ವಿಷ್ಣು ಸ್ಮಾರಕ ವಿಚಾರದಲ್ಲಿ ಅಂಬಿ ರೆಬೆಲ್ ಯಾಕಾಗಲಿಲ್ಲ..?

 

19bgkpm_FILM_AWARDS_813554g ambarish2

ಅಂಬರೀಶ್ ಮತ್ತೆ ದಿವಂಗತ ಡಾ. ವಿಷ್ಣು ಸ್ಮಾರಕದ ಕುರಿತು ಮಾತನಾಡಿದ್ದಾರೆ. ಇಂದು (ಮೇ೨೯) ೬೪ನೇ ಜನ್ಮದಿನ ಆಚರಿಸಿಕೊಂಡ ಅಂಬಿ ವಿಷ್ಣು ಸ್ಮಾರಕ ಸ್ಥಳಾಂತರ ವಿಚಾರದ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆ ಮೂಲಕ ವಿಷ್ಣು ಸ್ಮಾರಕ ಮೈಸೂರಿಗೆ ಸ್ಥಳಾಂತರಗೊಳ್ಳಬೇಕು ಅನ್ನೋ ಭಾರತಿ ವಿಷ್ಣುವರ್ಧನ್ ಆಗ್ರಹಕ್ಕೆ ಅಂಬಿ ಪ್ರತಿಕ್ರಿಯಿಸಿದ್ದಾರೆ.

ದಿವಂಗತ ಡಾ. ವಿಷ್ಣು ಸ್ಮಾರಕ ನಿರ್ಮಾಣದ ಕುರಿತು ವಿವಾದ ಎದ್ದಿರೋದು ಎಲ್ಲರಿಗೂ ಗೊತ್ತಿರುವ ಸಂಗತಿ. ಕಾರಣಾಂತರಗಳಿಂದ ವಿಷ್ಣು ಕುಟುಂಬಸ್ಥರು ಹಾಗೂ ಅಭಿಮಾನಿಗಳ ಆಸೆಯಾಗಿರೋ ಸ್ಮಾರಕ ನಿರ್ಮಾಣ ಕಾರ್ಯ ನಿಧಾನವಾಗುತ್ತಾ ಸಾಗಿದೆ. ಇದೇ ಕಾರಣಕ್ಕೆ ಇತ್ತೀಚೆಗೆ ಡಾ. ವಿಷ್ಣು ಕುಟುಂಬಸ್ಥರು ಸ್ಮಾರಕವನ್ನ ಮೈಸೂರಿಗೆ ಸ್ಥಳಾಂತರಿಸುವಂತೆ ಮುಖ್ಯಮಂತ್ರಿಗಳಲ್ಲಿ ಕೇಳಿಕೊಂಡಿದರು. ಆದರೆ ವಿಷ್ಣು ಅಭಿಮಾನಿಗಳು ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಾ ಬರುತ್ತಿದ್ದಾರೆ.

31TH_VISHNUVARDHAN_2262344g

ಇದೇ ವಿಚಾರವಾಗಿ ಮಾಧ್ಯಮದವರು ಅಂಬರೀಶ್ ಅವರನ್ನ ಪ್ರಶ್ನಿಸಿದಾಗ ಅವರು ಕೂಡ ಸ್ಮಾರಕ ಸ್ಥಳಾಂತರ ನನಗೆ ಇಷ್ಟವಿಲ್ಲ ಅಂತ ಹೇಳಿದ್ದಾರೆ. ಎಲ್ಲರಿಗೂ ತಿಳಿದಿರುವಂತೆ ವಿಷ್ಣು ಸ್ಮಾರಕ ನಿರ್ಮಾಣ ಸ್ಥಳದ ವಿಚಾರವಾಗಿ ಗೊಂದಲ ಶುರುವಾಗಿದೆ. ಸರ್ಕಾರಕ್ಕೆ ಭೂಮಿ ವಶಪಡಿಸಿಕೊಳ್ಳೊದು ಕಷ್ಟದ ಮಾತಲ್ಲ. ಆದರೆ ಅಭಿಮಾನ್ ಸ್ಟುಡಿಯೋ ಸ್ಥಾಪಕರಾದ ದಿ. ಬಾಲಕೃಷ್ಣ ಅವರು ಕೂಡ ಕಲಾವಿದರು. ಹಾಗಾಗಿ ಅವರ ಕುಟುಂಬದವರನ್ನ ಕೆಟ್ಟದಾಗಿ ನಡೆಸಿಕೊಳ್ಳೋದು ಇಷ್ಟವಿಲ್ಲ. ಆದರೆ ವಿಷ್ಣು ಸ್ಮಾರಕ ಅಭಿಮಾನ್ ಸ್ಟುಡಿಯೋದಲ್ಲೇ ಕಟ್ಟಬೇಕು ಅನ್ನೋ ತಮ್ಮ ಆಸೆಯನ್ನ ಅಂಬಿ ತೋಡಿಕೊಂಡರು.

 

ಒಟ್ಟಾರೆಯಾಗಿ ಸಾಹಸಸಿಂಹ ವಿಷ್ಣುವರ್ಧನ್ ನಮ್ಮನ್ನಗಲಿ 7 ವರ್ಷವಾದರೂ ಅವರ ಸ್ಮಾರಕ ನಿರ್ಮಾಣ ಕಾರ್ಯಕ್ಕೆ ಇನ್ನೂ ಚಾಲನೆ ಸಿಕ್ಕಿಲ್ಲ. ಇದರ ಮಧ್ಯೆ ಸ್ಮಾರಕ ಸ್ಥಳಾಂತರಕ್ಕೆ ಜಟಾಪಟಿ ಶುರುವಾಗಿದೆ. ಇದೀಗ ಅಂಬಿ ಕೂಡ ಅಭಿಮಾನ್ ಸ್ಟುಡಿಯೋದಲ್ಲೇ ವಿಷ್ಣು ಸ್ಮಾರಕ ನಿರ್ಮಾಣ ಆಗಬೇಕು ಅಂತ ತಮ್ಮ ಇಂಗಿತ ವ್ಯಕ್ತಪಡಿಸಿರೋದು ನೋಡಿದ್ರೆ ವಿಷ್ಣು ಸ್ಮಾರಕ ನಿರ್ಮಾಣ ಗೊಂದಲಕ್ಕೆ ಶೀಘ್ರದಲ್ಲೇ ತೆರೆಬೀಳೊ ಲಕ್ಷಣಗಳು ಕಾಣಿಸುತ್ತಿಲ್ಲ.

Comments are closed.

Social Media Auto Publish Powered By : XYZScripts.com