ಬರ ಪರಿಹಾರಕ್ಕೆ ಬೇಕು 12,272 ಕೋಟಿ… ಕೊಡೋರು ಯಾರು ?

bara2

ರಾಜ್ಯದಲ್ಲಿ ಭೀಕರ ಬರಗಾಲವು ಸಂಭವಿಸಿದ್ದು, ಕೇಂದ್ರ ಸರ್ಕಾರದಿಂದ ಹೆಚ್ಚುವರಿ ನೆರವು ಕೋರಿ ಮುಖ್ಯಮಂತ್ರಿ ಸಿದ್ಧರಾಮಯ್ಯ ನವದೆಹಲಿಯಲ್ಲಿ ಪ್ರಧಾನ ಮಂತ್ರಿಯವರ ಕಾರ್ಯಾಲಯದಲ್ಲಿ ಪಿ.ಎಂ. ಮೋದಿಯವರನ್ನ ಭೇಟಿ ಮಾಡಿ ಮನವಿ ಸಲ್ಲಿಸಿದರು.

ಕಳೆದ 44 ವರ್ಷಗಳಲ್ಲೇ ಅತೀ ಹೆಚ್ಚು ಭೀಕರ ಬರಪರಿಸ್ಥಿತಿ 2015-16 ಸಾಲಿನಲ್ಲಿ ಸಂಭವಿಸಿದೆ. ರಾಜ್ಯ ಸರ್ಕಾರವು 27 ಜಿಲ್ಲೆಗಳ 137 ತಾಲೂಕುಗಳನ್ನು ಮುಂಗಾರು ಮತ್ತು
ಹಿಂಗಾರು ಹಂಗಾಮಿನಲ್ಲಿ ಬರ ಪೀಡಿತ ತಾಲೂಕುಗಳೆಂದು ಘೋಷಿಸಿದೆ. 13 ಜಲಾಶಯಗಳಲ್ಲಿ ಕೇವಲ ಶೇ.18 ರಷ್ಟು ( 152 ಟಿಎಂಸಿ) ನೀರು ಸಂಗ್ರಹವಿದೆ. ರಾಜ್ಯದಲ್ಲಿ 29.96 ಲಕ್ಷ ಹೆಕ್ಷೇರ್ ಪ್ರದೇಶದಲ್ಲಿ ಕೃಷಿ ಹಾಗು ತೋಟಗಾರಿಕೆ ಬೆಳೆಗಳು ಹಾನಿಯಾಗಿದ್ದು, ರೂ.1563 ಕೋಟಿ ನಷ್ಟ ಸಂಭವಿಸಿದೆ. ಕರ್ನಾಟಕ ಸರ್ಕಾರವು ಈ ಹಿಂದೆ
ರೂ.3830 ಕೋಟಿ ನೆರವು ಕೋರಿ ಕೇಂದ್ರ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಿತ್ತು. ಕೇಂದ್ರ ಸರ್ಕಾರವು ಎನ್ಡಿಆರ್ಎಫ್ ನಡಿ ರೂ.1540 ಕೋಟಿ ಬಿಡುಗಡೆ ಮಾಡಿದೆ. ಈ
ಅನುದಾನವನ್ನು ಕೂಡಲೇ ಬರಪೀಡಿತ ಜಿಲ್ಲೆಗಳಿಗೆ ಬಿಡುಗಡೆಗೊಳಿಸಿ, 32 ಲಕ್ಷ ರೈತರಿಗೆ ನೇರವಾಗಿ ಆರ್ಟಿಜಿಎಸ್ ಮೂಲಕ ವಿತರಿಸಲಾಗಿದೆ. ಹಿಂಗಾರಿನಲ್ಲಿ 22.33 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಬೆಳೆಗಳು ಹಾನಿಯಾಗಿದ್ದು, ರೂ. 6733 ಕೋಟಿ ನಷ್ಟ ಸಂಭವಿಸಿದೆ. ರೂ.1417 ಕೋಟಿ ನೆರವು ನೀಡುವಂತೆ ಮನವಿಯನ್ನು ಸಲ್ಲಿಸಲಾಗಿದೆ. ಕೇಂದ್ರ ಗೃಹ ಸಚಿವರ ಅಧ್ಯಕ್ಷತೆಯ ಸಮಿತಿಯು NDRF ಅಡಿ ರೂ.723 ಕೋಟಿ ಅನುದಾನಕ್ಕೆ ಮಂಜೂರಾತಿ ನೀಡಬೇಕಾಗಿದ್ದು, ಇನ್ನೂ ಬಿಡುಗಡೆಯಾಗಿಲ್ಲ.

