ಅಮೀರ್ ಖಾನ್ ಕೂಡ ಸೆಂಚುರಿಗೌಡ್ರ ‘ತಿಥಿ’ಗೆ ಹೋಗಿದ್ರಂತೆ..!

202f494c-7d2c-4fd3-91fd-a16acb54c776

ರಾಷ್ಟ್ರಪ್ರಶಸ್ತಿ ವಿಜೇತ ಕನ್ನಡದ ತಿಥಿ ಸಿನಿಮಾ ದಿನದಿಂದ ದಿನಕ್ಕೆ ಹೆಚ್ಚು ಹೆಚ್ಚು ಜನಪ್ರಿಯವಾಗುತ್ತಿದೆ. ಯಾವುದೇ ಪ್ರಚಾರವಿಲ್ಲದೇ ಕೆಲದಿನಗಳ ಹಿಂದೆ ತೆರೆಕಂಡ ಚಿತ್ರಕ್ಕೆ ಪ್ರೇಕ್ಷಕರಿಂದಲೂ ಭರ್ಜರಿ ಪ್ರತಿಕ್ರಿಯೆ ಸಿಕ್ಕಿತ್ತು. ಮಲ್ಟಿಫ್ಲೆಕ್ಸ್‌ಗಳಲ್ಲಿ ಸಿನಿಮಾ ಒಳ್ಳೆಯ ಬಿಸಿನೆಸ್ ಮಾಡುತ್ತಿದೆ. ರಿಲೀಸ್‌ಗೂ ಮೊದಲೇ ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ ಚಿತ್ರ ನೋಡಿ ಮೆಚ್ಚಿಕೊಂಡಿದರು. ಇದೀಗ ಬಿಟೌನ್  ಆಮೀರ್ ಖಾನ್ ತಿಥಿ ಚಿತ್ರಕ್ಕೆ ಫಿದಾ ಆಗಿದ್ದಾರೆ.

ಒಂದು ಸಿಂಪಲ್ ಕಥೆಯನ್ನ ಅದ್ಭುತವಾಗಿ ತೆರೆಮೇಲೆ ತಂದು ಸಕ್ಸಸ್ ಕಂಡಿದ್ದಾರೆ ನಿರ್ದೇಶಕ ರಾಮ್ ರೆಡ್ಡಿ. ಯಾವುದೇ ನಿರೀಕ್ಷೆ ಇಲ್ಲದೇ ತೆರೆಗೆ ಬಂದ ಚಿತ್ರಕ್ಕೆ ಈ ಮಟ್ಟಿಗಿನ ರೆಸ್ಪಾನ್ಸ್‌ನ್ನ ಖುದ್ದು ಚಿತ್ರತಂಡವು ನಿರೀಕ್ಷಿಸಿರಲಿಲ್ಲ ಅನ್ನಿಸುತ್ತದೆ. ಕನ್ನಡಿಗರು ಮಾತ್ರವಲ್ಲದೇ ಪರಭಾಷಿಕರು ಸಿನಿಮಾ ನೋಡಿ ಭೇಷ್ ಅಂತಿರೋದು ಸ್ಯಾಂಡಲ್‌ವುಡ್ ಮಟ್ಟಿಗೆ ಉತ್ತಮ ಬೆಳವಣಿಗೆ. ಆಮೀರ್ ಖಾನ್ ಪತ್ನಿ ಕಿರಣ್ ರಾವ್ ಬಾಲಿವುಡ್ ತಾರೆಯರಿಗಂತ ತಿಥಿ ಚಿತ್ರದ ವಿಶೇಷ ಪ್ರದರ್ಶನ ಏರ್ಪಡಿದ್ದರು. ಆಮೀರ್ ಖಾನ್, ಕಂಗನಾ ರಾಣಾವತ್, ನಂದಿತಾ ದಾಸ್ ಮೊದಲಾದವರು ಸಿನಿಮಾ ನೋಡಿ ಖುಷಿಯಾಗಿದ್ದಾರೆ.

