ಮುತ್ತಿಟ್ಟ ಮಹಿಳೆಗೆ ಸಿಎಂ ಕೊಟ್ಟ ಉಡುಗೊರೆಯೇನು ?​

111111

ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ಮೇಲೆ ರಾಜ್ಯದ ಜನರಿಗೆ ಹಲವು ಭಾಗ್ಯಗಳನ್ನ ಕೊಟ್ಟಿದ್ದಾರೆ. ಅನ್ನಭಾಗ್ಯ, ಕ್ಷೀರ ಭಾಗ್ಯ, ಶೂಭಾಗ್ಯ, ಹೀಗೆ ಹಲವು ಭಾಗ್ಯಗಳನ್ನ ಕರುಣಿಸಿದ ಕಾರಣೀಭೂತರು.  ಆದರೆ ಫಾರ್ ಎ ಛೇಂಜ್.. ಸಿಎಂ ಗೆ ಬಯಸದೇ ಇದ್ದ ಭಾಗ್ಯವೊಂದನ್ನ ಮಹಿಳೆಯೊಬ್ಬರು ನೀಡಿದ್ದಾರೆ. ಅದರ ಹಿಂದೊಂದು ಇಂಟ್ರೆಸ್ಟಿಂಗ್ ಸ್ಟೋರಿ ಕೂಡ  ಇತ್ತು.

 ಅರಮನೆ ಮೈದಾನದಲ್ಲಿ ಕುರುಬ ಸಮಾಜದ ಜನಪ್ರತಿನಿಧಿಗಳನ್ನು ಅಭಿನಂದಿಸೋಕೆ 211ಅಂತಾ ಸಮಾರಂಭವನ್ನ ಹಮ್ಮಿಕೊಳ್ಳಲಾಗಿತ್ತು. ವಿವಿದೆಡೆಯಿಂದ ನೂರಾರು ಸಮಾಜದ ಜನಪ್ರತಿನಿಧಿಗಳು ಸಮಾರಂಭಕ್ಕೆ ಬಂದಿದ್ರು. ಅವರೆಲ್ಲರನ್ನೂ ಖುದ್ದು ಸಿಎಂ ಸಿದ್ದರಾಮಯ್ಯರೇ ವೇದಿಕೆ ಮೇಲೆ ಕರೆದು ಅಭಿನಂದಿಸ್ತಿದ್ರು. ಈ ವೇಳೆ ಅದೇನ್ನಿಸ್ತೋ ಏನೋ. ವೇದಿಕೆ ಏರಿದ ಚಿಕ್ಕಮಗಳೂರಿನ ತರಿಕೆರೆ ತಾಲೂಕಿನ ಅಮೃತಾಪುರ ಕ್ಷೇತ್ರದ ತಾಲೂಕು ಪಂಚಾಯತ್ ಸದಸ್ಯೆ ಗಿರಿಜಾ ಶ್ರೀನಿವಾಸ್ ಸಿಎಂ ಸಿದ್ದರಾಮಯ್ಯರ ಕೆನ್ನೆಗೆ ಮುತ್ತುಕೊಟ್ಟುಬಿಟ್ರು..

ಸಿಎಂ ಜೊತೆಗೆ ಫೋಟೋಗೆ ಪೋಸ್ ಕೊಟ್ಟ ಗಿರಿಜಾ ಶ್ರೀನಿವಾಸ್ ಕೆನ್ನೆಗೆ ಮುತ್ತಿಡುತ್ತಾರೆ ಅನ್ನೋದು ಸ್ವತಃ ಸಿದ್ದರಾಮಯ್ಯರಿಗೆ ಗೊತ್ತಾಗಲಿಲ್ಲ. ಭದ್ರತಾ ಸಿಬ್ಬಂದಿ ಸಹ ಇಂತಹದೊಂದು ಘಟನೆ ನಿರೀಕ್ಷಿಸರ್ಲಿಲ್ಲ. ಗಿರಿಜಾ ಮಾತ್ರ, ಯಾವುದನ್ನೂ ಯೋಚಿಸದೇ ಸಿಎಂಗೆ ಕಿಸ್ ಕೊಟ್ಟುಬಿಟ್ಟಿದ್ರು. ಇದ್ರಿಂದ ಕೊಂಚ ನಾಚಿಕೊಂಡ ಸಿಎಂ, ಮಹಿಳೆಯ ತಲೆಸವರಿ ಕಳುಹಿಸಿಕೊಟ್ರು.  ಬಳಿಕ ಆಕೆ ತಮ್ಮ ಮಗಳ ಸಮಾನ ಅಂತಾ ಪ್ರತಿಕ್ರಿಯೆಯನ್ನೂ ನೀಡಿದ್ರು..

