ವಿವಾದದ ಬಳಿಕ ಡಿಸಿ-ಸಿಎಂ ಮೊದಲ ಭೇಟಿ- ಏನಾಯ್ತು ಮಾತುಕಥೆ ?

ಮೈಸೂರು: ಸಿಎಂ ಸಿದ್ದರಾಮಯ್ಯ ಅವರ ಆಪ್ತ ಮರೀಗೌಡ, ಮೈಸೂರು ಜಿಲ್ಲಾಧಿಕಾರಿ ಸಿ. ಶಿಖಾಗೆ ಧಮಕಿ ಹಾಕಿದ ವಿವಾದ ರಾಜ್ಯ ರಾಜಕೀಯದಲ್ಲಿ ತಲ್ಲಣವನ್ನೇ ಸೃಷ್ಟಿಸಿತ್ತು. ಆ ಬಳಿಕ ಡಿಸಿ ಹಾಗು ಸಿಎಂ ಇದೇ ಮೊದಲ ಬಾರಿಗೆ ಮುಖಾಮುಖಿಯಾಗಿದ್ದಾರೆ. ಇಬ್ಬರ ನಡುವೆ ಚಿಕ್ಕದೊಂದು ಚರ್ಚೆ ಕೂಡ ನಡೆದಿದೆ. ಹಾಗಿದ್ದರೆ ಏನದು..?

shikha

C M Siddaramaiah addressing during the Joint session at Vidhana Soudha in Bangalore on Thursday, January 23, 2014.

ಮೈಸೂರಿನಲ್ಲಿ ನಡೆದ ಜಯಚಾಮರಾಜ ಒಡೆಯರ್ ಪ್ರತಿಮೆ ಅನಾವರಣ ಸಮಾರಂಭದ ವೇದಿಕೆಯಲ್ಲಿ ಮುಖ್ಯಮಂತ್ರಿ ಹಾಗು ಜಿಲ್ಲಾಧಿಕಾರಿ  ಮುಖಾಮುಖಿಯಾದ್ರು. ಇಲ್ಲಿ ಸಿಎಂ ಅವ್ರಿಂದ ಬಹು ದೂರವೇ ಕುಳಿತಿದ್ದ ಜಿಲ್ಲಾಧಿಕಾರಿ ಶಿಖಾರನ್ನ  ಸಮೀಪಕ್ಕೆ ಕರೆದು ಮಾತನಾಡಿಸಿದ್ರು. ಈ ಸಂದರ್ಭದಲ್ಲಿ ಸಿ.ಎಂ ಜೊತೆ ಮಾತಿಗಿಳಿದ ದೃಶ್ಯ ಸ್ವಲ್ಪ ಗೊಂದಲಕ್ಕೆ ಎಡೆಮಾಡಿಕೊಟ್ಟಿತ್ತು.

ಸುಮಾರು ಐದಾರು ನಿಮಿಷ ಕಾಲ  ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ, ಸಿ.ಎಂ ಸಿದ್ದರಾಮಯ್ಯ ಅವರೊಡನೆ ಜಿಲ್ಲಾಧಿಕಾರಿ ಮಾತುಕತೆ ನಡೆಸಿದ್ರು. ಆದ್ರೆ ಈ ಐದಾರು  ನಿಮಿಷದಲ್ಲಿ ಯಾವ ವಿಚಾರದ ಬಗ್ಗೆ  ಚರ್ಚೆ ಆಯ್ತು ಅನ್ನೋ ಬಗ್ಗೆ ಇನ್ನಷ್ಟೇ ಮಾಹಿತಿ ಹೊರಬೀಳಬೇಕು..

Comments are closed.

Social Media Auto Publish Powered By : XYZScripts.com