ಬಾಬು ‘ಬ್ರಹ್ಮೋತ್ಸವಂ’ ದೂರಾದವ್ರನ್ನ ಒಂದು ಮಾಡುತ್ತಂತೆ !


bramha 3
ಮಹೇಶ್ ಬಾಬು ಅಭಿನಯದ ‘ಬ್ರಹ್ಮೋತ್ಸವಂ’ ಸಿನಿಮಾ ಮೇ ೨೦ರಂದು ಬಿಡುಗಡೆಯಾಗಲಿದೆ. ಈ ಚಿತ್ರದ ಬಗ್ಗೆ ತೆಲುಗು ಚಿತ್ರರಂಗದಲ್ಲಿ ಭಾರಿ ನಿರೀಕ್ಷೆಗಳಿವೆ. ಈ ಬಹುತಾರಾಗಣದ ಚಿತ್ರವನ್ನ ಶ್ರೀಕಾಂತ್ ಅಡ್ಡಾಲ ನಿರ್ದೇಶಿಸಿದ್ದಾರೆ. ಕಾಜಲ್ ಅಗರ್‌ವಾಲ್, ಸಮಂತ ಚಿತ್ರದಲ್ಲಿ ಪ್ರಿನ್ಸ್ ಮಹೇಶ್ ಬಾಬುಗೆ ನಾಯಕಿಯರು. ರಿಲೀಸ್‌ಗೂ ಮೊದಲೇ ಚಿತ್ರ ಹಲವು ದಾಖಲೆಗಳನ್ನು ನಿರ್ಮಿಸಿದೆ.

ಸದ್ಯ ರಿಲೀಸ್ ಆಗಿರೋ ಬ್ರಹ್ಮೋತ್ಸವಂ ಚಿತ್ರದ ಟ್ರೇಲರ್ ಗಮನ ಸೆಳೆಯುತ್ತಿದೆ. ಸಖತ್ ರಿಚ್ ಹಾಗೂ ಅಷ್ಟೇ ಸ್ಟೈಲಿಶ್ ಆಗಿ ಚಿತ್ರ ಮೂಡಿ ಬಂದಿರೋದು ಈ ದೃಶ್ಯ ತುಣುಕುಗಳಲ್ಲಿ ಗೊತ್ತಾಗುತ್ತದೆ. ಪ್ರತಿ ದೃಶ್ಯದಲ್ಲೂ ಸೂಪರ್ ಸ್ಟಾರ್ ಮಹೇಶ್ ಬಾಬು ಪ್ರಸೆನ್ಸ್ ಸಿಂಪ್ಲಿ ಸೂಪರ್.


ಬ್ರಹ್ಮೋತ್ಸವಂ ಪಕ್ಕಾ ಫ್ಯಾಮಿಲಿ ಎಂಟರ್‌ಟೈನರ್. ಸತ್ಯರಾಜ್, ರೇವತಿ, ಜಯಸುಧಾ, ಪ್ರಣೀತಾ, ನರೇಶ್, ತುಳಸಿ, ರಾವು ರಮೇಶ್ ಸೇರಿ ಭಾರಿ ತಾರಾಗಣ ಈ ಚಿತ್ರದಲ್ಲಿದೆ. ಸೀತಮ್ಮವಾಕಿಲ್ಲೋ ಸಿರಿಮಲ್ಲೆ ಚೆಟ್ಟುದಂತಹ ಸೂಪರ್ ಹಿಟ್ ಕೊಟ್ಟಿದ್ದ ಶ್ರೀಕಾಂತ್ ಅಡ್ಡಾಲ ಡೈರೆಕ್ಟ್ ಮಾಡಿರೋ ಮತ್ತೊಂದು ಸಿನಿಮಾ ಇದು. ಚಿತ್ರಕ್ಕೆ ಮಿಕ್ಕಿ ಜೆ ಮೇಯರ್ ರಾಗ ಸಂಯೋಜಿಸಿದ್ದಾರೆ. ಈಗಾಗಲೇ ಬ್ರಹ್ಮೋತ್ಸವಂ ಚಿತ್ರದ ರೈಟ್ಸ್ ಅಧಿಕ ಮೊತ್ತಕ್ಕೆ ಮಾರಾಟವಾಗಿ ಫಿಲ್ಮ್ ಇಂಡಸ್ಟ್ರಿಯಲ್ಲಿ ಸಂಚಲನ ಸೃಷ್ಟಿಸಿದೆ.

ದೂರಾದ ಕುಟುಂಬ ಸದಸ್ಯರನ್ನೆಲ್ಲಾ ನಾಯಕ ಒಂದು ಮಾಡೋದು ಬ್ರಹ್ಮೋತ್ಸವಂ ಚಿತ್ರದ ಒನ್ ಲೈನ್ ಸ್ಟೋರಿ. ತೆಲುಗಿನಲ್ಲಿ ಇಂಥಾ ಸಾಕಷ್ಟು ಸಿನಿಮಾಗಳು ಈಗಾಗಲೇ ಬಂದು ಹೋಗಿವೆ. ಆದರೂ ಹಳೆ ಕಥೆಯನ್ನ ಹೊಸದಾಗಿ ಪ್ರೇಕ್ಷಕರ ಮುಂದೆ ತರೋ ಯತ್ನದಲ್ಲಿದೆ ಶ್ರೀಕಾಂತ್ ಅಡ್ಡಾಲ ಟೀಮ್. ಖ್ಯಾತ ಛಾಯಾಗ್ರಾಹಕ ರತ್ನವೇಲು ಬ್ರಹ್ಮೋತ್ಸವಂ ಚಿತ್ರದ ಪ್ರತಿ ಫ್ರೇಮ್‌ನ್ನು ಚೆಂದಗಾಣಿಸೋ ಜವಾಬ್ದಾರಿ ಹೊತ್ತಿದ್ದಾರೆ.

ಪ್ರಿನ್ಸ್ ಮಹೇಶ್ ಬಾಬು ಅಭಿಮಾನಿಗಳು ಬ್ರಹ್ಮೋತ್ಸವಂ ಸಿನಿಮಾ ರಿಲೀಸ್ ಯಾವಾಗ ಅನ್ನೋ ನಿರೀಕ್ಷೆಯಲ್ಲಿದ್ದರು. ಧ್ವನಿಸುರಳಿ ಬಿಡುಗಡೆ ಸಮಾರಂಭದಲ್ಲಿ ಖುದ್ದು ಮಹೇಶ್ ಬಾಬು  ಮೇ೨೦ರಂದು ಚಿತ್ರ ತೆರೆಗೆ ಬರಲಿದೆ ಅಂತ ಘೋಷಿಸಿದ್ದಾರೆ. ಅಲ್ಲಿಗೆ ಸೂಪರ್ ಸ್ಟಾರ್ ಫ್ಯಾನ್ಸ್ ಪ್ರಶ್ನೆಗೆ ಉತ್ತರ ಸಿಕ್ಕಂತಾಗಿದೆ. ಎಲ್ಲಾ ಅಂದುಕೊಂಡಂತೆ ಆದರೆ ಎನ್ನೆರಡು ವಾರದಲ್ಲಿ ತೆಲುಗು ಚಿತ್ರರಂಗದಲ್ಲಿ ಬ್ರಹ್ಮೋತ್ಸವ ಶುರುವಾಗಲಿದೆ.

 

Comments are closed.

Social Media Auto Publish Powered By : XYZScripts.com