ಸಾರಿಗೆ ನೌಕರರ ಮುಷ್ಕರಕ್ಕೆ ಸರ್ಕಾರದ ಎಸ್ಮಾ ಮೂಗುದಾರ..?

bus bandh 2ವೇತನ ಹೆಚ್ಚಳಕ್ಕೆ ಆಗ್ರಹಿಸಿ ಎರಡು ದಿನಗಳಿಂದ ಬಸ್ ಬಂದ್ ನಡೆಸಿ ಸಾರಿಗೆ ನೌಕರರು ನಡೆಸುತ್ತಿರುವ ಮುಷ್ಕರವನ್ನ ಹತ್ತಿಕ್ಕಲು ಸರ್ಕಾರ ಎಸ್ಮಾ ಕಾಯ್ದೆ ಜಾರಿಗೆ ತರೋ ಬೆದರಿಕೆವೊಡ್ಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತುಕತೆ ಮೂಲಕ ಎಲ್ಲಾ ಸಮಸ್ಯೆ ಬಗೆಹರಿಸಿಕೊಳ್ಳಲಾಗುತ್ತದೆ ಅಂತ ಹೇಳಿದ್ದಾರೆ. ಆದರೆ ಒಂದು ವೇಳೆ ಎಸ್ಮಾ ಕಾಯ್ದೆ ಜಾರಿಯಾದ್ರೆ ಆಗೋ ಪರಿಣಾಮಗಳೇನು..?

ಎಸ್ಮಾ ಎಂದರೇನು?
ಎಸ್ಮಾ ಎಂದರೆ Essential Services Maintenance Act ಕನ್ನಡದಲ್ಲಿ ಅಗತ್ಯ  ಸೇವೆ ನಿರ್ವಹಣೆ ಕಾಯಿದೆ ಎಂದು ಕರೆಯಬಹುದು.

ಸರ್ಕಾರಿ ನೌಕರರ ಮೇಲೆ ಅಂಕುಶಹಾಕುವ ಕಾಯಿದೆ 1968 ರಿಂದ ಜಾರಿಯಲ್ಲಿದೆ.

C M Siddaramaiah addressing during the Joint session at Vidhana Soudha in Bangalore on Thursday, January 23, 2014.

ಜಮ್ಮು ಕಾಶ್ಮೀರದ ಕೆಲ ಭಾಗಕ್ಕೆ ವಿನಾಯಿತಿ ನೀಡಲಾಗಿದೆ.
ಕರ್ನಾಟಕದಲ್ಲಿ 1994ರಲ್ಲಿ ಈ ಕಾನೂನಿನ ಮೊದಲ ಉಲ್ಲೇಖ ಆಯಿತು.

ಜೂನ್ 2013 ರಿಂದ ರಾಜ್ಯದಲ್ಲಿ ಕಾನೂನು ಬಳಕೆಗೆ ಅವಕಾಶ ಸಿಕ್ಕಿತು.

2015 ರಲ್ಲಿ ಕೆಲ ತಿದ್ದುಪಡಿ ಮಾಡಲಾಯಿತು

ಯಾವಾಗ ಜಾರಿ ಮಾಡಲಾಗುತ್ತದೆ?
ಸರ್ಕಾರಿ ನೌಕರರು ಸಾಮೂಹಿಕ ಪ್ರತಿಭಟನೆಗೆ ಮುಂದಾಗಿ ಪರಿಸ್ಥಿತಿ ಸಂಪೂರ್ಣ ಕೈ ಮೀರಿ ಹೋಗುತ್ತಿದೆ ಎಂಬ ಸಂದರ್ಭದಲ್ಲಿ ಸರ್ಕಾರ ಎಸ್ಮಾ ಜಾರಿ ಮಾಡಲು ಮುಂದಾಗುತ್ತದೆ. ಮೂಲ ಸೌಕರ್ಯಗಳಾದ ಆಹಾರ, ಭದ್ರತೆ, ಶಿಕ್ಷಣ, ಆರೋಗ್ಯ, ಪೊಲೀಸ್ ವ್ಯವಸ್ಥೆಗೆ ಭಂಗ ಬರುವ ಸಂಭವ ಹೆಚ್ಚಿದೆ ಎಂದಾಗ ಸರ್ಕಾರ ಎಸ್ಮಾ ಜಾರಿಗೆ ಮುಂದಾಗುತ್ತದೆ.bus bandh 1

ಎಸ್ಮಾ ಜಾರಿ ಪರಿಣಾಮ ಏನು?
ಎಸ್ಮಾ ಎಂದರೆ ಕಡ್ಡಾಯ ಕೆಲಸ ಎಂಬ ಅರ್ಥ ಬರುತ್ತದೆ. ಸಂವಿಧಾನ ಅನುಸೂಚಿ 7ರಲ್ಲಿನ 2ನೇ ಪಟ್ಟಿಯಲ್ಲಿರುವ ‘ಸಾರ್ವಜನಿಕ ಸುವ್ಯವಸ್ಥೆ’ ಮತ್ತು ‘ಪೊಲೀಸ್’ ಸಂಬಂಧಿಸಿದ ಎಲ್ಲಾ ಸೇವೆಗಳ ಕುರಿತು ರಾಜ್ಯ ಶಾಸಕಾಂಗವು ಕಾನೂನು ರೂಪಿಸುವ ಅಧಿಕಾರ ಹೊಂದಿರುತ್ತದೆ. ಎಸ್ಮಾ ಕಾಯ್ದೆ ಉಲ್ಲಂಘನೆ ಮಾಡಿದರೆ ವಾರಂಟ್ ಇಲ್ಲದೇ ಬಂಧನ ಮಾಡಬಹುದು. ಅಲ್ಲದೆ ಆರು ತಿಂಗಳು ಜೈಲು ವಾಸ ಸಾಧ್ಯತೆಯೂ ಇರುತ್ತದೆ.
ಎಸ್ಮಾ ಜಾರಿಯಾದ ಮೇಲೂ ಉದ್ಯೋಗಿ ಪ್ರತಿಭಟನೆಯಲ್ಲಿ ಪಾಲ್ಗೊಂಡರೆ ಆತನ ವೇತನ, ಭತ್ಯೆ, ಬಡ್ತಿ ಮತ್ತು ಇತರ ಸವಲತ್ತುಗಳ ಮೇಲೆ ಪರಿಣಾಮ ಉಂಟಾಗುತ್ತದೆ. ಸರ್ಕಾರ ಎಸ್ಮಾ ಜಾರಿ ಮಾಡಿದೆ ಒಂದು ರೀತಿಯಲ್ಲಿ ಕಟ್ಟಪ್ಪಣೆ ಮಾಡಿದೆ ಎಂದೇ ಅರ್ಥ.

Comments are closed.