682818a7-2df5-4d7b-a486-2d910f7592e5

????????????????????????????????????

a53833d5-8299-49e2-b93b-a03f9685a24a

 

 

 

 

 

b5065ffb-ecbc-4a65-b5cf-1ee83b6b5289

 

ತಿಥಿ ಸಿನಿಮಾ ನೋಡಿದ ಆಮೀರ್ ಖಾನ್ ‘ಬಹಳ ದಿನಗಳ ನಂತ್ರ ನಾನು ಒಂದೊಳ್ಳೆ ಸಿನಿಮಾ ನೋಡಿದೆ. ಕನ್ನಡ ಸಿನಿಮಾ ಆದ್ರೂ ಇಂಗ್ಲೀಷ್ ಸಬ್ ಟೈಟಲ್ಸ್ ಇದೆ. ಚಿತ್ರದಲ್ಲಿ ನಟಿಸಿರೋ ಪಾತ್ರಧಾರಿಗಳು ಕಲಾವಿದರಲ್ಲ. ಆದರೆ ಅವರ ಅಭಿನಯ ನಿಜಕ್ಕೂ ಅದ್ಭುತವಾಗಿದೆ. ಜುಲೈ ೩ರಂದು ತಿಥಿ ಚಿತ್ರ ಬಾಲಿವುಡ್‌ನಲ್ಲಿ ರಿಲೀಸ್ ಆಗಲಿದ್ದು, ಎಲ್ಲರೂ ಮಿಸ್ ಮಾಡದೇ ನೋಡಿ’ ಅಂತ ಆಮೀರ್ ಖಾನ್ ತಮ್ಮ ಟ್ಟಿಟ್ಟರ್ ಪೇಜ್‌ನಲ್ಲಿ ಬರೆದುಕೊಂಡಿದ್ದಾರೆ.

ಮಂಡ್ಯ ಜಿಲ್ಲೆ ಒಂದು ಹಳ್ಳಿಯಲ್ಲಿ ನಡೆಯೋ ಸೆಂಚುರಿ ಗೌಡನ ತಿಥಿಯ ಸುತ್ತಾ ನಡೆಯೋ ವಿಚಾರಗಳನ್ನೆಲ್ಲಾ ತಮಾಷೆಯಾಗಿ ನಿರ್ದೇಶಕ ರಾಮ್ ರೆಡ್ಡಿ ಈ ಚಿತ್ರದಲ್ಲಿ ಕಟ್ಟಿಕೊಟ್ಟಿದ್ದಾರೆ. ಈರೇಗೌಡರು ಒದಗಿಸಿರೋ ಕಥೆ ಚಿತ್ರದ ಮತ್ತೊಂದು ಪ್ಲಸ್ ಪಾಯಿಂಟ್. ಇತ್ತೀಚೆಗೆ ಪ್ರಕಟಗೊಂಡ ರಾಜ್ಯ ಚಲನಚಿತ್ರ ಪ್ರಶಸ್ತಿ ಪಟ್ಟಿಯಲ್ಲೂ ಈ ಚಿತ್ರ ೩ ವಿಭಾಗದಲ್ಲಿ ಪ್ರಶಸ್ತಿ ಪಡೆದುಕೊಂಡಿದೆ. ಪರಭಾಷಿಗರನ್ನೂ ತಿಥಿ ಚಿತ್ರ ರಂಜಿಸುತ್ತಿದೆ ಅನ್ನೋದಕ್ಕೆ ಆಮೀರ್ ಖಾನ್ ಪ್ರತಿಕ್ರಿಯೆನೇ ಸಾಕ್ಷಿ. ಅಷ್ಟರಮಟ್ಟಿಗೆ ತಿಥಿ ಸಿನಿಮಾ ನೋಡುಗರಿಗೆ ಹತ್ತಿರವಾಗಿದೆ. ಬಹುತೇಕರಿಗೆ ಇಷ್ಟವಾಗಿರೋದು ಚಿತ್ರದಲ್ಲಿರೋ ಹೆಲ್ದಿ ಕಾಮಿಡಿ. ಹಿಂದಿ ಸಿನಿಮಾ ನಿರ್ದೇಶಕಿಯೂ ಆಗಿರುವ ಕಿರಣ್ ರಾವ್ ವಿಶೇಷ ಪ್ರದರ್ಶನ ಏರ್ಪಡಿಸಿರೋದು ತಿಥಿ ಚಿತ್ರದ ನಿಜವಾದ ಗೆಲುವು ಅನ್ನಬಹುದು. ಆಮೀರ್ ಖಾನ್‌ರಂತಹ ದಿಗ್ಗಜ ನಟರೇ ತಿಥಿ ಚಿತ್ರಕ್ಕೆ ಬೋಲ್ಡ್ ಆಗಿರೋದು ಸಂತಸದ ಸಂಗತಿ.

 

 

Comments are closed.