ಕಬಾಲಿ ಒಂದು ದಿನದ ಗಳಿಕೆ 250 ಕೋಟಿ ನಿಜವೇ ?

massive-opening-kabali
ಸೂಪರ್ ಸ್ಟಾರ್ ರಜಿನಿಕಾಂತ್‌ರ ಮೋಸ್ಟ್ ಎಕ್ಸ್ ಪೆಕ್ಟೆಡ್ ಸಿನಿಮಾ ಕಬಾಲಿ ಭಾರೀ ಗದ್ದಲ ಮಾಡುತ್ತಲೇ ಥಿಯೇಟರ್‌ಗಳಿಗೆ ಎಂಟ್ರಿ ಕೊಟ್ಟಿದೆ.  ಇದೇ ಮೊದಲ ಬಾರಿಗೆ ಭಾರತ ಸೇರಿದಂತೆ ವಿದೇಶದಲ್ಲಿ 12000 ಸ್ಕ್ರೀನ್ ಗಳಲ್ಲಿ ಈ ಸಿನಿಮಾ ಪ್ರದರ್ಶನ ಕಾಣುತ್ತಿದೆ. ಅಲ್ ಮೋಸ್ಟ್ ಎಲ್ಲಾ ಕಡೆಯಲ್ಲೂ  ಹೌಸ್‌ಫುಲ್ ಪ್ರದರ್ಶನ ಕಾಣ್ತಿರೋ ಚಿತ್ರ ಒಂದೇ ದಿನದಲ್ಲಿ ಒಂದಿಷ್ಟು ರೆಕಾರ್ಡ್‌ಗಳನ್ನ ಮುರಿದು ಹಾಕಿದೆ.

ಸೂಪರ್ ಸ್ಟಾರ್ ‘ಕಬಾಲಿ’ ಚಿತ್ರ ವಿಶ್ವದಾದ್ಯಂತ ದೊಡ್ಡ ಚಿತ್ರಮಂದಿರದಲ್ಲೇ ತೆರೆಕಂಡಿದೆ.  12000 ಥಿಯೇಟರ್‌ಗಳಲ್ಲಿ ರಿಲೀಸ್ ಆಗಿರೋ ಮೊದಲ ದಕ್ಷಿಣ ಭಾರತದ ಚಿತ್ರವಿದು. ವಿಶೇಷ ಅಂದ್ರೆ,  ಮೊದಲ ದಿನವೇ ಶೇ.೯೦ರಷ್ಟು ಚಿತ್ರಮಂದಿರಗಳು ತುಂಬಿದ ಪ್ರದರ್ಶನ ಕಾಣುತ್ತಿವೆ.  ಹೀಗಾಗಿ ಕಬಾಲಿ ಗಲ್ಲಾ ಪೆಟ್ಟಿಗೆಯನ್ನ ಮೊದಲ ದಿನದಿಂದ್ಲೇ ದೋಚುವುದಕ್ಕೆ ಶುರುಮಾಡಿದೆ.

ಕೆಲವು ಅಂಕಿ ಅಂಶಗಳಲ್ಲಿ ದಾಖಲಾದ ಸಂಖ್ಯೆಗಳನ್ನ ನೋಡಿದರೆ, ಇದು ತಲೈವಾ  ಕೆರಿಯರ್‌ನಲ್ಲಿ ಮೊದಲ ದಿನವೇ ಅತೀ ಹೆಚ್ಚು ಗಳಿಕೆ ಕಂಡ ಸಿನಿಮಾ. ಫಸ್ಟ್ ಡೇ ಹಾಗು ಪ್ರೀಮಿಯರ್ ಶೋಗಳ ಗಳಿಕೆಯನ್ನ ಸೇರಿಸಿದಾಗ ಸಿಕ್ಕ ಒಟ್ಟು ಮೊತ್ತ ಸುಮಾರು ೭೧.೭೩ ಕೋಟಿ. ಇದು ಇತ್ತೀಚೆಗೆ ತೆರೆಕಂಡ ಸಲ್ಮಾನ್ ಖಾನ್‌ರ ಸುಲ್ತಾನ್, ಧೂಮ್ ಥ್ರಿ ಚಿತ್ರಗಳ ಮೊದಲ ದಿನದ ಗಳಿಕೆ ದಾಖಲೆಯನ್ನ ಸರಿಗಟ್ಟಿದೆ. ಹಾಗಿದ್ರೆ ಪ್ರದೇಶವಾರು ಕಬಾಲಿ ಗಳಿಸಿಕೆಯ ಡೀಟೈಲ್ಸ್ ಹೀಗಿದೆ ನೋಡಿ..
Kabalis-Record-
ಕಬಾಲಿಯ ಕಲೆಕ್ಷನ್- Day 1
ಏರಿಯಾ                              ಕಲೆಕ್ಷನ್ ( ಅಂದಾಜು )
ತಮಿಳುನಾಡು                             21.5 ಕೋಟಿ
ಆಂಧ್ರ ಮತ್ತು ತೆಲಂಗಾಣ               13.5 ಕೋಟಿ
ಕೇರಳ                                       04.2 ಕೋಟಿ
ಕರ್ನಾಟಕ                                  5.10 ಕೋಟಿ
ಅಮೇರಿಕಾ-ಕೆನಾಡ                      12.93 ಕೋಟಿ
ರೆಸ್ಟ್ ಆಫ್ ಇಂಡಿಯಾ                   04.5 ಕೋಟಿ(TN,AP&TG,KL,KA  ಹೊರತು ಪಡಿಸಿ)
ರೆಸ್ಟ್ ಆಫ್ ದಿ ವರ್ಲ್ಡ್                   10 ಕೋಟಿ(USA, CANADA ಹೊರತು ಪಡಿಸಿ)
ಈ ಏರಿಯಾಗಳಲ್ಲಿ ರಜಿನಿಕಾಂತ್‌ರ ಕಬಾಲಿ ರಿಪೋರ್ಟ್ ಸೂಪರ್ ಆಗಿದೆ.  ಆದ್ರೆ ವಲ್ಡ್ ವೈಡ್ ಸುಮಾರು ೩೦ ದೇಶಗಳಲ್ಲಿ ಈ ಚಿತ್ರ ತೆರೆಕಂಡಿರೋದ್ರಿಂದ, ಗಣನೆಗೆ ಸಿಕ್ಕಿರೋದು ಅಮೇರಿಕಾ-ಕೆನಾಡ ಮಾರ್ಕೇಟ್ ಮಾತ್ರ.  ಇನ್ನು ರಜಿನಿ ಸಿನಿಮಾಗೆ ದುಬೈ, ಫ್ರಾನ್ಸ್, ಚೀನಾ, ಜಪಾನ್ ಸೇರಿದಂತೆ ಹಲವೆಡೆ ದೊಡ್ಡ ಮಾರ್ಕೇಟ್ ಇದೆ. ಇಲ್ಲಿನ ಗಳಿಕೆಯ ಪಟ್ಟಿ ಇನ್ನೂ ಹೊರಬೀಳ್ಬೇಕಿದೆ. ಇರಡನೇ ದಿನವೂ ಕಬಾಲಿ ಕಲೆಕ್ಷನ್ ಜೋರಾಗೇ ಇದೆ…

