ಮೈತ್ರಿಯಾ ಗೌಡಗೆ ಜೈಲು…ಜಸ್ಟ್ ಮಿಸ್ !

maithriya

ಚಿತ್ರನಟಿ ಮೈತ್ರಿಯಾ ಗೌಡಗೆ ಹಳೆಯ ಅಪರಾಧವೊಂದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿದೆ. ಅದರ ಬೆನ್ನಲ್ಲೇ ಜಾಮೀನು ಕೂಡಾ ದೊರೆತಿದೆ. ಮೃತ್ರಿಯಾ ಜೊತೆಗಿದ್ದ ಆಕೆಯ ಸಹೋದರಿ ಮತ್ತು ಇಬ್ಬರು ಗೆಳತಿಯರಿಗೂ ತಲಾ ಒಂದೊಂದು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.

ಮೇ 17, 2011ರಂದು ತಂಗಿ ಸುಪ್ರಿಯಾ ಮತ್ತು ರೂಪಾ, ರೇಖಾ ಎನ್ನುವ ತನ್ನಿಬ್ಬರು ಗೆಳತಿಯರ ಜೊತೆಗೆ ಮೈತ್ರಿಯಾ ಕಾರಿನಲ್ಲಿ ಹೋಗುತ್ತಿದ್ದರು. ಬಸವೇಶ್ವರನಗರ ಸರ್ಕಲ್ ಬಳಿ ಮೊಬೈಲ್ ನಲ್ಲಿ ಮಾತನಾಡುತ್ತಲೇ ಕಾರು ಚಲಾಯಿಸುತ್ತಿದ್ದ ಮೈತ್ರಿಯಾರನ್ನು ಸಂಚಾರಿ ಪೋಲೀಸ್ ಪೇದೆ ಶಿವಕುಮಾರ್ ತಡೆದಿದ್ದರು. ಅವರ ಪ್ರಶ್ನಗೆ ಕೋಪಗೊಂಡ ಮೈತ್ರಿಯಾ ಶಿವಕುಮಾರ್ ಕಾಲಿನ ಮೇಲೆ ಚಕ್ರ ಹರಿಸಿದ್ದರು. ಅಷ್ಟೇ ಅಲ್ಲ, ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಅವರ ಮೇಲೆ ಹಲ್ಲೆ ಮಾಡಿದ್ದರು.

court-magistrate

ಮೈತ್ರಿಯಾ ಇಷ್ಟೆಲ್ಲಾ ಮಾಡುತ್ತಿರುವಾಗ ಅವರನ್ನು ತಡೆಯುವ ಬದಲು ಜೊತೆಗಿದ್ದ ಮೂವರು ಮಹಿಳೆಯರು ಮೈತ್ರಿಯಾ ಜೊತೆಗೆ ಪೇದೆ ಶಿವಕುಮಾರ್ ನ್ನು ತಾವೂ ನಿಂದಿಸಿದ್ದರು. ಅಲ್ಲದೇ ಮೈತ್ರಿಯಾಗೆ ಹಲ್ಲೆ ನಡೆಸಲು ಸೋದರಿ ಹಾಗೂ ಸಂಬಂಧಿಗಳು ಸಹಕರಿಸಿದ್ದರು. ಈ ಸಂಬಂಧ ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈತ್ರಿಯಾ ಗೌಡ ಈ ಹಿಂದೆ ಆರು ದಿನ ನ್ಯಾಯಾಂಗ ಬಂಧನ ಕೂಡ ಎದುರಿಸಿದ್ದರು.

ಮೂರು ವರ್ಷಕ್ಕಿಂತ ಕಡಿಮೆ ಅವಧಿ ಶಿಕ್ಷೆ ಪ್ರಕಟವಾದರೆ ಮೇಲ್ಮನವಿಗೆ ಅವಕಾಶವಿದೆ. ಇದರಿಂದ ಸೆಷನ್ಸ್ ನ್ಯಾಯಾಲಯಕ್ಕೆ ನಟಿ ಮೈತ್ರಿಯಾಗೌಡ ಮೇಲ್ಮನವಿ ಸಲ್ಲಿಸಿದ್ದರು. ಶಿಕ್ಷೆ ಪ್ರಮಾಣ 3 ವರ್ಷಕ್ಕಿಂತ ಕಡಿಮೆ ಇದ್ದ ಕಾರಣಕ್ಕೆ 5ನೇ ಎಸಿಎಂಎಂ ನ್ಯಾಯಾಲಯ ಮೈತ್ರಿಯಾಗೌಡ ಸೇರಿ ನಾಲ್ವರಿಗೂ ಜಾಮೀನು ನೀಡಿದೆ. ಇದರಿಂದ ಬೀಸುವ ದೊಣ್ಣೆಯಿಂದ ಮೈತ್ರಿಯಾ ಗೌಡ ಸದ್ಯಕ್ಕಂತೂ ತಪ್ಪಿಸಿಕೊಂಡಿದ್ದಾರೆ.

Comments are closed.

Social Media Auto Publish Powered By : XYZScripts.com