ಗೂಗಲ್ ವೀಕ್ಷಕರಿಗೆ ಸಲ್ಲು-ಸನ್ನಿನೇ ಬೇಕಂತೆ…!

747sunny-leon-posing-with-a-horse-during-manforce-condom-ad-shoot e7d9f9d14b28974d5c7791847dc82cdf
ಅಂತರ್ಜಾಲ ಅಂದ್ರೆ ಗೂಗಲ್, ಗೂಗಲ್ ಅಂದ್ರೆ ಅಂತರ್ಜಾಲ ಅನ್ನುವಂತ ಕಾಲ ಇದು. ಗೂಗಲ್ ಸರ್ಚ್ ಇಂಜಿನ್‌ನಲ್ಲಿ ಪ್ರಪಂಚದ ಯಾವುದೇ ಮೂಲೆಯ ಆಗುಹೋಗುಗಳ ಬಗ್ಗೆ ಮಾಹಿತಿ ಸಿಗತ್ತದೆ. ಸಿನಿಮಾ ಪ್ರಿಯರಿಗಂತು ಗೂಗಲ್ ನೆಚ್ಚಿನ ತಾಣ. ಕಳೆದ ಹತ್ತು ವರ್ಷದಲ್ಲಿ ಮೋಸ್ಟ್ ಸರ‍್ಚ್‌ಡ್ ಸೆಲೆಬ್ರೆಟಿಗಳ ಲಿಸ್ಟ್‌ನ್ನ ಗೂಗುಲ್ ಇದೀಗ ಬಿಡುಗಡೆ ಮಾಡಿದೆ. ನಟರಲ್ಲಿ ಸಲ್ಮಾನ್ ಖಾನ್ ಫಸ್ಟ್ ಪ್ಲೇಸ್‌ನಲ್ಲಿದ್ರೆ, ನಟಿಯರಲ್ಲಿ ಎಲ್ಲರನ್ನ ಹಿಂದಿಕ್ಕಿ ಮಾಜಿ ನೀಲಿರಾಣಿ ಸನ್ನಿ ಲಿಯೋನ್ ಮೊದಲ ಸ್ಥಾನ ಪಡೆದು ಶಾಕ್ ನೀಡಿದ್ದಾಳೆ.

sunny-leone-photoshoot-for-harper-bazar-magazine-march-2016_145766792840ಬಾಕ್ಸಾಫೀಸ್‌ನಲ್ಲಿ ದಾಖಲೆ ಮೇಲೆ ದಾಖಲೆ ಬರೀತಿರೊ ಸುಲ್ತಾನ್ ಸಲ್ಮಾನ್ ಖಾನ್ ಭಾರತೀಯ ಚಿತ್ರರಂಗದ ಎಲ್ಲಾ ಸ್ಟಾರ್‌ಗಳನ್ನ ಹಿಂದಿಕ್ಕಿ ಗೂಗಲ್‌ನಲ್ಲಿ ಅತಿಹೆಚ್ಚು ಹುಡುಕಲ್ಪಟ್ಟ ಸೆಲೆಬ್ರೆಟಿ ಅನ್ನೋ ಪಟ್ಟಕ್ಕೇರಿದ್ದಾನೆ. ಕಳೆದ ಹತ್ತು ವರ್ಷಗಳಲ್ಲಿ ಬ್ಯಾಕ್ ಟು ಬ್ಯಾಕ್ ಸೂಪರ್ ಹಿಟ್ ಕೊಟ್ಟ ಹೀರೋ ಸಲ್ಮಾನ್ ಖಾನ್. ಸಾಕಷ್ಟು ವಿವಾದಗಳ ಜೊತೆಗೆ ಸಲ್ಲು ಮದುವೆ ವಿಚಾರ ಈ ಅವಧಿಯಲ್ಲಿ ಹೆಚ್ಚಾಗಿ ಸದ್ದು ಮಾಡಿತ್ತು. ಇದೆಲ್ಲದರ  ಅಪ್‌ಡೇಟ್ಸ್‌ಗೋಸ್ಕರ ಜನ ಗೂಗಲ್‌ನಲ್ಲಿ ಸಿಕ್ಕಾಪಟ್ಟೆ ಹುಡುಕಾಡಿದ್ದಾರೆ.