123

ಹೌದು, ಗಿರಿಜಾ ಶ್ರೀನಿವಾಸ್ ಸಿದ್ದರಾಮಯ್ಯರಿಗೆ ಕಿಸ್ ಕೊಡೋದಕ್ಕೂ ಕಾರಣ ಇತ್ತು. ಸಿಎಂ ಪ್ರತಿನಿಧಿಸೋ ವರುಣಾದವರಾದ ಗಿರಿಜಾ ಸದ್ಯ ಅಮೃತಾಪುರದ ತಾಲೂಕು ಪಂಚಾಯತ್ ಸದಸ್ಯೆ.ಸಿದ್ದರಾಮಯ್ಯರೇ ಅಂದ್ರೆ ಗಿರಿಜಾರಿಗೆ ಪಂಚಪ್ರಾಣ. ಮೇಲಾಗಿ ಅವರ ಪಾಲಿನ ಹೀರೋ. ರಾಜಕೀಯ ಜೀವನದ ಪಾಠ ಕಲಿಸಿದ ಗುರು.. ಅಷ್ಟೆಯಾಕೆ ಎಲ್ಲದಕ್ಕೂ ಮಿಗಿಲಾಗಿ ತಂದೆ ಸಮಾನ. ಅವರನ್ನ ನೋಡ್ಬೇಕು, ಮಾತಾಡ್ಸಿಬೇಕು ಅನ್ನೋದು ಗಿರಿಜಾರ ಗುರಿಯಾಗಿತ್ತು. ಅಂತಹ ನಿರೀಕ್ಷಿತ ಕ್ಷಣ ಇವತ್ತು ಒದಗಿಬಂದಿತ್ತು. ಹೀಗಾಗಿ ತುಸು ಹೆಚ್ಚೇ ಎಗ್ಸೈಟ್ ಆದ ಗಿರಿಜಾ ಮುತ್ತು ಕೊಟ್ಟು ಅಭಿಮಾನ ಪ್ರದರ್ಶಿಸಿದ್ರು.. ಇದಕ್ಕೆ ಪ್ರತಿಯಾಗಿ ಸಿ.ಎಂ ಮಹಿಳೆಗೆ ಮುಗುಳ್ನಗೆಯ ಉಡುಗೊರೆ ಕೊಟ್ರು.

ಇನ್ನೂ ಇಷ್ಟೆಲ್ಲಾ ನಡೆಯುವಾಗ ಗಿರಿಜಾರ ಪತಿ ಶ್ರೀನಿವಾಸ್ ಸಮಾರಂಭಲ್ಲೇ ಇದ್ರು. ಪತ್ನಿಯ ಅಭಿಮಾನ ಕಂಡು ಅವರು ಕೂಡು ಸಂತಸಪಟ್ಟರು. ಆದ್ರೂ, ಅಭಿಮಾನಿಯ ಅಭಿಮಾನದ ಮುತ್ತೊಂದು ಕುರುಬ ಸಮಾಜದ ಸಮಾರಂಭದಲ್ಲಿ ಸಿಎಂಗೆ ಮುಜುಗರ ತಂದಿಡೋದರ ಜೊತೆಗೆ ಚರ್ಚೆಗೂ ಗ್ರಾಸವಾಯ್ತು..

Comments are closed.