ಟ್ರಾಫಿಕ್ ಸಮಸ್ಯೆಗೆ ಪರಿಹಾರ: ಬಸ್ ಕೆಳಗೆ ನುಗ್ಗಿಸಿ ಬೈಕ್, ಕಾರನ್ನ

ದಿನ ಬೆಳಗಾದ್ರೆ ಅದೇ ಆಫೀಸ್ ಗೆ ಹೋಗಬೇಕಲ್ಲ ಅನ್ನೋ ಬೇಸರಕ್ಕಿಂತ ಟ್ರಾಫಿಕ್ ನ ತಲೆನೋವೆ ಹೆಚ್ಚು. ಯಾವಾಗ ಹೋಗಬೇಕಾಗಿರೋ ಜಾಗ ಮುಟ್ತೀವಪ್ಪ ಅಂತಾನೇ ಎಲ್ರೂ ಟೆನ್ಷನ್ ಮಾಡ್ಕೋತಾ ಇರ್ತಾರೆ. ಅಂಥ ತಲೆ ಬಿಸಿ ಇನ್ನೂ ಕೆಲವೇ ವರ್ಷಗಳಲ್ಲಿ ಮಂಗಮಾಯವಾಗಿದೆ ಅಂತಿದೆ ಚೀನಾದ ತಂತ್ರಜ್ಞಾನ.

ಹೌದು! ಕಿಕ್ಕಿರಿದ ಟ್ರಾಫೀಕ್ ಚೀನಾದ ಟೆಕ್ ಪಂಡಿತರು ಭಾರೀ ಹಾಗೂ ಸರಳ ಉಪಾಯವೊಂದನ್ನ ಕಂಡುಹಿಡಿದಿದ್ದಾರೆ. ಅದುವೇ ಎಲೆವೇಟೆಡ್ ಬಸ್. ಇದ್ರಲ್ಲೇನು ವಿಶೇಷ ಅಂದ್ಕೋಬೇಡಿ. ಇಲ್ಲೇ ಇರೋದು ಮ್ಯಾಟರ್. ಇದು ಎಂಥಾ ಬಸ್ ಅಂದ್ರೆ ಇದ್ರ ಕೆಳಗಿಂದಲೇ ಕಾರು, ಆಟೋ, ಬೈಕ್ ಗಳನ್ನ ಸರಾಗವಾಗಿ ನುಗ್ಗಿಸಿಕೊಂಡು ಹೋಗಬಹುದು. ವಿಶಾಲವಾದ ರಸ್ತೆಗಳನ್ನ ಬಳಸಿಕೊಂಡು ಅದರ ಮೇಲೆಯೇ ಈ ಬಸ್ ನ ಸಂಚಾರ ಆರಂಭಿಸಬಹುದು ಅನ್ನುತ್ತೆ ವಿನೂತನ ಟೆಕ್ನಾಲಜಿ.

transit-elevated-bus-1 futuristic-bus-560x330

ಚೀನಾದ ಬೀಜಿಂಗ್ ನಲ್ಲಿ ನಡೆಯುತ್ತಿರೋ 19ನೇ ಬೀಜಿಂಗ್ ಅಂತರಾಷ್ಟ್ರೀಯ ಟೆಕ್ ಎಕ್ ಪೋ ದಲ್ಲಿ ಈ ವಿಶಿಷ್ಟ ಮಾದರಿಯನ್ನ ಪ್ರದರ್ಶಿಸಲಾಗಿದ್ದು, ಮುಂದೊಂದು ದಿನ ಇದು ಸಾಕಾರಗೊಂಡರು ಅಚ್ಚರಿಯಯಿಲ್ಲ ಅಂತ ಹೇಳಲಾಗ್ತಿದೆ. ಇದ್ರಿಂದ ಟ್ರಾಫಿಕ್ ಕಿರಿಕಿರಿಗೆ ಸುಲಭ ಉಪಾಯ ಕಂಡುಕೊಳ್ಳಲಾಗುತ್ತೆ. ಜೊತೆಗೆ ಇದರ ನಿರ್ಮಾಣ ಕೂಡಾ ತೀರಾ ದುಬಾರಿಯೇನಲ್ಲವಂತೆ. ಹಾಗೇಯೇ ಇದ್ರಿಂದ ವಾಯುಮಾಲಿನ್ಯ ಕೂಡಾ ಗಣನೀಯವಾಗಿ ಕಡಿಮೆಯಾಗುತ್ತಂತೆ. ಹೀಗಾಗಿ ಎಲೆವೆಟೇಡ್ ಬಸ್ ಗೆ ಭಾರೀ ಬೇಡಿಕೆ ಸೃಷ್ಟಿಯಾದ್ರು ಅಚ್ಚರಿಯಿಲ್ಲ.

https://www.youtube.com/watch?v=APybYjcm_j4&noredirect=1

One thought on “ಟ್ರಾಫಿಕ್ ಸಮಸ್ಯೆಗೆ ಪರಿಹಾರ: ಬಸ್ ಕೆಳಗೆ ನುಗ್ಗಿಸಿ ಬೈಕ್, ಕಾರನ್ನ

 • October 25, 2017 at 9:21 AM
  Permalink

  i need cash today
  [url=http://paydayonlinemoney.com/]online cash advance loan[/url]
  2000 personal loan
  fast money

Comments are closed.

Social Media Auto Publish Powered By : XYZScripts.com