ಭಾನುವಾರವೂ ನಡೆಯಿತು ಬಿಡಿಎ ಅಧಿಕಾರಿಗಳ ಸಭೆ…!

ಸಾಮಾನ್ಯವಾಗಿ ಅಲ್ಲಿರೋ ಸರ್ಕಾರಿ ಅಧಿಕಾರಿಗಳು ಕೆಲಸ ಮಾಡೋದಿಲ್ಲ ಅನ್ನೋ ಮಾತಿದೆ. ಮಾಮೂಲಿ ಟೈಮ್‌ನಲ್ಲೇ ಕೆಲಸ ಮಾಡದಿದ್ದವರೂ, ಇವತ್ತು ಭಾನುವಾರ ಆದ್ರೂ ಕೆಲಸ ಮಾಡಿದ್ದಾರೆ. ಬಿಡಿಎ ಅಧಿಕಾರಿಗಳ ಸಂಡೆ ವರ್ಕೀಂಗ್ ಸ್ಟೈಲ್ ಕುರಿತ ಸ್ಟೋರಿ ಇದು…

BDA logo

 2030ಕ್ಕೆ ಸಮಗ್ರ ಅಭಿವೃದ್ಧಿ ಯೋಜನೆಗೆ ಬಿಡಿಎ ಪ್ಲಾನ್‌

ಹೌದು, ಇವತ್ತು ಭಾನುವಾರ ಸರ್ಕಾರಿ ಕಚೇರಿಗಳಿಗೆ ರಜೆ. ಆದ್ರೆ ಬಿಡಿಎ ಅಧಿಕಾರಿಗಳು ಮಾತ್ರ ಎಂದಿನಂತೆ ಕಚೇರಿಗೆ ಬಂದಿದ್ರು. ಇದಕ್ಕೆ ಕಾರಣ 2030ರ ನಗರದ ಸಮಗ್ರ ಅಭಿವೃದ್ದಿ ಯೋಜನೆ. ಅಂದ್ಹಾಗೆ, ಈ ಸಂಬಂಧ ಚರ್ಚಿಸಲು ಬಿಡಿಎ ಆಯುಕ್ತ ಡಾ.ರಾಜಕುಮಾರ್ ಖತ್ರಿ, ಬಿಡಿಎ ಇಂಜಿನೀಯರಿಂಗ್ ವಿಭಾಗ, ಕಾನೂನು ವಿಭಾಗ, ಯೋಜನಾ ವಿಭಾಗ ಮತ್ತು ನಗರ ಯೋಜನಾ ವಿಭಾಗ ಸೇರಿದಂತೆ ಅನೇಕ ವಿಭಾಗಗಳ ಸಭೆ ಕರೆಯಲಾಗಿತ್ತು. ಸಭೆಯಲ್ಲಿ 2030 ಕ್ಕೆ ಸಮಗ್ರ ಅಭಿವೃದ್ದಿ ಯೋಜನೆ ರೂಪಿಸೋ ನಿಟ್ಟಿನಲ್ಲಿ ಏನೆಲ್ಲ ಕ್ರಮ ಕೈಗೊಳ್ಳಬೇಕು ಎಂಬುದರ ಬಗ್ಗೆ ಚರ್ಚೆ ನಡೆಸಲಾಯ್ತು. ಇನ್ನು ಕರ್ನಾಟಕ ಟೌನ್ ಪ್ಲಾನಿಂಗ್ ಌಂಡ್ ಕಂಟ್ರಿ ಅಧಿನಿಯಮ 1961 ರ ಅಡಿಯಲ್ಲಿ ಬೆಂಗಳೂರು ಅಭಿವೃದ್ದಿ ಬಗ್ಗೆ ಯೋಜನೆ ರೂಪಿಸೋ ಅವಕಾಶವನ್ನ ಬಿಡಿಎ ಗೆ ನೀಡಲಾಗಿದೆ. ಹೀಗಾಗಿ ಇವತ್ತು ನಡೆದ ಸಭೆ ಮಹತ್ವದಾಗಿತ್ತು. ಸಭೆಯಲ್ಲಿ ಚರ್ಚೆಯಾದ ಪ್ರಮುಖ ವಿಷಯಗಳು ಇಂತಿವೆ.

ಸಭೆಯ ಪ್ರಮುಖ ಅಂಶಗಳು..!