bara 1 drought2

ಕುಡಿಯುವ ನೀರು : ಜನವರಿ 2016ರವರೆಗೆ 1109 ಗ್ರಾಮಗಳಿಗೆ ಪ್ರತಿದಿನ 1598 ಟ್ಯಾಂಕರ್ ಗಳ ಮೂಲಕ ನೀರನ್ನು ಸರಬರಾಜು ಮಾಡಲಾಗಿದೆ. ಇದರ ಜೊತೆಗೆ 2071 ಗ್ರಾಮಗಳಿಗೆ ನೀರನ್ನು ಸರಬರಾಜು ಮಾಡಬೇಕಾಗುತ್ತದೆ. ನಗರ ಪ್ರದೇಶದ 493 ವಾರ್ಡುಗಳಗೆ 1739 ಟ್ಯಾಂಕರ್ಗಳ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಖಾಸಗಿ ಬೋರ್ ವೆಲ್ ಗಳನ್ನು  ಬಾಡಿಗೆಗೆ ಪಡೆಯಲಾಗಿದೆ. ಪ್ರತಿ ತಾಲ್ಲೂಕಿನಲ್ಲಿ ಕಂಟ್ರೋಲ್ ರೂಂಗಳನ್ನು ಸ್ಥಾಪಿಸಲಾಗಿದೆ. ಅವುಗಳಲ್ಲಿ ಉಚಿತ ಕರೆ ಮಾಡುವ ಮೂಲಕ ದೂರು ದಾಖಲಿಸಬಹುದು, ಪ್ರತಿ ದಿನ ಇದರ ಮೇಲುಸ್ತುವಾರಿ ಮಾಡಲಾಗುತ್ತಿದೆ. ಮೇವು : 12 ವಾರಗಳಿಗೆ ಪೂರೈಕೆ ಮಾಡುವಷ್ಟು 81.52 ಲಕ್ಷ ಮೆಟ್ರಿಕ್ ಟನ್ ಮೇವು ಸಂಗ್ರಹವಿದೆ. ಅತೀ ಹೆಚ್ಚು ಸಮಸ್ಯಾತ್ಮಕ ಪ್ರದೇಶದಲ್ಲಿ 23 ಗೋಶಾಲೆ(11539 ಜಾನುವಾರುಗಳು) ಮತ್ತು 104 ಮೇವಿನ ಬ್ಯಾಂಕ್ಗಳನ್ನು ತೆರೆಯಲಾಗಿದೆ. ಮೇವನ್ನು ಶೇ. 50ರಷ್ಟು ರಿಯಾಯಿತಿ ದರದಲ್ಲಿ ಮೇವು ( ಒಣ ಮೇವು ಪ್ರತಿ ಕೆಜಿಗೆ 3 ರೂ) ಅನ್ನು ವಿತರಿಸಲಾಗುತ್ತಿದೆ. ಹತ್ತು ಲಕ್ಷ ಮಿನಿ ಕಿಟ್ ಗಳನ್ನು ರೈತರಿಗೆ ವಿತರಿಸಲಾಗಿದೆ. ಎಸ್ಡಿಆರ್ಎಫ್ ನಡಿ ರೂ.25 ಕೋಟಿ ಸೇರಿದಂತೆ ರೂ.40 ಕೋಟಿ ಅನುದಾನವನ್ನು ಮೇವು, ಮಿನಿ ಕಿಟ್ ಹಾಗು ಔಷಧಿಯನ್ನು ಖರೀದಿಸಲು ಬಿಡುಗಡೆ ಮಾಡಲಾಗಿದೆ.

