ಇವರಿಬ್ಬರದ್ದು ಎಂಗೇಜ್‌ಮೆಂಟ್ ಆಗೋಗಿದ್ಯಂತೆ..!

deepik padukone 1

ಬಾಲಿವುಡ್ ಹಾಟ್ ಜೋಡಿ ರಣ್ವೀರ್ ಸಿಂಗ್, ದೀಪಿಕಾ ಪಡುಕೋಣೆ ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರಂತೆ. ಹೀಗಂತ ಈಗ ಬಿಸಿಬಿಸಿ ಚರ್ಚೆಯಾಗುತ್ತಿದೆ. ಈ ಹಾಟ್ ಜೋಡಿ ಪ್ರೇಮಪಾಶಕ್ಕೆ ಸಿಲುಕಿರೋದಾಗಿ ಹಲವು ದಿನಗಳಿಂದ ಬಿಟೌನ್ ಗಲ್ಲಿಗಲ್ಲಿಗಳಲ್ಲಿ ಗುಲ್ಲಾಗಿತ್ತು. ಯಾರಾದರೂ ಧೈರ್ಯ ಮಾಡಿ ಕೇಳಿದರೆ ಮಾತ್ರ ನಾವಿಬ್ಬರು ಜಸ್ಟ್ ಫ್ರೆಂಡ್ಸ್ ಅಷ್ಟೆ ಅಂತ ಅದೇ ರೆಡಿಮೇಡ್ ಉತ್ತರ ಕೊಡುತ್ತಿತ್ತು ಈ ಜೋಡಿ. ಈಗ ಎಂಗೇಜ್‌ಮೆಂಟ್ ಸುದ್ದಿಯನ್ನ ಕೂಡ ಇವರೇ ಖಾತ್ರಿಪಡಿಸಬೇಕಿದೆ.

ಸೂಪರ್ ಹಿಟ್ ರಾಮ್‌ಲೀಲಾ ಸಿನಿಮಾ ಶೂಟಿಂಗ್ ಸಮಯದಲ್ಲೇ ರಣ್ವೀರ್, ದೀಪಿಕಾ ಪ್ರೀತಿಲಿ ಬಿದ್ದಿದ್ದಾರೆ ಅಂತ ಮಾತಾಡಿಕೊಂಡಿತ್ತು ಬಾಲಿವುಡ್. ಕದ್ದುಮುಚ್ಚಿ ಇವರಿಬ್ಬರೂ ಸುತ್ತಾಡಿದ್ದು ಆಗ್ಗಿಂದಾಗ್ಗೇ ಸುದ್ದಿಯಾಗಿತ್ತು. ಸಮಯ ಸಿಕ್ಕಾಗಲೆಲ್ಲಾ ಇವರಿಬ್ಬರು ಒಬ್ಬರನ್ನೊಬ್ಬರು ಹೊಗಳಿ ಅಟ್ಟಕ್ಕೇರಿಸೋ ಕಾಯಕವನ್ನೂ ಮಾಡುತ್ತಿದ್ದರು. ಇದನ್ನೆಲ್ಲಾ ನೋಡಿದವರು ಇದು ಪ್ರೀತಿ ಅಲ್ಲದೇ ಮತ್ತೇನು ಅಂತ್ಲೂ ಕೆಲವರು ವಾದಿಸಿದ್ದರು.deepik padukone 3

ದೀಪಿಕಾ ಪಡುಕೋಣೆ, ರಣ್‌ಬೀರ್ ಕಪೂರ್ ಪ್ರೇಮ್ ಕಹಾನಿ ದೊಡ್ಡಮಟ್ಟದಲ್ಲಿ ಸದ್ದು ಮಾಡಿತ್ತು. ಬಟ್ ರಣ್‌ಬೀರ್ ಸಿಂಗ್ ತೋಳ್ತೆಕ್ಕೆಯಿಂದ ಹೊರಬಂದ ಮೇಲೆ ರಣ್ವೀರ್ ಸಿಂಗ್ ಜೊತೆ ಡಿಪ್ಪಿ ಕುಚುಕುಚು ಶುರುವಾಯಿತು ಅನ್ನೋ ಮಾತಿದೆ. ಬಾಜಿರಾವ್ ಮಸ್ತಾನಿ ಸಿನಿಮಾ ಟೈಮ್‌ಲ್ಲಿ ಇವರಿಬ್ಬರ ನಡುವಿನ ಸಂಬಂಧ ಮತ್ತಷ್ಟು ಗಟ್ಟಿಯಾಯ್ತು ಅಂತಿವೆ ಬಿಟೌನ್ ಮೂಲಗಳು. ಇಬ್ಬರು ಒಂದೇ ಮನೆಯಲ್ಲಿ ವಾಸವಿದ್ದಾರೆ ಅಂತಲೂ ಸುದ್ದಿಯನ್ನ ತೇಲಿಬಿಟ್ಟಿದ್ದರು.

ಸದ್ಯ ರಣ್ವೀರ್ ಸಿಂಗ್, ಡಿಪ್ಪಿ ಮದುವೆಗೆ ಪೋಷಕರಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆಯಂತೆ. ಇತ್ತೀಚೆಗೆ ರಹಸ್ಯವಾಗಿ ಇಬ್ಬರ ಮನೆಯವರು ಭೇಟಿಯಾಗಿ ಮದುವೆ ಮಾತುಕತೆ ಮುಗಿಸಿರೋದು ಮಾತ್ರವಲ್ಲ, ಈ ಸಮಯದಲ್ಲಿ ರಣ್ವೀರ್ ಸಿಂಗ್, ದೀಪಿಕಾ ಪಡುಕೋಣೆ ಪರಸ್ಪರ ಉಂಗುರ ಬದಲಿಸಿಕೊಂಡಿದ್ದಾರೆ ಅಂತ ಈಗ ದೊಡ್ಡದಾಗಿ ಚರ್ಚೆಯಾಗುತ್ತಿದೆ. ಆದರೆ ಇವಾಗ್ಲೇ ಮದುವೆ ಆಲೋಚನೆ ಇಬ್ಬರಿಗೂ ಇಲ್ಲವಂತೆ. ಇನ್ನೆರಡು ವರ್ಷದಲ್ಲಿ ಹಸೆಮಣೆ ಏರೋ ಲೆಕ್ಕಾಚಾರದಲ್ಲಿದೆಯಂತೆ ಈ ಹಾಟ್ ಜೋಡಿ.

ಒಟ್ನಲ್ಲಿ ಈ ಎಂಗೇಜ್‌ಮೆಂಟ್ ವಿಚಾರ ನಿಜವೇ ಆಗಿದ್ದರೆ ರಣ್ವೀರ್ ಮತ್ತು ದೀಪಿಕಾ ಅಭಿಮಾನಿಗಳು ಕೊಂಚ ಬೇಸರಗೊಳ್ಳೋದು ಗ್ಯಾರೆಂಟಿ. ಆದರೆ ಈ ಸುದ್ದಿ ಎಷ್ಟು ನಿಜ, ಎಷ್ಟು ಸುಳ್ಳು ಅನ್ನೋದು ಇನ್ನಷ್ಟೆ ಗೊತ್ತಾಗಬೇಕು.

Comments are closed.

Social Media Auto Publish Powered By : XYZScripts.com