ಮೋದಿ ಲ್ಯಾಂಡ್ ಆಗ್ತಿದ್ದಂಗೆ ರಾಜ್ಯ ಸರ್ಕಾರಕ್ಕೆ ಕೊಟ್ರು ಟಾಂಗ್

3 2

ಶಕ್ತಿಶಾಲಿ ಭಾರತಕ್ಕಾಗಿ ಬೃಹತ್ ಸಮಾವೇಶ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿಯ ದಾವಣಗೆರೆಗೆ ಬಂದಿದ್ದೇನೊ ನಿಜ. ಆದರೆ ಇಲ್ಲಿ ಬಿಜೆಪಿ ತನ್ನ ಎರಡು ವರ್ಷದ ಆಳ್ವಿಕೆಯ ಸಾಧನೆಯ ಪಟ್ಟಿಯನ್ನೇ ಇಡುತ್ತೆ ಅಂತ ಅಂದುಕೊಂಡಿದ್ದರೂ, ರಾಜ್ಯದ ಬಿಜೆಪಿ ಮುಖಂಡರು ರಾಜ್ಯ ಸರ್ಕಾರವನ್ನ ತರಾಟೆಗೆ ತೆಗೆದುಕೊಳ್ತಾರೆ ಅನ್ನುವ ನಿರೀಕ್ಷೆಯಿತ್ತು.  ಅದರಂತೆ ಮೋದಿ ಬರುವುದಕ್ಕೆ ಮುನ್ನ ಮತ್ತು ಬಂದ ಬಳಿಕ ಕಮಲದ ಮುಖಂಡರು ಗುಡುಗಿದ್ದು ಹೀಗಿತ್ತು ನೋಡಿ..

 

ashok

ಸಿದ್ಧರಾಮಯ್ಯ ಅಂದ್ರೆ ನಿದ್ರೆರಾಮಯ್ಯ… ಸಿದ್ಧರಾಮಯ್ಯ ಅಂದ್ರೆ ಅಭಿವೃದ್ಧಿ ವಿರೋಧಿ… ದಾವಣಗೆರೆಯ ಈ ಸಮಾವೇಶದ ಮೂಲಕ ಕರ್ನಾಟಕವನ್ನು ಕಾಂಗ್ರೆಸ್ ಮುಕ್ತ ಮಾಡುವ ಸಂಕಲ್ಪ ಮಾಡೋಣ.. –ಆರ್ ಅಶೋಕ್ 

 

 

joshi

ಕೇಂದ್ರದಲ್ಲಿ ಮೋದಿ ಸರ್ಕಾರ ಬಂದ ನಂತ್ರ ಭ್ರಷ್ಟಾಚಾರ ಸಂಪೂರ್ಣ ನಿಂತು ಹೋಗಿದೆ… ಆದ್ರೆ ರಾಜ್ಯದಲ್ಲಿ ಸಚಿವ ಬಾಬುರಾವ್ ಚಿಂಚನಸೂರು ಮೇಲೆ ಬಂದಿರುವ ಆರೋಪ ನೋಡಿದ್ರೆ, ಇಡೀ ಸಂಪುಟ ಭ್ರಷ್ಟಾಚಾರದಲ್ಲಿ ಮುಳುಗಿದೆ ಅನ್ನೋದು ಸಾಬೀತಾಗಿದೆ… ಬಾತ್ ರೂಂ ನಲ್ಲಿ ಸ್ನಾನ ಮಾಡುವಾಗ ಎಲ್ಲರೂ ನಗ್ನವಾಗೇ ಇರ್ತಾರೆ…. ಆದ್ರೆ ಬಾಬೂರಾವ್ ಚಿಂಚನಸೂರ್ ತರದವರು ಭ್ರಷ್ಟಾಚಾರ ಮಾಡಿ ಹೊರಗೆ ನಗ್ನವಾಗುತ್ತಿದ್ದಾರೆ… ಕಾಂಗ್ರೆಸ್ ಸರ್ಕಾರದಲ್ಲಿ ಎಲ್ಲರೂ ಬ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ನಾವು ಕರ್ನಾಟಕವನ್ನು ಕಾಂಗ್ರೆಸ್ ಮುಕ್ತ ಮಾಡಬೇಕಾದ ಅಗತ್ಯವಿಲ್ಲ. ಸಿದ್ದರಾಮಯ್ಯ ನವರೆ ಕಾಂಗ್ರೆಸ್ ಮುಕ್ತ ಮಾಡುತ್ತಿದ್ದಾರೆ… -ಪ್ರಹ್ಲಾದ್ ಜೋಶಿ

 

eshwarappa

ಕೇಂದ್ರದಿಂದ ಬರ ಪರಿಹಾರಕ್ಕಾಗಿ ಬಂದ ಅನುದಾನವನ್ನು ರೈತರಿಗೆ ನೀಡದೇ ರಾಜ್ಯ ಸರ್ಕಾರ ಮೋಸ ಮಾಡಿದೆ. ಈ ಬಗ್ಗೆ ಶ್ವೇತಪತ್ರ ಹೊರಡಿಸಿ ಅಂದ್ರೆ ರಾಜ್ಯ ಸರ್ಕಾರ ತಪ್ಪು ಮಾಹಿತಿ ನೀಡ್ತಿದೆ. ಇದಕ್ಕಾಗಿ ಸಿದ್ಧರಾಮಯ್ಯ ಅವ್ರ ಹೆಸ್ರನ್ನು ಹೇಳಲು ನನಗೆ ನಾಚಿಕೆ ಆಗ್ತಿದೆ. -ಕೆ.ಎಸ್.ಈಶ್ವರಪ್ಪ