ಒಂದ್ಕಡೆ ಸಲ್ಮಾನ್ ಖಾನ್ ಅಭಿನಯದ ಸುಲ್ತಾನ್ ಸಿನಿಮಾ ಭರ್ಜರಿ ಕಲೆಕ್ಷನ್ ಜೊತೆಗೆ ತನ್ನ ನಾಗಾಲೋಟವನ್ನ ಮುಂದುವರೆಸಿದೆ. ಇದರ ನಡುವೆ ಕಳೆದೊಂದು ದಶಕದಲ್ಲಿ ಗೂಗಲ್‌ನಲ್ಲಿ ಮೋಸ್ಟ್ ಸರ‍್ಚ್‌ಡ್ ಸೆಲೆಬ್ರೆಟಿ ಅನ್ನೋ ಪಟ್ಟ ಸಲ್ಮಾನ್ ಖಾನ್ ಪಾಲಾಗಿದೆ. ಈ ವಿಚಾರ ಕೇಳಿ ಸಲ್ಲು ಫ್ಯಾನ್ಸ್ ಸಂತಸಗೊಂಡಿರೋದು ಸುಳ್ಳಲ್ಲ. ಸಲ್ಮಾನ್ ಖಾನ್ ನಂತರದ ಸ್ಥಾನಗಳಲ್ಲಿ ಕ್ರಮವಾಗಿ ಶಾರುಖ್ ಖಾನ್, ಅಕ್ಷಯ್ ಕುಮಾರ್, ಅಮಿತಾಬ್ ಬಚ್ಚನ್, ರಜಿನಿಕಾಂತ್ ಇದ್ದಾರೆ.

ಈ ಲಿಸ್ಟ್‌ನಲ್ಲಿ ಶಾಕ್ ಕೊಟ್ಟಿರೋ ಮತ್ತೊಂದು ಹೆಸರು ಸನ್ನಿ ಲಿಯೋನ್. ಹಾಗೆ ನೋಡಿದರೆ ಮಾಜಿ ಪೋರ್ನ್ ಸ್ಟಾರ್ ಸನ್ನಿಲಿಯೋನ್ ಅಂತಾ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿಲ್ಲ. ದೊಡ್ಡ ದೊಡ್ಡ ಸ್ಟಾರ್‌ಗಳ ಸಿನಿಮಾ ಛಾನ್ಸ್ ಇನೂ ಸಿಕ್ಕಿಲ್ಲ. ಆದರೆ ಕಿರುತೆರೆ ರಿಯಾಲಿಟಿ ಶೋ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟ ಈ ಮಾದಕ ಚೆಲುವೆ ಮಾಡಿರೋ ಮೋಡಿ ಮಾತ್ರ ಅಷ್ಟಿಷ್ಟಲ್ಲ. ಪಟ್ಟಿಯಲ್ಲಿ ಸನ್ನಿ ಮೊದಲ ಸ್ಥಾನದಲ್ಲಿರೋದೆ ಇದಕ್ಕೆ ಸಾಕ್ಷಿ. ಈ ಬೋಲ್ಡ್ ಅಂಡ್ ಬ್ಯೂಟಿಫುಲ್ ಚೆಲುವೆಗೆ ಎಷ್ಟು ಬೇಡಿಕೆ ಇದೆ ಅನ್ನೋದು ಇದರಿಂದ ಸಾಬೀತಾಗಿದೆ.

ಮಾಜಿ ನೀಲಿರಾಣಿ ಸನ್ನಿ ಲಿಯೋನ್ ಬಿಟ್ರೆ ಕತ್ರಿನಾ ಕೈಫ್, ಕರೀನಾ ಕಪೂರ್, ದೀಪಿಕಾ ಪಡುಕೋಣೆ, ಪ್ರಿಯಾಂಕ ಚೋಪ್ರ, ಕಾಜಲ್ ಅಗರ್ವಾಲ್, ತಮನ್ನಾ ಭಾಟಿಯಾ ಗೂಗಲ್‌ನಲ್ಲಿ ಅತೀ ಹೆಚ್ಚಾಗಿ ಸಚ್ ಮಾಡಿರೋ ಟಾಪ್ ಟೆನ್ ನಟಿಯರ ಪಟ್ಟಿಯಲ್ಲಿದ್ದಾರೆ.

Comments are closed.

Social Media Auto Publish Powered By : XYZScripts.com