ಶರವೇಗದ ಟ್ರೇನ್ ಮುಂದೆ ಸಾವಿನ ಜೊತೆ ಆಟ ಆಡುವ ಪಡ್ಡೆ ಹೈಕ್ಳು

ಸಾವಿನ ಜೊತೆ ಸರಸವಾಡುವದೆಂದ್ರೆ ಈಗಿನ ಮಕ್ಕಳಿಗೆ ಅದೊಂದು ರೀತಿಯಲ್ಲಿ ಹುಡುಗಾಟವಾಗಿದೆ. ಜೀವವನ್ನ ಪಣಕ್ಕಿಟ್ಟು ಮೋಜು ಅನುಭವಿಸುವ ಅವರ ಹುಚ್ಚಾಟ ಅದೆಂಥಹ ಅತಿರೇಕಗಳ ಸೃಷ್ಟಿಗೆ ಕಾರಣವಾಗುತ್ತೆ ಅನ್ನೋದಿಕ್ಕೆ ಈ ವಿಡಿಯೋನೆ ಉದಾಹರಣೆ. ಇದನ್ನ ನೋಡುವದಕ್ಕೆ ಮುಂಚೆ ಹೃದಯ ಗಟ್ಟಿ ಮಾಡಿಕೊಳ್ಳಿ.

ಉತ್ತರ ಪ್ರದೇಶದ ಗಾಜಿಯಾಬಾದ್ ಬಳಿ ಟ್ರೇನ್ ಬರುತ್ತಿದ್ದಂತೆ ಬ್ರಿಡ್ಜ್ ಮೇಲಿಂದ ಕಾಲುವೆಗೆ ಹಾರುವ ಹುಡುಗರ ಗುಂಪು ಅಕ್ಷರಶಃ ಸಾವಿನ ಜೊತೆ ಚೆಲ್ಲಾಟವಾಡುವಂತಿದೆ.  ಸುಮಾರು 10 ರಿಂದ 15 ವರ್ಷದ ಏಳೆಂಟು ಹುಡುಗರ ಗುಂಪು ಗಂಗಾ ನದಿಗೆ ಕಟ್ಟಲಾಗಿರುವ ರೈಲ್ವೆ ಬ್ರಿಡ್ಜ್ ಮೇಲಿಂದ ಟ್ರೇನ್ ಹತ್ತಿರ ಬರುವದನ್ನ ನೋಡಿಕೊಂಡು ಕ್ಷಣಾರ್ಧದಲ್ಲೇ ನೀರಿಗೆ ಧುಮುಕುತ್ತಾರೆ. ಸ್ವಲ್ಪ ಯಾಮಾರಿದ್ರು ಸಾವು ತಪ್ಪಿದ್ದಲ್ಲ. ಆದ್ರೆ ಈ ಮಕ್ಕಳಿಗೆ ಅದರ ಭಯವೇ ಇಲ್ಲದಂತೆ ಕಾಣುತ್ತೆ.

1

ಇಂಟರ್ ನೆಟ್ ನಲ್ಲಿ ವೈರಲ್ ಆದ ವಿಡಿಯೋ ನೋಡಿ ಪೊಲೀಸರು ತನಿಖೆಗೆ ಆದೇಶ ನೀಡಿದ್ದಾರೆ. ಸ್ಥಲೀಯರ ಪ್ರಕಾರ ಇದು ಇಲ್ಲಿ ನಿತ್ಯ ನಡೆಯುವ ಹುಚ್ಚಾಟವಂತೆ. ಆದ್ರೆ ಅದೃಷ್ಟ ಕೊಂಚ ಕೈ ಕೊಟ್ಟರು ಅನಾಹುತ ತಪ್ಪಿದ್ದಲ್ಲ ಅನ್ನೋದು ಈ ವಿಡಿಯೋ ನೋಡಿದ ಯಾರಿಗಾದ್ರು ಅರ್ಥವಾಗುವಂತಹದ್ದು.

ಇದೆ ರೀತಿ ಹಳಿಯ ಪಕ್ಕದ ರಾಡ್ ಮೇಲೆ ಕಾಲಿಡುತ್ತಾ ಟ್ರೇನ್ ಒಳಗೆ ಹೊರಗೆ ಜಿಗಿದಾಡುತ್ತಿದ್ದ ಅತಿರೇಕವನ್ನ ನೋಡಿದ್ದು ನಿಮಗೆ ನೆನಪಿರಬಹುದು. ಅದರಲ್ಲಿಯೂ ಕೂಡಾ ನಿತ್ಯ ಹೀಗೆ ಮಾಡುತ್ತಿದ್ದ ಕೆಲವು ಹುಡುಗರ ಗುಂಪು ಕೊನೆಗೆ ದುರಂತದಲ್ಲಿ ಅಂತ್ಯ ಕಂಡಿತ್ತು. ಅದೊಂದು ದಿನ ಈ ರೀತಿ ಸ್ಟಂಟ್ ಮಾಡುತ್ತಿದ್ದ ಹುಡುಗನೊಬ್ಬ ಕಾಲು ಜಾರಿ ಬಿದ್ದು, ಸಾವಿನ ಮನೆ ಸೇರಿದ್ದನ್ನ ಇಲ್ಲಿ ನೆನಪಿಸಿಕೊಳ್ಳಬಹುದು.

ಇಲ್ಲಿದೆ ನೋಡಿ ಆ ವಿಡಿಯೋ ತುಣುಕು

Comments are closed.