ಭಾರತದ ಫೇವರೇಟ್ ಬಾಕ್ಸರ್ ಶಿವ ಥಾಪಾಗೆ ಸೋಲು

ಭಾರತದ ಹೆಸರಾಂತ ಬಾಕ್ಸರ್ ಶಿವಾ ಥಾಪಾ ೫೬ ಕೆ.ಜಿ ವಿಭಾಗದಲ್ಲಿ ಮೊದಲ ಸುತ್ತಿನಲ್ಲಿ ಸೋಲು ಅನುಭವಿಸಿದ್ದು, ೨೦೧೬ ಒಲಿಂಪಿಕ್ಸ್ ಕ್ರೀಡಾ ಕೂಟದಲ್ಲಿ ತಮ್ಮ ಅಭಿಯಾನವನ್ನು ಪೂರ್ಣ ಗೊಳಿಸಿದ್ದಾರೆ.

Boxer Shiva Thapa at a practice session, a day before leave for Almaty, Kazakhstan, on Friday for the World Boxing Championship, in New Delhi on Oct 10th 2013. Express photo by RAVI KANOJIA.

ಗುರುವಾರ ನಡೆದ ಪಂದ್ಯದಲ್ಲಿ ಶಿವಾ ಆಡಿದ ಮೂರು ಸೆಟ್‌ಗಳಲ್ಲಿ ಅಂಕಗಳನ್ನು ಕಲೆ ಹಾಕುವಲ್ಲಿ ಹಿಂದೆ ಬಿದ್ದರು ಪರಿಣಾಮ, ನಿರ್ಣಾಯಕರ ಮನ ಗೆಲ್ಲುವಲ್ಲಿ ವಿಫಲರಾದರು. ಶಿವಾ ೦-೩ ಸೆಟ್‌ಗಳಿಂದ ಕ್ಯೂಬಾದ ರರ್ಮೀಜ್ ರೊಬೆಸೆ ವಿರುದ್ಧ ಆಘಾತ ಅನುಭವಿಸಿದರು. ಮೊದಲ ಸುತ್ತಿನಿಂದಲೂ ಭಾರತದ ಆಟಗಾರರ ಮೇಲೆ ಒತ್ತಡವನ್ನು ಹೇರಿದ ಕ್ಯೂಬಾ ಆಟಗಾರ ಅಂಕಗಳ ಬೇಟೆಯನ್ನು ನಡೆಸಿದರು. ಶಿವಾ ೨೫-೩೦ ಅಂಕಗಳಿಂದ ಮೊದಲ ಸೆಟ್‌ನಲ್ಲಿ ಹಿನ್ನಡೆ ಅನುಭವಿಸಿದರು. ಎರಡನೇ ಸೆಟ್‌ನಲ್ಲಿ ಉತ್ತಮ ಆಟದ ಪ್ರದರ್ಶನವನ್ನು ನೀಡಿ ಅಂಕಗಳಿಕೆಯಲ್ಲಿ ಚೇತರಿಕೆ ಕಾಣುವ ಶಿವಾ ಆಸೆ ಫಲಿಸಲಿಲ್ಲ. ೨೭-೩೦ ಅಂಕಗಳಿಂದ ಈ ಸೆಟ್‌ನಲ್ಲೂ ಹಿನ್ನಡೆ ಅನುಭವಿಸಿದರು.
ಮೂರನೇ ಹಾಗೂ ನಿರ್ಣಾಯಕ ಸೆಟ್‌ನಲ್ಲಿ ಒತ್ತಡವನ್ನು ಮೆಟ್ಟಿನಿಲ್ಲುವಲ್ಲಿ ವಿಫಲರಾದ ಅವರು ಎದುರಾಳಿ ಆಟಗಾರ ಹಾಕಿದ ಬಲೆಗೆ ಬಿದ್ದರು. ಅಲ್ಲದೆ ಟೂರ್ನಿಯಿಂದ ಹೊರ ನಡೆದರು.

Comments are closed.