ದೊಡ್ಮೆನೆ ಹುಡುಗನಿಂದ ಅಂಬಿಗೆ ಸಿಕ್ಕ ಬರ್ತ್ ಡೇ ಗಿಫ್ಟ್

ರೆಬಲ್ ಸ್ಟಾರ್ ಅಂಬರೀಷ್ ಗೆ ಇದು ಹುಟ್ಟುಹಬ್ಬದ ಸಂಭ್ರಮ. ಮಧ್ಯರಾತ್ರಿ 12 ಗಂಟೆಯಿಂದಲೇ ಅಭಿಮಾನಿಗಳೊಂದಿಗೆ  64ನೇ ಬರ್ತ್ ಡೇ ಅನ್ನ ಆಚರಿಸಿಕೊಳ್ಳುತ್ತಿದ್ದಾರೆ ಅಂಬಿ. ಈ ಸಂದರ್ಭದಲ್ಲಿ ಸ್ಯಾಂಡಲ್ ವುಡ್ ಕೂಡ ಕಲಿಯುಗದ ಕರ್ಣನಿಗೆ ಸೂಪರ್ ಗಿಫ್ಟ್ ಅನ್ನ ಕೊಟ್ಟಿದೆ.

ಪುನೀತ್ ರಾಜ್ ಕುಮಾರ್ ನಟಿಸುತ್ತಿರುವ, ಈ ವರ್ಷದ ಬಹುನಿರೀಕ್ಷೆಯ ಸಿನಿಮಾ ದೊಡ್ಮನೆ ಹುಡುಗ. ಇದರಲ್ಲಿ ರೆಬಲ್ ಸ್ಟಾರ್ ಅಂಬರೀಷ್ ಇದೇ ಮೊದಲ ಬಾರಿಗೆ ಪುನೀತ್ ಜೊತೆ ತೆರೆಯನ್ನ ಹಂಚಿಕೊಂಡಿದ್ದಾರೆ. ಇಲ್ಲಿ ಪವರ್ ಸ್ಟಾರ್ ಗೆ ತಂದೆಯಾಗಿ ನಟಿಸಿದ್ದಾರೆ ಅಂಬಿ. ಹೀಗಾಗಿ ಬರ್ತ್ ಡೇ ದಿನದಂದೇ ಈ ಚಿತ್ರದ ಟೀಸರ್ ಅನ್ನ ಹೊರಬಿಟ್ಟು ವಿಶ್ ಮಾಡಿದೆ ಚಿತ್ರತಂಡ.

ದೊಡ್ಮನೆ ಹುಡುಗ ಚಿತ್ರದಲ್ಲಿ ಡಾ.ಅಂಬರೀಷ್ ಜೊತೆ ಸುಮಲತಾ ಅಂಬರೀಷ್ ಕೂಡ ಅಬಿನಯಿಸಿರುವುದು ವಿಶೇಷ. ಇವರೊಂದಿಗೆ ಡಾ.ಭಾರತಿ ವಿಷ್ಣುವರ್ಧನ್, ರಾಧಿಕಾ ಪಂಡಿತ್, ರವಿಶಂಕರ್ ಮತ್ತಿತ್ತರ ದೊಡ್ಡ ಕಲಾವಿದರ ತಂಡವಿದೆ.

 

 

Comments are closed.