 

 

shettar

ಭ್ರಷ್ಟಾಚಾರದಲ್ಲಿ ಮುಳುಗಿರುವ ರಾಜ್ಯ ಸರ್ಕಾರವನ್ನ ಕಿತ್ತು ಹಾಕುವ ಸಂಕಲ್ಪ ಮಾಡಬೇಕು. ಭ್ರಷ್ಟಾಚಾರ ಮಾಡಿ ಸಿಕ್ಕಿ ಬಿದ್ದಿರುವ ಸಚಿವ ಬಾಬುರಾವ್ ಚಿಂಚನಸೂರು ನಾಪತ್ತೆಯಾಗಿದ್ದಾರೆ..  -ಜಗದೀಶ್ ಶೆಟ್ಟರ್

 

 

sadananda

ಕೇಂದ್ರದ ಎನ್ ಡಿ ಎ ಸರ್ಕಾರದ ಪ್ರಗತಿ ವಿಶ್ವದ ಗಮನ ಸೆಳೆದಿದೆ. ಆರ್ಥಿಕ ಸ್ಥಿತಿ ಉತ್ತಮವಾಗಿದೆ. ನೀಡಿದ ಭರವಸೆಯನ್ನು ಕೇಂದ್ರ ಸರ್ಕಾರ ಈಡೇರಿಸಿದೆ. ಜನರ ವಿಶ್ವಾಸವನ್ನು ಗಳಿಸಿದ್ದೇವೆ. -ಸದಾನಂದಗೌಡ, ಕೇಂದ್ರ ಸಚಿವ

 

 

 

ananth-kumarದಾವಣಗೆರೆ ಹೈಸ್ಕೂಲ್ ಮೈದಾನ ತುಂಬಿದಾಗಲೆಲ್ಲ ರಾಜ್ಯದಲ್ಲಿ ದೊಡ್ಡ ಪರಿವರ್ತನೆ ಆಗಿದೆ. ಹಿಂದೆ ಗೋಕಾಕ್ ಹೋರಾಟ, ರೈತ ಹೋರಾಟದ ಸಂದರ್ಭದಲ್ಲಿ ಈ ಮೈದಾನ ತುಂಬಿತ್ತು. ರಾಜ್ಯದಲ್ಲಿ ಬದಲಾವಣೆ ಆಗಿದೆ. ಈಗ ಮತ್ತೆ ಮೈದಾನ  ತುಂಬಿದೆ. ಬದಲಾವಣೆ ನಿಶ್ಚಿತ… -ಅನಂತಕುಮಾರ್, ಕೇಂದ್ರ ಸಚಿವ

 

 

yeddyurappa

ಮೋದಿ ಕಾರ್ಯ ವಿಶ್ವಕ್ಕೆ ಮಾದರಿ. ಭ್ರಷ್ಟ ಮುಕ್ತ ಸರ್ಕಾರ ಕೊಡಬೇಕೆಂಬ ಆಶಯ ಈಗ ಈಡೇರಿದೆ. ರಾಜ್ಯದಲ್ಲಿ ಭ್ರಷ್ಟಾಚಾರದಿಂದ ಕೂಡಿದ ಸರ್ಕಾರವಿದೆ.ರಾಜ್ಯದ ಜನರು ರೋಸಿ ಹೋಗಿದ್ದಾರೆ. ಇಲ್ಲಿನ ಕಾಂಗ್ರೆಸ್ ಸರ್ಕಾರವನ್ನ ಕಿತ್ತು ಹಾಕಬೇಕು. ಇದಕ್ಕೆ ನನ್ನೊಂದಿಗೆ ಕೈಜೋಡಿಸಿ. ಕಾಂಗ್ರೆಸ್ ಮುಕ್ತ ಭಾರತ  ಪ್ರಧಾನಿ ಮೋದಿಯ ಅಭಿಲಾಷೆಯಾಗಿದೆ. ಇದನ್ನು ನಾವೆಲ್ಲ ಸೇರಿ ಈಡೇರಿಸೋಣ…  -ಯಡಿಯೂರಪ್ಪ, ರಾಜ್ಯಾಧ್ಯಕ್ಷ ಬಿಜೆಪಿ

 

 

ಸಿದ್ಧರಾಮಯ್ಯಗೆ ಸವಾಲು ಹಾಕಿದ ಯಡಿಯೂರಪ್ಪ, ಅಹಿಂದ ವರ್ಗಕ್ಕೆ ನೀವು ಮೂರು ವರ್ಷದಲ್ಲಿ ಕೊಟ್ಟ ಕೊಡುಗೆ ಏನು..? ನಿಮ್ಮ ಸರ್ಕಾರದ ಅವಧಿಯಲ್ಲಿ ನೀವು ಕೊಟ್ಟ ಕೊಡುಗೆ ಏನು ? ಅಂತ ಅವಲೋಕಿಸಿಕೊಳ್ಳಿ ಎಂದು ಗುಡುಗಿದರು. ಇದೇ ಸಂದರ್ಭದಲ್ಲಿ ರಾಜ್ಯವನ್ನು ಕಾಂಗ್ರೆಸ್ ಮುಕ್ತ ಮಾಡುತ್ತೇವೆ ಎಂದು ವೇದಿಕೆಯಲ್ಲಿ ಪ್ರಧಾನಿ ಮೋದಿಗೆ ಭರವಸೆ ಕೊಟ್ಟರು.

 

 

Comments are closed.