ಬಾಂಬ್ ಕಾಂಬಿನೇಷನ್ ಯಾವುದು ಗೊತ್ತಾ ?

srimurali

ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಮತ್ತೊಂದು ಮಲ್ಟಿ ಸ್ಟಾರರ್ ಸಿನಿಮಾದಲ್ಲಿ ನಟಿಸೋಕೆ ಒಪ್ಪಿಕೊಂಡಿದ್ದಾರೆ. ಸದ್ಯ ಶಿವಣ್ಣ-ಸುದೀಪ್ ಅಭಿನಯದ ಕಲಿ ಸಿನಿಮಾದ ಪ್ರೀಪ್ರೊಡಕ್ಷನ್ ಕೆಲಸ ಭರದಿಂದ ಸಾಗಿದೆ. ಇದರ ಮಧ್ಯೆ ಹೊಸದೊಂದು ಬಹುತಾರಾಗಣದ ಚಿತ್ರಕ್ಕೆ ಹ್ಯಾಟ್ರಿಕ್ ಹೀರೊ ಎಸ್ ಅಂದಿದ್ದಾರೆ.

ಸೆಂಚುರಿ ಸ್ಟಾರ್ ಶಿವಣ್ಣ, ರೋರಿಂಗ್ ಸ್ಟಾರ್ ಶ್ರೀಮುರಳಿ ಕಾಂಬಿನೇಷನ್‌ನಲ್ಲಿ ಸಿನಿಮಾವೊಂದು ಸೆಟ್ಟೇರಲಿದೆ. ಖುದ್ದು ಶ್ರೀಮುರಳಿ ತಮ್ಮ ಟ್ವಿಟರ್ ಖಾತೆಯಲ್ಲಿ ಈ ವಿಚಾರವನ್ನ ಹಂಚಿಕೊಂಡಿದ್ದಾರೆ. ಚಿತ್ರದ ಟೈಟಲ್ ಇನ್ನೂ ಕನ್ಫರ್ಮ್ ಆಗಿಲ್ಲ. ಈ ವಿಷಯ ಕೇಳಿ ಹ್ಯಾಟ್ರಿಕ್ ಹೀರೊ, ರೋರಿಂಗ್ ಸ್ಟಾರ್ ಫ್ಯಾನ್ಸ್ ಖುಷ್ ಆಗಿರೋದಂತೂ ನಿಜ.

ಶಿವರಾಜ್ ಕುಮಾರ್, ಶ್ರೀ ಮುರಳಿ ಸೋದರ ಸಂಬಂಧಿಗಳಾದ್ರೂ ಈವರೆಗೆ ಒಂದಾಗಿ ನಟಿಸಿರಲಿಲ್ಲ. ಮುರಳಿ ಸಹೋದರ ವಿಜಯ ರಾಘವೇಂದ್ರ ರಿಷಿ ಚಿತ್ರದಲ್ಲಿ ಶಿವರಾಜ್‌ಕುಮಾರ್ ಜೊತೆ ಸ್ಕ್ರೀನ್ ಶೇರ್ ಮಾಡಿಕೊಂಡಿದ್ದರು. ಮರಳಿ ‘ಭಜರಂಗಿ’ ಚಿತ್ರದ ಹಾಡಿನಲ್ಲಿ ಶಿವಣ್ಣನ ಜೊತೆ ಹೆಜ್ಜೆಹಾಕಿದ್ದು ಬಿಟ್ರೆ ಇದೇ ಮೊದಲ ಬಾರಿಗೆ ಶಿವಣ್ಣನ ಜೊತೆ ಅಭಿನಯಿಸ್ತಿದ್ದಾರೆ. ಅಂದಹಾಗೆ ಈ ಚಿತ್ರವನ್ನ ಜಯಣ್ಣ-ಭೋಗೇಂದ್ರ ನಿರ್ಮಾಣ ಮಾಡ್ತಿದ್ದಾರೆ.

ಶಿವಣ್ಣ-ಶ್ರೀ ಮುರಳಿಯವರನ್ನ ಒಂದೇ ಚಿತ್ರದಲ್ಲಿ ತೋರಿಸೋಕೆ ಹೊರಟಿರೋದು ಯುವ ನಿರ್ದೇಶಕ ನರ್ತನ್. ಅಂದಹಾಗೆ ನಿರ್ದೇಶಕರಿಗಿದು ಚೊಚ್ಚಲ ಸಿನಿಮಾ. ಶ್ರೀ ಮುರಳಿಯವರ ಸೂಪರ್ ಹಿಟ್ ಉಗ್ರಂ ಸಿನಿಮಾದಲ್ಲಿ ಇವರು ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಆದ್ರೀಗ ಮೊದಲ ಪ್ರಯತ್ನದಲ್ಲೇ ಹ್ಯಾಟ್ರಿಕ್ ಹೀರೊ ಮತ್ತು ಶ್ರೀಮುರಳಿಯವರನ್ನ ಡೈರೆಕ್ಟ್ ಮಾಡೋ ಲಕ್ಕಿ ಛಾನ್ಸ್ ಪಡೆದುಕೊಂಡಿದ್ದಾರೆ ನರ್ತನ್.

ಶೀಘ್ರದಲ್ಲೇ ಚಿತ್ರದ ಟೈಟಲ್ ಮತ್ತಿರರ ವಿಚಾರವನ್ನ ಅನೌನ್ಸ್ ಮಾಡಲಿದೆ ಚಿತ್ರತಂಡ. ಎಲ್ಲಾ ಅಂದುಕೊಂಡಂತೆ ಆದರೆ ಆದಷ್ಟು ಬೇಗ ಈ ಮಲ್ಟಿ ಸ್ಟಾರರ್ ಮೂವಿ ಸೆಟ್ಟೇರಲಿದೆ.

Comments are closed.

Social Media Auto Publish Powered By : XYZScripts.com