ಶತಾಯುಷಿ ಶ್ರೀಗಳ ಆರೋಗ್ಯದಲ್ಲಿ ಏರುಪೇರು..ಭಕ್ತರಲ್ಲಿ ಆತಂಕ..

2 ನಡೆದಾಡುವ ದೇವರೆಂದೇ ಪ್ರಸಿದ್ಧರಾದ ಸಿದ್ಧಗಂಗಾಮಠದ ಶ್ರೀ ಶಿವಕುಮಾರ ಸ್ವಾಮೀಜಿಗಳು ಅನಾರೋಗ್ಯದ ಕಾರಣ ಬೆಂಗಳೂರಿನ ಬಿಜಿಎಸ್ ಗ್ಲೋಬಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಒಂದು ಕ್ಷಣ ಈ ವಿಚಾರ ತಿಳಿದು ಭಕ್ತರು ಆತಂಕಕ್ಕೆ ಒಳಗಾಗಿದ್ದರು. ಆದರೆ ಶ್ರೀಗಳ ಆರೋಗ್ಯದಲ್ಲಿ ಕೊಂಚಮಟ್ಟಿಗೆ ಏರುಪೇರಾಗಿದೆ ಅಂತ ವೈದ್ಯರು ಧೃಡಪಡಿಸಿದ ನಂತರ ಭಕ್ತರು ಸಮಾಧಾನಗೊಂಡಿದ್ದಾರೆ. ಇನ್ನೂ ಸಿಎಂ ಸಿದ್ದರಾಮಯ್ಯ ಸೇರಿ ಗಣ್ಯಾತಿಗಣ್ಯರು, ಭಕ್ತರು ಆಸ್ಪತ್ರೆಗೆ ಭೇಟಿಕೊಟ್ಟು ಶ್ರೀಗಳ ಆರೋಗ್ಯ ವಿಚಾರಿಸುತ್ತಿದ್ದಾರೆ.
1
ಮೂರು ದಿನಗಳಿಂದ ಶಿವಕುಮಾರ ಸ್ವಾಮೀಜಿಗಳು ಸರಿಯಾಗಿ ಊಟ ಮಾಡಿರಲಿಲ್ಲ. ಸುಸ್ತಾಗಿದ್ದರಿಂದ ನಾನೇ ಬಲವಂತ ಮಾಡಿ ಆಸ್ಪತ್ರೆಗೆ ಬರುವಂತೆ ಹೇಳಿದೆ ಈಗ ಅವರ ರಕ್ತಪರೀಕ್ಷೆ ಮಾಡಲಾಗಿದೆ. ಸ್ವಾಮೀಜಿಗಳಿಗೆ ೬ ಪಾಯಿಂಟ್‌ಗಳಷ್ಟು ಜಾಂಡೀಸ್ ಇದೆ. ಅಲ್ಲದೆ ಪಿತ್ತನಾಳದಲ್ಲಿ ಸಣ್ಣ ಅಡತಡೆ ಕಾಣಿಸುತ್ತಿದೆ. ನಾಳೆ ಎಂಡೋಸ್ಕೋಪಿ ಮಾಡಬೇಕೆಂದುಕೊಂಡಿದ್ದೇವೆ. ಆದ್ರೆ ಶ್ರೀಗಳು ಒಪ್ಪುತ್ತಿಲ್ಲ. ಧ್ಯಾನ, ಪ್ರವಚನ ಅನ್ನೋ ಕಾರಣಕ್ಕೆ ಮಠಕ್ಕೆ ತೆರಳೋದಾಗಿ ಹೇಳುತ್ತಿದ್ದಾರೆ. ಆದರೆ ನಾಳೆ ಹೋಗುವಂತೆ ಶ್ರೀಗಳ ಮನವೊಲಿಸಿರುವುದಾಗಿ ಬಿಜಿಎಸ್ ಆಸ್ಪತ್ರೆ ನಿರ್ದೇಶಕ ಡಾ. ವೆಂಕಟರಮಣ ಹೇಳಿದ್ದಾರೆ.

ಜ್ವರದಿಂದ ಆರೋಗ್ಯ ಕೆಟ್ಟಿದೆ, ಮೊದಲಿನ ರೀತಿ ಊಟ ಮಾಡುತ್ತಿಲ್ಲ, ಹೃದಯ ಪರೀಕ್ಷೆ ಮಾಡಲಾಗಿದ್ದು ಅವರ ವಯಸ್ಸಿಗೆ ತಕ್ಕ ಚಿಕಿತ್ಸೆ ನೀಡಲಾಗುತ್ತಿದೆ. ಸ್ವಾಮೀಜಿಗಳು ಚಿಕಿತ್ಸೆಗೆ ಸ್ಪಂದಿಸುತ್ತಿದ್ದು ವಿಶ್ರಾಂತಿ ಪಡೆಯುತ್ತಿದ್ದಾರೆ ಪಿತ್ತನಾಳದಲ್ಲಿ ಅಡೆತಡೆ ಉಂಟಾಗಿದ್ದು ಅದಕ್ಕೆ ಚಿಕಿತ್ಸೆ ನೀಡಲಾಗಿದೆ ಅಂತ ವೈದ್ಯರು ತಿಳಿಸಿದ್ದಾರೆ.

ಇನ್ನೂ ಶ್ರೀಗಳು ಆಸ್ಪತ್ರೆಗೆ ದಾಖಲಾದ ವಿಷಯ ತಿಳಿಯುತ್ತಿದ್ದಂತೆ ಭಕ್ತರು ಆತಂಕಕ್ಕೆ ಒಳಗಾಗಿದ್ದರು. ರಾಜಕೀಯ ಮುಖಂಡರು, ಭಕ್ತರು ಆಸ್ಪತ್ರೆಗೆ ದೌಡಾಯಿಸಿ ಶ್ರೀಗಳ ಆರೋಗ್ಯ ವಿಚಾರಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ, ಬಿ, ವೈ ರಾಘವೇಂದ್ರ, ಎಸ್, ಟಿ ಸೋಮಶೇಖರ್, ಮುನಿರತ್ನ, ಭೈರತಿ ಬಸವರಾಜ್ ಸೇರಿ ಹಲವರು ಬಿಜಿಎಸ್ ಗ್ಲೋಬಲ್ ಆಸ್ಪತ್ರೆಗೆ ಆಗಮಿಸಿದರು.

Comments are closed.