ಅಂಬಿ ಗಿಫ್ಟ್ ಕೇಳಿದ್ದಕ್ಕೆ ಪತ್ನಿ ಹೇಳಿದ್ದೇನು..?

karna+story_650_071714012116

ರೆಬೆಲ್ ಸ್ಟಾರ್ ಅಂಬರೀಶ್‌ಗೆ ಇಂದು(ಮೇ೨೯) ೬೪ನೇ ವರ್ಷದ ಹುಟ್ಟುಹಬ್ಬ. ಅಭಿಮಾನಿಗಳ ಜೊತೆ ಅಂಬಿ ಅದ್ದೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಂಡರು. ಬರ್ತ್ ಡೇ ಅಂದಮೇಲೆ ಉಡುಗೊರೆ ಸಾಮಾನ್ಯ. ಆದರೆ ಈ ವರ್ಷ ಅಂಬರೀಶ್‌ಗೆ ಪತ್ನಿ ಸುಮಲತಾ ಯಾವುದೇ ಗಿಫ್ಟ್ ಕೊಟ್ಟಿಲ್ಲವಂತೆ. ಈ ಮಾತನ್ನ ಖುದ್ದು ರೆಬೆಲ್ ಸ್ಟಾರ್ ಹೇಳಿಕೊಂಡಿದ್ದಾರೆ.

ಸಾಮಾನ್ಯವಾಗಿ ಹುಟ್ಟುಹಬ್ಬ, ಮದುವೆ ವಾರ್ಷಿಕೋತ್ಸವದಂತಹ ಸಂತಸದ ಸಂದರ್ಭಗಳಲ್ಲಿ ಗಂಡ, ಹೆಂಡತಿಗೆ ಅಥವಾ ಹೆಂಡತಿ, ಗಂಡನಿಗೆ ಉಡುಗೊರೆ ಕೊಡೋದು ಮಾಮೂಲು. ಆ ಉಡುಗೊರೆ ಅವರವರ ಅನುಕೂಲಕ್ಕೆ ತಕ್ಕಂತೆ ಇರುತ್ತದೆ. ಗಿಫ್ಟ್ ಇಲ್ಲ ಅಂದರೆ ಆ ದಿನ ಪರಿಪೂರ್ಣ ಆಗೋದೇ ಇಲ್ಲವೇನೊ. ಶ್ರೀಮಂತರಂತೂ ಬೆಳೆಬಾಳುವ ವಾಚ್, ಕಾರ್, ಮನೆ ಹೀಗೆ ಏನಾದರೂ ಸಪ್ರೈಜ್ ಗಿಫ್ಟ್ ಕೊಡೋದು ವಾಡಿಕೆ.

ಆದರೆ ಈ ವರ್ಷ ಅಂಬಿ ಬರ್ತ್ ಡೇಗೆ ಅವರ ಪತ್ನಿಯಿಂದ ಯಾವುದೇ ಉಡುಗೊರೆ ಸಿಕ್ಕಿಲ್ಲವಂತೆ. ಏನ್ ಸಾರ್ ‘ಸುಮಲತಾ ಮೇಡಂ ಏನ್ ಗಿಫ್ಟ್ ಕೊಟ್ರು’ ಅಂತ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಅಯ್ಯೋ ಏನು ಗಿಫ್ಟ್ ಕೊಡ್ಲಿಲ್ಲ. ೨೦ ಲಕ್ಷದ್ ಏನಾದ್ರೂ ಕೊಡಬಾರದೇ ಅಂತ ನಾನು ಕೇಳ್ದೆ ಅದಕ್ಕೆ ಸುಮಲತಾ ‘ನಾನೇ ಇಲ್ವಾ ಕೊಹಿನೂರ್ ಡೈಮಂಡ್. ನನಗಿಂತ ಗಿಫ್ಟ್ ಬೇಕಾ ನಿಮಗೆ’ ಅಂತ ನುಣುಚಿಕೊಂಡರು. ಅಂತ ಅಂಬಿ ತಮ್ಮದೇ ಶೈಲಿಯಲ್ಲಿ ನಗೆ ಚಟಾಕಿ ಹಾರಿಸಿದರು.

ಒಟ್ಟಿನಲ್ಲಿ ಅಭಿಮಾನಿಗಳ ಶುಭ ಹಾರೈಕೆಯೊಂದಿಗೆ ರೆಬಲ್ ಸ್ಟಾರ್ ೬೫ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಅವರು ಹೀಗೆ ನಗುನಗುತ್ತಾ ಇನ್ನಷ್ಟು ವರ್ಷ ಬಾಳಲಿ. ಮತ್ತಷ್ಟು ಸಿನಿಮಾಗಳಲ್ಲಿ ನಟಿಸಿ ಎಲ್ಲರನ್ನ ರಂಜಿಸಲಿ ಅನ್ನೋದು ಎಲ್ಲರ ಹಾರೈಕೆ.

Comments are closed.