ವಿಕಾಸ ಪರ್ವದಲ್ಲಿ ಮೋದಿ ಸವರಿದ್ದು ಬೆಣ್ಣೆಯೋ..? ಇಲ್ಲಾ…!!

4

ಕೇಂದ್ರ ಸರ್ಕಾರ ಎರಡು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಬಿಜೆಪಿ ಬೃಹತ್ ಸಮಾವೇಶವನ್ನ ಹಮ್ಮಿಕೊಂಡಿದೆ. ಶಕ್ತಿಶಾಲಿ ಭಾರತಕ್ಕಾಗಿ ಬೃಹತ್ ಸಮಾವೇಶ ಅನ್ನುವ ಘೋಷವಾಕ್ಯದೊಂದಿಗೆ ಕರ್ನಾಟಕದ ಬೆಣ್ಣೆಯ ನಾಡು ದಾವಣಗೆರೆಯಲ್ಲಿ ಸಮಾರಂಭ ಅದ್ಧೂರಿಯಾಗಿ ಆರಂಭವಾಯಿತು.  ಪ್ರಧಾನಿ ನರೇಂದ್ರ ಮೋದಿ ಆಗಮನದ ಬಳಿಕ ಅವರಿಗೆ ಅಡಿಕೆ ಹಾರ ಹಾಕಿ, ಬುದ್ಧ ಪ್ರತಿಮೆಯನ್ನ ನೀಡು ಗೌರವ ಸೂಚಿಸಲಾಯಿತು.

ಈ ವಿಕಾಸ ಪರ್ವ ಸಮಾವೇಶಕ್ಕೆ  ಕೇಂದ್ರ ಸಚಿವ ಅನಂತಕುಮಾರ,  ಸದಾನಂದಗೌಡ,  ರಾಜ್ಯ ಉಸ್ತುವಾರಿ ಮುರುಳಿಧರ್ ರಾವ್,  ಆರ್. ಅಶೋಕ್, ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್, ಪ್ರಲ್ಹಾದ್ ಜೋಶಿ, ರಾಜ್ಯ ಸಂಘಟನಾ ಕಾರ್ಯದರ್ಶಿ ಅರುಣ್ ಕುಮಾರ್,  ಮಾಜಿ ಸಚಿವ ರೇಣುಕಾಚಾರ್ಯ ವೇದಿಕೆಯಲ್ಲಿ ಹಾಜರಿದ್ದರು.

ಇನ್ನು ಕೇಂದ್ರ ಸರ್ಕಾರದ ಸಾಧನೆಯ ಬಗ್ಗೆ ಹಾಗು ಚುನಾವಣೆಯ ಸಂದರ್ಭದಲ್ಲಿ ಕೊಟ್ಟ ಆಶ್ವಾಸನೆಯನ್ನ ಈಡೇರಿಸಿರುವ ಬಗ್ಗೆ ವಿವರಣೆನ್ನ ಪ್ರಧಾನಿ ಮೋದಿ ನೀಡಿದರು. ಅಷ್ಟಕ್ಕೂ ಈ ಬೃಹತ್ ಸಮಾರಂಭದಲ್ಲಿ ಮೋದಿ ಹೇಳಿದ್ದೇನು…?

ಕಾಂಗ್ರೇಸ್ ಗೆ ನರೇಂದ್ರಮೋದಿ ಪರೋಕ್ಷ ಟಾಂಗ್:
ದೆಹಲಿಯ ಹವಾ ನಿಯಂತ್ರಿತ ಕೊಠಡಿಯಲ್ಲಿ ಕುಳಿತು ಸರ್ಕಾರಕ್ಕೆ ಸಲಹೆ ಕೊಡುವ ಜನರಿಗೆ, ಈ ಬಿರುಬಿಸಿಲಿನಲ್ಲಿ ಇಷ್ಟೊಂದು ಜನ ಆಶೀರ್ವಾದ ಮಾಡಲು ಏಕೆ ಬರುತ್ತಾರೆ ಎಂಬುದೇ ಗೊತ್ತಿಲ್ಲ.ಈಗ ಚುನಾವಣೆ ನಡೆಯುತ್ತಿಲ್ಲ. ಆದರೂ ನಮ್ಮನ್ನು ಇಲ್ಲಿಗೆ ಬರುವಂತೆ ಮಾಡಿರುವುದು ಕೇವಲ ಪ್ರೀತಿ ಮಾತ್ರ. ಇದೇ ನಮಗೆ ದೇಶದಲ್ಲಿ ಬದಲಾವಣೆ ತರಲು ಇರುವ ದೊಡ್ಡ ಶಕ್ತಿ. ನಾನು ಇಲ್ಲಿಗೆ ನಿಮ್ಮ ಆಶೀರ್ವಾದ ಪಡೆಯಲು ನಿಮ್ಮ ಋಣ ತೀರಿಸಲು ಬಂದಿದ್ದೇನೆ. ಕಳೆದ ಬಾರಿಯಂತೆ ಮುಂದಿನ ಚುನಾವಣೆಯಲ್ಲಿ ಕಮಲವನ್ನ ಅರಳಿಸಿ ಎಂದರು ಪ್ರಧಾನಿ.

