‘ಬಾಹುಬಲಿ’ ದಾಖಲೆ ಮುರಿಯುತ್ತಂತೆ ‘ಕಬಾಲಿ’ ಹೇಗೆ ?

ಸತತ ಎರಡು ಸೋಲುಗಳ ಬಳಿಕ ಸಿಡಿದೆದ್ದಿರೋ ರಜಿನಿ ಬಾರೀ ಸದ್ದು ಮಾಡುತ್ತಿದ್ದಾರೆ. ಬೆಂಕಿ ಅವತಾರದಲ್ಲಿ ಪ್ರೇಕ್ಷಕರನ್ನ ರಂಜಿಸೋಕೆ ತುದಿಗಾಲಲ್ಲಿ ನಿಂತಿದ್ದಾರೆ. ಕೇವಲ     ನೆರುಪ್ಪುಡಾ ಅನ್ನೋ ಒಂದು ಹಾಡೇ ಅಭಿಮಾನಿಗಳ ತೆಲೆಕೆಡಿಸಿರಬೇಕಾದರೆ, ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ದೋಚುವುದು ಕನ್ಫರ್ಮ್.. ಹಾಗಾಗೇ ನಿರ್ಮಾಪಕರು ಚಿತ್ರದ ಗಳೆಕೆಯ ಬಗ್ಗೆ ಈಗಾಗ್ಲೇ ಲೆಕ್ಕಾಚಾರ ಹಾಕುತ್ತಿದ್ದಾರೆ.

ದಕ್ಷಿಣ ಭಾರತದ ಚಿತ್ರರಂಗದ ಬಾಕ್ಸ್ ಆಫೀಸ್ ಇತಿಹಾಸವನ್ನೇ ತಿರುಚಿದ ಚಿತ್ರ ಬಾಹುಬಲಿ. ಇದು ಬಾಕ್ಸ್ ಆಫೀಸ್‌ನಲ್ಲಿ ಬರೋಬ್ಬರಿ ಐನೂರ ಕೋಟಿಗೂ ಅಧಿಕ ಮೊತ್ತವನ್ನ ಕಲೆಹಾಕಿತ್ತು. ಈಗ ಈ ದಾಖಲೆಯನ್ನ ನಿರಾಯಾಸವಾಗಿ ಮುರಿದು ಹಾಕುತ್ತಾರಂತೆ ಸೂಪರ್ ಸ್ಟಾರ್. ಹೀಗಂತ ಕಬಾಲಿಯ ನಿರ್ಮಾಪಕ ಕಲೈಪುಲಿ ಎಸ್ ತನು ಭವಿಷ್ಯ ನುಡಿದಿದ್ದಾರೆ. ಹಾಗಿದ್ರೆ ಚಿತ್ರದ ಗಳಿಕೆಯ ಮೇಲೆ ಹಾಕಿರೋ ಲೆಕ್ಕಾಚಾರವೇನಿರಬಹುದು…?

ನಿರ್ಮಾಪಕರ ಲೆಕ್ಕಾಚಾರದ ಪ್ರಕಾರ ರಜಿನಿ ಬಾಹುಬಲಿಯ ರೆಕಾರ್ಡ್ ಅನ್ನ ಮುರಿಯೋದರಲ್ಲಿ ಸಂಶಯವಿಲ್ಲ. ಕಾರಣ, ಜುಲೈ ೨೨ ಕೇವಲ ವಿದೇಶಗಳಲ್ಲೇ ೧೦೦೦ ಚಿತ್ರಮಂದಿರಗಳಲ್ಲಿ  ಕಬಾಲಿ ಎಂಟ್ರಿಯಾಗುತ್ತೆ. ಇದರಲ್ಲಿ ಅಮೇರಿಕಾ ಹಾಗು ಯುಕೆಗಳಲ್ಲೇ ೪೦೦ ಚಿತ್ರಮಂದಿರಗಳು ಬುಕ್ ಆಗಿವೆ. ಇನ್ನು ಯುರೋಪಿನಾದ್ಯಂತ ೧೦೦ ಥಿಯೇಟರ್‌ಗಳಾದರೆ, ದಕ್ಷಿಣ ಭಾರತದ ತಮಿಳುನಾಡು, ಕರ್ನಾಟಕ, ಕೇರಳ, ಆಂಧ್ರದಲ್ಲಿ ಸುಮಾರು ೨೦೦೦ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ.

ಹೀಗಾಗಿ ಕಬಾಲಿ ಓವರ್ ಸೀಸ್ ಹಾಗು ಭಾರತದ ಒಟ್ಟಾರೆ ಗಳಿಕೆ ಐನೂರು ಕೋಟಿ ದಾಟಲಿದೆ ಅನ್ನೋದು ಲೆಕ್ಕಾಚಾರ. ಒಂದು ವೇಳೆ ಈ ಮಟ್ಟಕ್ಕೆ ಹಣ ಕಲೆ ಹಾಕಿದರೆ, ಇದು ರಜನಿಕಾಂತ್ ಅವರ ಕೆರಿಯರ್‌ನಲ್ಲೇ ಅತೀ ಹೆಚ್ಚು ಗಳಿಕೆ ಕಂಡ ಸಿನಿಮಾ ಆಗುತ್ತೆ. ಇದೇ ಕಾರಣಕ್ಕೆ ಕೇವಲ ತಮಿಳು ಚಿತ್ರರಂಗವಷ್ಟೇ ಅಲ್ಲ, ವಿಶ್ವದ ಎಲ್ಲಾ ಫಿಲ್ಮ್ ಇಂಡಸ್ಟ್ರಿಗಳು ಕಬಾಲಿ ದರ್ಬಾರ್‌ಗಾಗಿ ಕಾಯುತ್ತಿದೆ.

Comments are closed.

Social Media Auto Publish Powered By : XYZScripts.com