ಸಚಿವ ಸ್ಥಾನಕ್ಕಾಗಿ ವಿಜಯನಗರದ ಶಾಂತಿ ಕದಡಿದರು ಕೃಷ್ಣಪ್ಪ ಬೆಂಬಲಿಗರು !

⁠⁠⁠v1

ಸಚಿವ ಸ್ಥಾನ ಕೈ ತಪ್ಪಿದ ಹಿನ್ನೆಲೆ ಶಾಸಕ ಎಂ ಕೃಷ್ಣಪ್ಪ ಕಾಯ೯ಕತ೯ರು ಹಾಗೂ ಅವರ ಬೆಂಬಲಿಗರು ವಿಜಯನಗರ ಮುಖ್ಯ ರಸ್ತೆಯಲ್ಲಿ ಪ್ರತಿಭಟನೆ ಮಾಡಿದರು. ರಸ್ತೆಯ ಮಧ್ಯೆ ಭಾಗದಲ್ಲಿ ಟೈರ್ಗಳಿಗೆ ಹಚ್ಚಿ ಬೆಂಕಿ ಹಚ್ಚು ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಕೆಲ ಕಾಲ ಉದ್ರಿಗ್ಧ ಪರಿಸ್ಥಿತಿ ನಿರ್ಮಾಣವಾಗಿದ್ದು, ಬೆಂಬಲಿಗರು ಹಚ್ಚಿದ ಬೆಂಕಿಯನ್ನ ಪೊಲೀಸರು ನಂದಿಸಿದರು.

ಇದೇ ವೇಳೆ ಪೊಲೀಸರ ಕ್ರಮಕ್ಕೆ ಪ್ರತಿಭಟನಾಕಾರರ ಆಕ್ರೋಶ ವ್ಯಕ್ತಪಡಿಸಿದರು. ಬೆಂಕಿ ನಂದಿಸಲು ಅವಕಾಶ ಮಾಡಿಕೊಡದ ಕೃಷ್ಣಪ್ಪ ಬೆಂಬಲಿಗರು ಪ್ರತಿಭಟನೆಯ ಚುರುಕನ್ನ ಸರ್ಕಾರಕ್ಕೆ ಮುಟ್ಟಿಸಲು ಮುಂದಾಗಿದ್ದರು. ಹೀಗಾಗಿ ಪ್ರತಿಭಟನಾಕಾರರು ಹಾಗು ಪೊಲೀಸರ ನಡುವೆ ಕಿತ್ತಾಟ ಕೂಡ ನಡೆಯಿತು..

v2ಕ್ಷಣದಿಂದ ಕ್ಷಣಕ್ಕೆ ವಿಜಯನಗರದಲ್ಲಿ ಪ್ರತಿಭಟನೆಯ ಕಾವು ತೀವ್ರಗೊಂಡಿತ್ತು. ಕೃಷ್ಣಪ್ಪ ಬೆಂಬಲಿಗರಿಂದ ವಿಜಯನಗರದ ಮೆಟ್ರೋ ಸ್ಟೇಷನ್ನಿನ
ಸೆಕ್ಯೂರಿಟಿಗಳನ್ನು ಹೊರತಳ್ಳಿ ಮೆಟ್ರೋ ಸ್ಟೇಶನ್ ಗೆ ನುಗ್ಗಿ, ಮೆಟ್ರೋ ರೈಲನ್ನ ತಡೆದು ಸಚಿವ ಸ್ಥಾನ ಕೊಡುವಂತೆ ಪ್ರತಿಭಟಿಸಿದರು ಕೃಷ್ಣಪ್ಪ ಬೆಂಬಲಿಗರು.. ಕೃಷ್ಣಪ್ಪ ಬೆಂಬಲಿಗರ ಆಕ್ರೋಶಕ್ಕೆ ಮೆಟ್ರೋ ಹಾಗೂ ಪೊಲೀಸ್ ಸಿಬ್ಬಂದಿಯಷ್ಟೇ ಅಲ್ಲದೆ, ಜನ ಸಾಮನ್ಯರು ಕೂಡ ಅಸಹಾಯಕರಾಗಿದ್ದರು. ಸುಮಾರು ಒಂದು ಗಂಟೆಗಳಿಗೂ ಹೆಚ್ಚು ಕಾಲ ಟ್ರಾಫಿಕ್ ಜಾಮ್ ಆಗಿತ್ತು..

 

ಪ್ರತಿಭಟನೆಗೆ ಕಾರಣ: ಸಚಿವ ಸ್ಥಾನ ಸಿಗುತ್ತೆ ಎಂಬ ನಂಬಿಕೆಯಲ್ಲಿ ವಿಜಯನಗರದಲ್ಲಿರೋ ಎಂ ಕೃಷ್ಣಪ್ಪ ಅವರ ಮನೆಯ ಮುಂದೆ ಕಟೌಟ್, ಬ್ಯಾನರ್ ಗಳನ್ನ ಹಾಕಲಾಗಿತ್ತು.  ಈ ಮೂಲಕ ಕಾರ್ಯಕರ್ತರು ಕೃಷ್ಣಪ್ಪ ಅವರಿಗೆ ಶುಭಾಷಯ ಕೋರಿ ಸಂಭ್ರಮಿಸಿದ್ದರು. ಆದರೆ ಸಚಿವ ಸ್ಥಾನ ಸಿಗುವುದಿಲ್ಲ ಅನ್ನುವುದು ಖಚಿತವಾದ ಹಿನ್ನೆಲೆಯಲ್ಲಿ ಕಟೌಟ್, ಬ್ಯಾನರ್ ಗಳನ್ನ ತೆರವುಗೊಳಿಸಿದರು. ಹೀಗಾಗಿ ತೀರಾ ಹತಾಷರಾದ ಕಾರ್ಯಕರ್ತರು ಈ ಬೆಳವಣೆಗೆಯನ್ನ ನೋಡಿ ಎಂ. ಕೃಷ್ಣಪ್ಪ ಅವರಿಗೆ ಸಚಿವ ಸ್ಥಾನ ಕೊಡುವಂತೆ ಆಗ್ರಹಿಸಿ ಬೀದಿಗಳಿದು ಪ್ರತಿಭಟಿಸಿದರು.

Comments are closed.

Social Media Auto Publish Powered By : XYZScripts.com