ಮುಸ್ತಫಾಗೆ ಎಂಗೇಜ್ ಆದ್ರು ಪ್ರಿಯಾಮಣಿ

indextrtrt rfretr

ದಕ್ಷಿಣ ಭಾರತದ ಚಿತ್ರರಸಿಕರ ಮನಗೆದ್ದ ನಟಿ ಪ್ರಿಯಾಮಣಿ ಮತ್ತೆ ಸುದ್ದಿಯಲ್ಲಿದ್ದಾರೆ. ತಮ್ಮ ಬಹುದಿನದ ಗೆಳೆಯನೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿರುವ ಬಗ್ಗೆ ಅಧಿಕೃತವಾದ ಮಾಹಿತಿಯನ್ನ ಹೊರ ಹಾಕಿದ್ದಾರೆ. ತಮ್ಮ ಟ್ವಿಟರ್ ಅಕೌಂಟ್ ನಲ್ಲಿ ಬಾಯ್ ಫ್ರೆಂಡ್ ಮುಸ್ತಫಾ ರಾಜ್ ಜೊತೆ ಎಂಗೇಜ್ಮೆಂಟ್ ಮಾಡಿಕೊಂಡ ಬಗ್ಗೆ ಮಾಹಿತಿಯನ್ನ ರವಾನಿಸಿದ್ದಾರೆ.

priya1

ಮೇ 27ರಂದು ಬೆಂಗಳೂರಿನ ಬನಶಂಕರಿ ನಿವಾಸದ ಸಮೀಪವಿರುವ ತಮ್ಮ ನಿವಾಸದಲ್ಲಿ ಮುಸ್ತಫಾರೊಂದಿಗೆ ನಿಶ್ಚಿತಾರ್ಥವನ್ನ ಮಾಡಿಕೊಂಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಪ್ರಿಯಾಮಣಿಯ ಹತ್ತಿರದ ಸಂಬಂಧಿಕರು ಹಾಗು ಆಪ್ತರಷ್ಟೇ ಭಾಗವಹಿಸಿದ್ದರು. ಇದು ವಯುಕ್ತಿಕ ಹಾಗು ಖಾಸಗಿ ಸಮಾರಂಭ ಆಗಿದ್ದರಿಂದ ಚಿತ್ರರಂಗಕ್ಕೆ ಹಾಗು ಅಭಿಮಾನಿಗಳಿಗೆ ಆಹ್ವಾನವಿರಲಿಲ್ಲ.

ಇನ್ನು ಕೆಲವು ಮೂಲಗಳ ಪ್ರಕಾರ ಕೆಲವು ವರ್ಷಗಳ ಹಿಂದೆ ಐಪಿಎಲ್ ಮ್ಯಾಚ್ ನಡೆಯುವಾಗ ಪ್ರಿಯಾಮಣಿ ಮೊದಲು ಮುಸ್ತಫಾರನ್ನ ಭೇಟಿಯಾಗಿದ್ದರು. ಅಂದು ನಡೆದ ಕಾರ್ಯಕ್ರಮವನ್ನ ಮುಸ್ತಫಾ ಅವರ ಇವೆಂಟ್ ಮ್ಯಾನೇಜ್ಮೆಂಟ್ ಕಂಪನಿ ನಡೆಸಿಕೊಡುತ್ತಿತ್ತು. ಅಲ್ಲಿಂದ ಇವರಿಬ್ಬರ ಪರಿಚಯ ಸ್ನೇಹಕ್ಕೆ ತಿರುಗಿದ ಬಳಿಕ  ಇಬ್ಬರ ಡೇಟಿಂಗ್ ಶುರುವಾಗಿತ್ತು.

ಸ್ವತ: ಪ್ರಿಯಾಮಣೆಯವರೇ ಸಂದರ್ಶನವೊಂದರಲ್ಲಿ ತಾವೇ ಮುಸ್ತಫಾ ರಾಜ್ ಗೆ ಪ್ರಪೋಸ್ ಮಾಡಿರುವುದಾಗಿ ಹೇಳಿಕೊಂಡಿದ್ದಾರೆ. ಈಗ ನಿಶ್ಚಿತಾರ್ಥ ಮಾಡಿಕೊಂಡಿರೋ ಈ ಜೋಡಿ ಈ ವರ್ಷದ ಕೊನೆಯಲ್ಲಿ ಹಸೆಮಣೆ ಏರುವ ಸಾಧ್ಯತೆಗಳಿವೆ. ಈ ಶುಭ ಸುದ್ದಿ ತಿಳಿದ ಕೂಡಲೇ ನಟಿಯಾದ ಜೆನಿಲಿಯಾ ದೇಶ್ಮುಖ್, ಟಾಲಿವುಡ್ ನಿರ್ದೇಶಕ ಪುರಿಜಗನ್ನಾಥ್ ಮತ್ತಿತರರು ಶುಭಕೋರಿದ್ದಾರೆ.

Comments are closed.

Social Media Auto Publish Powered By : XYZScripts.com