ನಿಮಗೆ ಸ್ಮಾರ್ಟ್ ಸಿಟಿ ಕೊಟ್ಟಿಲ್ಲವೇ..? ಮೋದಿ:
ಕಳೆದ ಬಾರಿ ದಾವಣಗೆರೆಗೆ ಬಂದಾಗ ನೀವು ಕಮಲ ಅರಳಿಸಿ ನಾನು ನಿಮಗೆ ಲಕ್ಷ್ಮಿಯನ್ನು ಕೂಡಿಸಿ ಕೊಡುತ್ತೇನೆ ಎಂದಿದ್ದೆ. ಅದಕ್ಕೆ ತಕ್ಕಂತೆ ನಾನು ಲಕ್ಷ್ಮಿಯನ್ನ ಕೊಟ್ಟಿದ್ದೇನೆ. ನಿಮಗಾಗಿ ಸ್ಮಾರ್ಟ್ ಸಿಟಿಯನ್ನ ಕೊಟ್ಟಿಲ್ಲವೇ..? ಕಿಸಾನ್ ಸಿಂಚಾಯಿ, ನಿರುದ್ಯೋಗಿಗಳ ಕೌಶಲ್ಯ ವರ್ಧನೆಗೆ ಯೋಜನೆ ಕೊಟ್ಟಿಲ್ಲವೇ..? ಎಂದು ಕೊಟ್ಟ ಆಶ್ವಾಸನೆಯನ್ನ ಈಡೇರಿಸಿದ ಬಗ್ಗೆ ಸಮಜಾಯಿಸಿಕೊಟ್ಟರು.

ಅಲ್ಲದೆ ಪದೇ ಪದೇ ಬರಗಾಲ ಬರುತ್ತಿದೆ. ಸುಮಾರು ೧೨ ರಾಜ್ಯಗಳು ಬರ ಪೀಡಿತವಾಗಿವೆ. ಅದಕ್ಕೆ ನಾನು ಪ್ರತಿಯೊಂದು ರಾಜ್ಯದ ಮುಖ್ಯಮಂತ್ರಿಗಳನ್ನು ವೈಯಕ್ತಿಕವಾಗಿ ಭೇಟಿ ಮಾಡಿ ಅವರ ಸಮಸ್ಯೆಗಳೇನು ಎಂದು ಚರ್ಚಿಸಿದ್ದೇನೆ. ಬರ ನೀಗಿಸಲು ನೀರಿನ ಅಗತ್ಯತೆಗೆ ಹೆಚ್ಚಿನ ಮಹತ್ವವನ್ನ ಕೊಟ್ಟಿದ್ದೇವೆ.
ಅದಕ್ಕಾಗಿಯೇ ಪ್ರಧಾನಮಂತ್ರಿ ಕಿಸಾನ್ ಸಿಂಚಾಯಿ ಯೋಜನೆ ತಂದಿದ್ದೇವೆ. ಮುಂಗಾರು ಆರಂಭಕ್ಕೆ ಮೊದಲೇ ಆಂದೋಳನ ಪ್ರಾರಂಭಿಸಿ, ಕೆರೆ ಕಟ್ಟೆ ನೀರಿನ ಮೂಲಗಳ ಹೂಳು ತೆಗೆಸಿ, ಬಾಂದಾರುಗಳನ್ನ ನಿರ್ಮಿಸಿ ಅಂತಾ ಸಚಿವರಿಗೆ ಆದೇಶಿಸಿದ್ದೇನೆ ಎಂದು ತಿಳಿಸಿದರು.

 

 

Comments are closed.