  • ಒಟ್ಟು ಭೂಬಳಕೆಯ ವಿಸ್ತೀರ್ಣ ನಿಗಧಿ

  • ಹಸಿರು ವಲಯ ಗುರುತು ಮಾಡೋದು

  • 1209.5 ಸ್ಕ್ಲೇರ್ ಕಿ. ಮೀ ಆಗಲಿದೆ ಬೆಂಗಳೂರು ವಿಸ್ತೀರ್ಣ

  • ಬಿಎಂಐಸಿ ಯೋಜನೆಯಿಂದಾಗಿ ಭೂಭಾಗ ಕಡಿತ

  • ರೆಸಿಡೆನ್ಸಿಯಲ್, ಇಂಡಸ್ಟ್ರಿಯಲ್, ಕಮರ್ಷಿಯಲ್, ಗ್ರೀನ್ ಬೆಲ್ಟ್ ಜಾಗಗಳ ನಮೂದು

  • ಪಾರ್ಕ್ ಮತ್ತು  ಓಪನ್ ಪ್ಲೇಸ್ ಜಾಗ ನಿಗಧಿ

ಇನ್ನು ನಾಳಿನ ಸಭೆಯಲ್ಲಿ ಸಮಗ್ರ ಅಭಿವೃದ್ಧಿ ಯೋಜನೆ ರೂಪಿಸೋಕೆ ಉಳಿದುಕೊಂಡಿರೋ ಒಟ್ಟು ಭೂಭಾಗದ ವಿಸ್ತೀರ್ಣ ನಿಗದಿಯಾಗಲಿದೆ. ಇದ್ರಲ್ಲಿ ಹಸಿರು ವಲಯವನ್ನ ಗುರುತು ಮಾಡಲಾಗುತ್ತೆ, ಇನ್ನು 2007 ರ ಮಾಸ್ಟರ್ ಪ್ಲಾನ್ ಪ್ರಕಾರ ಬೆಂಗಳೂರು ಒಟ್ಟು 1219 ಸ್ಕ್ವೇರ್ ಕಿಲೋ ಮೀಟರ್ ಇತ್ತು, ಆದ್ರೆ ಈ ಬಾರಿ ಅದು 1209.5 ಸ್ಕ್ವೇರ್ ಕಿಲೋ ಮೀಟರ್ ಆಗೋ ಸಾಧ್ಯತೆ ಇದೆ. ಯಾಕಂದ್ರೆ ಬೆಂಗಳೂರು ಹೊರವಲಯದಲ್ಲಿ ಬೆಂಗಳೂರು ಮೈಸೂರು ಇನ್ಪ್ರಾಸ್ಟ್ರಕ್ಚರ್ ಕಾರಿಡಾರ್ ಯೋಜನೆ ಜಾರಿಯಲ್ಲಿದೆ ಅದಕ್ಕಾಗಿ ಭೂಮಿ ಮೀಸಲಿಟ್ಟಿದ್ದು ವಿಸ್ತೀರ್ಣ ಕಡಿಮೆಯಾಗಿದೆ. ಇಂದಿನ ಸಭೆಯಲ್ಲಿ ಸಿಟಿಯಲ್ಲಿರೋ ಒಟ್ಟು ರೆಸಿಡೆನ್ಸಿಯಲ್ ಏರಿಯಾ ಎಷ್ಟು, ಇಂಡಸ್ಟ್ರಿಯಲ್, ಕಮರ್ಷಿಯಲ್, ಗ್ರೀನ್ ಬೆಲ್ಟ್ ಜಾಗ, ಮತ್ತು ಪಾರ್ಕ್ ಅಂಡ್ ಪಬ್ಲಿಕ್ ಪ್ಲೇಸ್ ಗಳ ವಿಸ್ತೀರ್ಣ ನಿಗದಿ ಮಾಡೋ ಬಗ್ಗೆ ಚರ್ಚೆ ನಡೆಸಲಾಯ್ತು.)

ಇನ್ನು, ಮಾಸ್ಟರ್ ಪ್ಲಾನ್ 2030ರ ಸಭೆಯನ್ನ ಯಾಕೆ ಭಾನುವಾರ ನಡೆಸ್ತಿದ್ದಾರೆ ಅನ್ನೋ ಬಗ್ಗೆ ಸಾಕಷ್ಟು ಗೊಂದಲಗಳು ಮೂಡಿದೆ. ಈ ಬಗ್ಗೆ ಮಾಹಿತಿ ನೀಡಿರೋ ಅಯುಕ್ತ ಡಾ. ರಾಜಕುಮಾರ್ ಖತ್ರಿ ಯಾವುದೇ ಅನುಮಾನ ಬೇಡ. ಸಾಮಾನ್ಯ ದಿನಗಳಲ್ಲಿ ಅಧಿಕಾರಿಗಳ ಸಭೆ ನಡೆಸೋದಕ್ಕೆ ಸಮಯ ಇರೋದಿಲ್ಲ. ಹೀಗಾಗಿ ಭಾನುವಾರ ನಡೆಸ್ತಿದ್ದೇವೆ ಅಂತಿದ್ದಾರೆ.

ಒಟ್ನಲ್ಲಿ ಮಾಸ್ಟರ್ ಪ್ಲಾನ್ 2030 ಆರಂಭಿಸೋಕೆ ಬಿಡಿಎ ಭರ್ಜರಿ ಸಿದ್ಧತೆ ಮಾಡಿಕೊಳ್ತಿದೆ. ಮುಂದೆ ಯಾವುದೇ ವಿಘ್ನಗಳು ಎದುರಾಗದೆ ಈ ಯೋಜನೆ ಪೂರ್ಣಗೊಂಡಾಗ ಮಾತ್ರ ಬಿಡಿಎ ಅಧಿಕಾರಿಗಳ ಶ್ರಮ ಫಲಿಸಲಿದೆ.

Comments are closed.

Social Media Auto Publish Powered By : XYZScripts.com