ಆದ್ರೆ ಈ ಚಿತ್ರದ ನಿರ್ಮಾಪಕ ಕಲೈಪುಲಿ ತನು, ಚಿತ್ರದ ಫಸ್ಟ್ ಡೇ ಕಲೆಕ್ಷನ್ 250 ಕೋಟಿ ಅಂತ ಹೇಳಿಕೆ ಕೊಟ್ಟಿರೋದು ಅಚ್ಚರಿ ಮೂಡಿಸಿದೆ.. ಯಾಕಂದ್ರೆ ಅದ್ಯಾವ ರೀತಿಯಲ್ಲಿ ಲೆಕ್ಕ ಹಾಕಿದ್ರೂ, ಇಷ್ಟೊಂದು ದೊಡ್ಡ ಮೊತ್ತ ಗಳಿಸೋದು ಕಷ್ಟ ಸಾಧ್ಯ. ಅಲ್ಲದೆ ಚಿತ್ರ ತೆರೆಕಂಡ ದಿನವೇ ತಮಿಳುನಾಡುವೊಂದರಲ್ಲೇ ನೂರು ಕೋಟಿ ಗಳಿಸೋದು ಅಸಾಧ್ಯ. ಹೀಗಿದ್ದರೂ ನಿರ್ಮಾಪಕ ಈ ಅಂಕಿ-ಅಂಶಗಳನ್ನ ನಂಬಲೇ ಬೇಕಾದ ಅನಿವಾರ್ಯತೆ ಎದುರಾಗಿದೆ.

ಹೀಗಾಗಿ ಸಿಕ್ಕಿರೋ ಮಾಹಿತಿ ಪ್ರಕಾರ ಕಬಾಲಿಯ ಗಳಿಕೆ ಮೊದಲ ದಿನವೇ ಎಪ್ಪತ್ತೊಂದು ಕೋಟಿ ದಾಟಿದೆ. ಇನ್ನೂ ವಿಶ್ವದಲ್ಲಿ ತೆರೆಕಂಡಿರೋ ಎಲ್ಲಾ ಚಿತ್ರಮಂದಿರಗಳ ಗಳಿಕೆಯ ಸರಿಯಾದ ಅಂಕಿ ಅಂಶಗಳು ಸಿಕ್ಕಲ್ಲಿ, 250 ಕೋಟಿಯ ಲೆಕ್ಕ ಸಿಗಬಹುದು.  ಒಂದು ವೇಳೆ ನಿರ್ಮಾಪಕರ ಕ್ಯಾಲ್ಕುಲೇಷನ್ ಸರಿಯಾಗಿದ್ರೆ, ರಜಿನಿಯ ಸೂಪರ್ ಪವರ್ ಕೇವಲ ಜೋಕ್ಸ್ ಗಳಲ್ಲಷ್ಟೇ ಅಲ್ಲ. ಅಸಲಿ ಜೀವನದಲ್ಲೂ ಇದೆ ಅಂತ ಸಾಬೀತಾಗುತ್ತೆ…

 

Comments are closed.

Social Media Auto Publish Powered By : XYZScripts.com