website. He was totally right. This post truly made my day. You can not imagine just how much time I had spent for this info! Thanks!|

 • October 20, 2017 at 6:10 PM
  Permalink

  We’re a group of volunteers and opening a new scheme in our community. Your web site provided us with valuable information to work on. You’ve done an impressive job and our whole community will be grateful to you.|

 • October 21, 2017 at 12:13 AM
  Permalink

  Hi there, just wanted to say, I liked this post. It was helpful. Keep on posting!|

 • October 21, 2017 at 1:31 AM
  Permalink

  After I originally left a comment I appear to have clicked on the -Notify me when new
  comments are added- checkbox and from now on each time a comment is added I receive four emails with the exact same
  comment. Is there a way you can remove me from that service?

  Thanks a lot!

 • October 21, 2017 at 1:49 AM
  Permalink

  Oh my goodness! Amazing article dude! Thank you, However I
  am having issues with your RSS. I don’t know the reason why I cannot join it.
  Is there anybody having the same RSS issues? Anybody who knows the
  solution will you kindly respond? Thanx!!

 • October 24, 2017 at 2:38 PM
  Permalink

  I want to to thank you for this very good read!!
  I absolutely enjoyed every little bit of it. I’ve got you book-marked to check out new things you post…

 • October 25, 2017 at 10:38 AM
  Permalink

  Fastidious replies in return of this matter with solid arguments and describing
  everything on the topic of that.

Comments are closed.

Social Media Auto Publish Powered By : XYZScripts.com