ಭಾರತೀಯ ಬಾಕ್ಸರ್ ಗಳಿಗೆ ನಿಷೇಧದ ಭೀತಿ

ಮೊದಲ ಸುತ್ತಿನಲ್ಲೇ ಭರ್ಜರಿ ಪ್ರದರ್ಶನ ನೀಡುವ ಮೂಲಕ ಪದಕದ ಭರವಸೆ ಮೂಡಿಸಿದ್ದ ಭಾರತೀಯ ಬಾಕ್ಸರ್‌ಗಳು ಇದೀಗ ರಿಯೊ ಒಲಿಂಪಿಕ್ಸ್‌ನಿಂದ ನಿಷೇಧಕ್ಕೆ ಒಳಗಾಗುವ ಭೀತಿಯಲ್ಲಿದ್ದಾರೆ.ಭಾರತೀಯ ಬಾಕ್ಸರ್‌ಗಳು ಸ್ಪರ್ಧೆಯ ಜೆರ್ಸಿಯ ಹಿಂದೆ ಭಾರತದ ಹೆಸರು ಮುದ್ರಿಸಿಕೊಂಡಿರುವ ಕಾರಣ ಒಲಿಂಪಿಕ್ಸ್ ಸ್ಪರ್ಧೆಯಿಂದ ಹೊರಬೀಳುವ ಅಪಾಯದಲ್ಲಿದ್ದಾರೆ. ಆದರೆ ಭಾರತದ ಬಾಕ್ಸರ್‌ಗಳ ತಂಡ ಒಲಿಂಪಿಕ್ಸ್‌ನಲ್ಲಿ ಇದೆಲ್ಲಾ ಮಾಮೂಲು. ಗೊಂದಲ ಶೀಘ್ರ ಬಗೆಹರಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದೆ.

rio olympics
ಭಾರತದ ಬಾಕ್ಸರ್‌ಗಳು ಬುಧವಾರ ಒಲಿಂಪಿಕ್ಸ್‌ನಲ್ಲಿ ಅಭಿಯಾನ ಆರಂಭಿಸಿತ್ತು. ಮನೋಜ್ ಕುಮಾರ್ ೬೪ ಕೆಜಿ ವಿಭಾಗದಲ್ಲಿ ಹಾಗೂ ವಿಕಾಸ್ ಕೃಷ್ಣನ್ ೭೫ ಕೆಜಿ ವಿಭಾಗದ ಮೊದಲ ಸುತ್ತಿನಲ್ಲಿ ಭರ್ಜರಿ ಜಯದೊಂದಿಗೆ ಶುಭಾರಂಭ ಮಾಡಿದ್ದರು. ಗುರುವಾರ ರಾತ್ರಿ ಶಿವ ಥಾಪಾ ಕಣಕ್ಕಿಳಿಯಲಿದ್ದಾರೆ.ಭಾರತದ ಬಾಕ್ಸಿಂಗ್ ಸಂಸ್ಥೆ ಅಮಾನತುಗೊಂಡಿರುವ ಕಾರಣ ಭಾರತದ ಸ್ಪರ್ಧಿಗಳು ‘ಭಾರತ’ ಹೆಸರಿನಲ್ಲಿ ಸ್ಪರ್ಧಿಸುವಂತಿಲ್ಲ. ಆದ್ದರಿಂದ ಬಾಕ್ಸರ್‌ಗಳು ತಮ್ಮ ಜೆರ್ಸಿಯಲ್ಲಿ ‘ಭಾರತ’ ಹೆಸರು ಹಾಕಿಕೊಳ್ಳುವಂತಿಲ್ಲ ಎಂದು ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಂಸ್ಥೆ ಎಚ್ಚರಿಕೆ ನೀಡಿದೆ. ಒಂದು ವೇಳೆ ಬಾಕ್ಸರ್‌ಗಳು ತಮ್ಮ ಜೆರ್ಸಿ ಬದಲಿಸಿ ಐಒಸಿ ಹೆಸರಿನಡಿ ಸ್ಪರ್ಧಿಸದಿದ್ದರೆ ಟೂರ್ನಿಯಿಂದಲೇ ಅಮಾನತುಗೊಳ್ಳಬೇಕಾಗಬಹುದು ಎಂದು ಆತಂಕ ವ್ಯಕ್ತಪಡಿಸಲಾಗಿದೆ.
ಭಾರತದ ಬಾಕ್ಸಿಂಗ್ ತಂಡದಲ್ಲಿ ದಿಢೀರನೆ ಉದ್ಘವಿಸಿರುವ ಈ ಗೊಂದಲ ಬಾಕ್ಸರ್‌ಗಳ ಪ್ರದರ್ಶನದ ಮೇಲೆ ಒತ್ತಡ ಬೀಳಬಹುದು ಎಂದು ಭಾವಿಸಲಾಗಿದೆ.
ಇದೇ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಭಾರತ ಬಾಕ್ಸಿಂಗ್ ತಂಡದ ಕೋಚ್ ಗುರ್‌ಬಕ್ಸ್ ಸಿಂಗ್ ಸಂಧು, ಒಲಿಂಪಿಕ್ಸ್‌ನಂತ ಕ್ರೀಡಾಕೂಟದಲ್ಲಿ ಇಂತಹ ಗೊಂದಲಗಳು ಸಾಮಾನ್ಯ. ಇದು ನಮ್ಮ ದೇಶದ್ದು ಮಾತ್ರವಲ್ಲ ಬಹುತೇಕ ದೇಶಗಳು ಈ ಸಮಸ್ಯೆ ಎದುರಿಸುತ್ತಿವೆ. ನಮಗೆ ಹೊಸ ಕಿಟ್ ಕೂಡ ನೀಡಲಾಗಿದೆ. ಐಒಸಿ ಎಚ್ಚರಿಕೆ ನೀಡಿದೆ ಹೊರತು ಅಮಾನತು ಮಾಡ್ತೀವಿ ಎಂದು ಹೇಳಿಲ್ಲ. ಶೀಘ್ರವೇ ಸಮಸ್ಯೆ ಬಗೆಹರಿಯಲಿದೆ. ಆದರೆ ಬಾಕ್ಸರ್‌ಗಳು ಈ ಬಗ್ಗೆ ಗಮನ ಹರಿಸದೇ ಪ್ರದರ್ಶನದತ್ತ ಗಮನ ಹರಿಸಲು ಸೂಚಿಸಲಾಗಿದೆ ಎಂದರು.ಬುಧವಾರ ನಡೆದ ಪಂದ್ಯದಲ್ಲಿ ಮನೋಜ್ ಕುಮಾರ್ ಅದ್ಭುತ ಪ್ರದರ್ಶನದ ಮೂಲಕ ಶುಭಾರಂಭ ಮಾಡಿದ್ದರು. ಎರಡು ಬಾರಿಯ ಒಲಿಂಪಿಕ್ ಕಂಚಿನ ಪದಕ ವಿಜೇತ ಲಿಥುನಿಯಾದ ಇವಾಲ್ಡಾಸ್ ಪೆಟ್ರುಸ್ಕಾಸ್ ಅವರನ್ನು ೨೯-೨೮, ೨೯-೨೮, ೨೮-೨೯ ಅಂಕಗಳಿಂದ ಸೋಲಿಸಿ ಗಮನ ಸೆಳೆದರು.

Social Media Auto Publish Powered By : XYZScripts.com