‘ವಾಲ್’ ಟೀಂ ಇಂಡಿಯಾ ಕೋಚ್ ಆಗಲ್ಲ ಅಂದಿದ್ದೇಕೆ ?

dravid_jpg_2723764f

ಟೀಂ ಇಂಡಿಯಾ ಕೋಚ್ ಆಗೋಕೆ ತುದಿಗಾಲಲ್ಲಿ ನಿಂತಿದ್ದ ಮಾಜಿ ಕ್ರಿಕೆಟ್ ಆಟಗಾರರ ಲಿಸ್ಟ್ ಸಣ್ಣದಿರಲಿಲ್ಲ.  ದೇಶದಲ್ಲಷ್ಟೇ ಅಲ್ಲ..ವಿದೇಶಿ ಆಟಗಾರರೂ ಕೂಡ ಈ ಸ್ಥಾನಕ್ಕಾಗಿ ಕ್ಯೂನಲ್ಲಿ ನಿಂತಿದ್ರು. ಇದಕ್ಕೆ ಕಾರಣ ಬಿಸಿಸಿಐ. ಇದು ವಿಶ್ವದ ಶ್ರೀಮಂತ ಕ್ರಿಕೆಟ್ ಮಂಡಳಿಗಳಲ್ಲೊಂದು. ಹೀಗಾಗಿ ಕೋಚ್ ಸ್ಥಾನಕ್ಕೆ ಸಿಗೋ ಸಂಭಾವನೆ ಚಿಕ್ಕ ಮೊತ್ತದ್ದಲ್ಲ. ಅಲ್ದೇ ಐಶಾರಾಮಿ ಜೀವನ ಶೈಲಿ ಜೊತೆಗೆ ವಿಶ್ವದ ಟಾಪ್ ಕ್ಲಾಸ್ ಆಟಗಾರರಿಗೆ  ತರಬೇತಿ ಕೊಡೋದ್ರಲ್ಲಿ ಇರೋ ಕೆಲಸವೇ ಗತ್ತೇ ಬೇರೆ. ಇಂತಹದೊಂದು ಮಹತ್ವದ ಸ್ಥಾನಕ್ಕೆ ಈಗ ಆಯ್ಕೆಯಾಗಿರುವು ಕರ್ನಾಟಕದ ಅನಿಲ್ ಕುಂಬ್ಳೆ.

ಆದ್ರೆ ಇದಕ್ಕೂ ಮುನ್ನ ಪೈಪೋಟಿಗೆ ಇಳಿದಿದ್ದವರ ಸಂಖ್ಯೆ 57. ಇವರಲ್ಲಿ ಕೊನೆಗೆ ಉಳಿದಿದ್ದವರು ಇಬ್ಬರು ಮಾತ್ರ. ಅವರಲ್ಲಿ ರವಿಶಾಸ್ತ್ರಿ ಒಬ್ಬರಾಗಿದ್ರೆ, ಮತ್ತೊಬ್ಬರು ಅನಿಲ್ ಕುಂಬ್ಳೆ. ಆದ್ರೆ ಇವರಿಬ್ಬರಿಗೂ ಮೊದ್ಲು ಟೀಂ ಇಂಡಿಯಾ ಕೋಚ್ ಗೆ ಮತ್ತೊಬ್ಬರನ್ನ ಕೇಳಲಾಗಿತ್ತು. ಆದರೆ ಈ ಉನ್ನತ ಹುದ್ದೆಯನ್ನ ಸರಾಸಗಟಾಗಿ ತಿರಸ್ಕರಿಸಿ, ವಿಶ್ವದಾಧ್ಯಂತ ಚರ್ಚೆಯಲ್ಲಿದ್ದಾರೆ.

anil-kumble-archive Rahul-Dravid 1

ಟೀಂ ಇಂಡಿಯಾವನ್ನ ಅದೆಷ್ಟೋ ಬಾರಿ ಸೋಲಿನ ಸುಳಿಯಿಂದ ತಪ್ಪಿಸಿದ್ದು ದಿ ವಾಲ್ ರಾಹುಲ್ ದ್ರಾವಿಡ್. ಈಗ ಇಂಡಿಯಾ ಎ ಹಾಗು ಅಂಡರ್-19 ತಂಡಗಳಿಗೆ ತರಬೇತಿ ನೀಡುತ್ತಿದ್ದಾರೆ. ಇವರನ್ನ ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕೂರ್ ಇಂಡಿಯಾ ತಂಡದ ಕೋಚ್ ಆಗುವಂತೆ ಕೇಳಿಕೊಂಡಿದ್ದರು. ಅದಕ್ಕೆ ದ್ರಾವಿಡ್ ನಿರಾಕರಿಸಲಿಲ್ಲ ಬದ್ಲಾಗಿ, ” ನಾನು ಸೀನಿಯರ್ ತಂಡಕ್ಕಿಂತ ಜ್ಯೂನಿಯರ್ಸ್ ಜೊತೆ ಕೆಲಸ ಮಾಡಲು ಇಷ್ಟ ಪಡುತ್ತೇನೆ” ಅಂತ ಹೇಳಿದ್ದಾರೆ.

anurag-thakur-

” ರಾಹುಲ್ ಡ್ರಾವಿಡ್ ರಲ್ಲಿ ಇಷ್ಟ ಪಡೋ ಸಂಗತಿನೇ ಇದು. ಅವರು ದೊಡ್ಡ ಹುದ್ದೆಗೆ ಇಷ್ಟ ಪಡಲಿಲ್ಲ. ದೊಡ್ಡ ಸಂಭಾವನೆಯನ್ನ ಬಯಸಲಿಲ್ಲ.” ಅಂತ ಅನುರಾಗ್ ಠಾಕೂರ್ ಹೇಳಿದ್ದಾರೆ. ಈಗ ಡ್ರಾವಿಡ್ ಇಂಡಿಯಾ ಎ ಹಾಗು  ಅಂಡರ್-19 ತಂಡಗಳಿಗೆ ತರಬೇತಿಗಾಗಿ ಪ್ರಫೇಷನಲ್ ಫೀಯಾಗಿ 2.65 ಕೋಟಿ ಹಾಗು ಎರಡನೇ ಆವೃತ್ತಿಗಾಗಿ 1.3ಕೋಟಿ ಪಡೆದಿದ್ದಾರೆ.

ಅದೇ ಟೀಂ ಇಂಡಿಯಾ ಕೋಚ್ ಆಗಿದ್ದರೆ ಡ್ರಾವಿಡ್ ಒಂದು ವರ್ಷಕ್ಕೆ 6 ಕೋಟಿ ಸಂಭಾವನೆ ಪಡೆಯುತ್ತಿದ್ದರು ಎಂದು ಮೂಲಗಳು ತಿಳಿಸಿವೆ.

 

Comments are closed.

Social Media Auto Publish Powered By : XYZScripts.com