ಪಾಪಾ.. ನೊಂದವರ ಪಾಲಿಗೆ ಇವರೆಲ್ಲ ಸತ್ತು ಹೋದರು !

‘ತಿಥಿ’ ಚಿತ್ರ ಹೆಸರು ಮಾಡಿದ್ದೇ ಮಾಡಿದ್ದು.. ತಿಥಿ ಅನ್ನೋಕು ಭಯ ಪಡುತ್ತಿದ್ದವರಿಗೆ ಈಗ ಇದು ಬಹು ಸುಲಭವಾಗಿ ದಕ್ಕುವ ಪದ. ಅದರಲ್ಲೂ ಪ್ರತಿಭಟನೆಗಾರರಿಗಂತೂ, ಈ  ಪದ ಹೋರಾಟದ ಹೊಸ ಅಸ್ತ್ರ.. ಈಗ ಯಾಕೆ ಈ ಮಾತು ಅಂದ್ರೆ, ದೊಡ್ಡ ಮಟ್ಟಕ್ಕೆ ಏರಿರೋ ಕೆಲವು ರಾಜಕಾರಣಿಗಳ ‘ತಿಥಿ’ ಮಾಡಿದೆ ಇಲ್ಲೊಂದು  ಹೋರಾಟಗಾರರ  ಗುಂಪು.. ಅದ್ಯಾಕೆ ಅಂತ ನೋಡಿ…

10569748321

ತೀವ್ರ ಪ್ರತಿಭಟನೆಯ ಹೊರತಾಗಿಯೂ ತಾರ್ಕಿಕ ಅಂತ್ಯ ಕಾಣದೆ ಹೋಗಿದ್ದರಿಂದ  ಹೋರಾಟ ವಿಭಿನ್ನ ರೂಪ ಪಡೆದುಕೊಂಡಿದೆ. ಜನಪ್ರತಿನಿಧಿಗಳ ಜಡತ್ವದಿಂದ ಬೇಸತ್ತ ಕಳಸಾ ಬಂಡೂರಿ ಬೆಂಬಲಿಗರು, ಈಗ ಸಂಸದರ ತಿಥಿ ಕಾರ್ಡ್ ಮುದ್ರಿಸುವ ಮೂಲಕ ಹೋರಾಟಕ್ಕೆ ವಿಭಿನ್ನ ಸ್ವರೂಪ ನೀಡಿದ್ದಾರೆ. ಹೋರಾಟಗಾರರ ಆಕ್ರೋಶಕ್ಕೆ ಒಳಗಾದ ರಾಜಕಾರಣಿಗಳು ತಮ್ಮ ತಿಥಿ ಕಾರ್ಡ್ ನೋಡಿ ಯಾರ ವಿರುದ್ಧ ಪ್ರತಿಭಟನೆ ಮಾಡುತ್ತಾರೋ…?

Comments are closed.

Social Media Auto Publish Powered By : XYZScripts.com