ಉದ್ಯೋಗ ಖಾತರಿ : ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ಉದ್ಯೋಗವನ್ನು ನೀಡಲಾಗುತ್ತಿದೆ. 2015-16 ನೇ ಸಾಲಿನಲ್ಲಿ 599.73 ಲಕ್ಷ ಮಾನವ ದಿನಗಳಷ್ಟು ಉದ್ಯೋಗ ನೀಡಲಾಗಿದೆ. 2014-15 ನೇ ಸಾಲಿನಲ್ಲಿ 434 ಲಕ್ಷ ಮಾನವ ದಿನಗಳಷ್ಟು ಉದ್ಯೋಗ ನೀಡಲಾಗಿತ್ತು. 1.33 ಲಕ್ಷ ಕುಟುಂಬಗಳು 100 ದಿನಗಳಿಗಿಂತ ಹೆಚ್ಚು ಉದ್ಯೋಗ ಪಡೆದಿವೆ. ಏಪ್ರಿಲ್ 2016ರಿಂದ 35.36 ಲಕ್ಷ ಮಾನವ ದಿನಗಳಷ್ಟುಉದ್ಯೋಗ ನೀಡಲಾಗಿದೆ.
ಪೌಷ್ಠಿಕಾಂಶ : ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಡಿ ಆಹಾರ ಧಾನ್ಯಗಳನ್ನು ಉಚಿತವಾಗಿ ವಿತರಿಸಲಾಗುತ್ತಿದೆ. 108 ಲಕ್ಷ ಕುಟುಂಬಗಳಿಗೆ 20,778 ನ್ಯಾಯ ಬೆಲೆ ಅಂಗಡಿಗಳ ಮೂಲಕ ವಿತರಿಸಲಾಗಿದೆ. ಬಿಪಿಎಲ್ ಕುಟುಂಬಗಳಿಗೆ ಒಂದು ಲೀಟರ್ ತಾಳೆ ಎಣ್ಣೆಯನ್ನು ರೂ.25ರಂತೆ ವಿತರಿಸಲಾಗುತ್ತಿದೆ. ಕ್ಷೀರಭಾಗ್ಯ ಯೋಜನೆಯಡಿ ಅಂಗನವಾಡಿ ಹಾಗು ಶಾಲೆಗಳಲ್ಲಿ ಮಕ್ಕಳಿಗೆ ವಾರದಲ್ಲಿ 3 ದಿನ 150 ಎಂಎಲ್ ಹಾಲು ಅನ್ನು ವಿತರಿಸಲಾಗುತ್ತಿದೆ. ಅಪೌಷ್ಠಿಕತೆ ಹೊಂದಿದ ಮಕ್ಕಳಿಗೆ ಅಂಗನವಾಡಿ ಕೇಂದ್ರಗಳಲ್ಲಿ ವಾರದಲ್ಲಿ 3 ದಿನ ಮೊಟ್ಟೆಯನ್ನು ನೀಡಲಾಗುತ್ತಿದೆ.
ಜಲ ಸಂವರ್ಧನೆ : 2015-16 ನೇ ಸಾಲಿನಲ್ಲಿ 34,756 ಹೊಲಗಳ ಅಭಿವೃದ್ಧಿ ಕಾಮಗಾರಿಯನ್ನು ಕೈಗೊಳ್ಳಲಾಗಿದೆ. 1562 ಕೆರೆಗಳು ಮತ್ತು 26631 ಕೊಳವೆ ಬಾವಿಗಳ ಪುನರುಜ್ಜೀವನ ಮಾಡಲಾಗಿದೆ. 1932 ನದಿ ಪುನರುಜ್ಜೀವನ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಹೆಚ್ಚುವರಿಯಾಗಿ 672 ಮಲ್ಟಿ ಆರ್ಚ್ ಚೆಕ್ ಡ್ಯಾಂಗಳನ್ನು ನಿರ್ಮಿಸಲಾಗಿದೆ. 10 ಜಿಲ್ಲೆಗಳಲ್ಲಿ ಸರಣಿ ಚೆಕ್ ಡ್ಯಾಂಗಳನ್ನು ನಿರ್ಮಿಸಲಾಗುತ್ತಿದೆ. ಅಂತರ್ಜಲವನ್ನು ಅಭಿವೃದ್ಧಿ ಪಡಿಸಲು 450 ಚೆಕ್ ಡ್ಯಾಂಗಳ ನಿರ್ಮಾಣ ಕಾಮಗಾರಿ ಪ್ರಗತಿಯ ಹಂತದಲ್ಲಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ ಅಂತರ್ಜಲ ಪುನರುಜ್ಜೀವನ ಹಾಗು ಕೋಲಾರದಲ್ಲಿ ಸಾಂಪ್ರದಾಯಿಕ ಕೊಳಗಳ ಪುನರುಜ್ಜೀವನ ಯೋಜನೆಗಳು ರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುತ್ತಿವೆ. 2015 -16 ನೇ ಸಾಲಿನಲ್ಲಿ ಜಮೀನಿನಲ್ಲಿ 64000 ಕೊಳಗಳನ್ನು ನಿರ್ಮಿಸಲಾಗಿದೆ. ಇದಕ್ಕಾಗಿ ರೂ. 823 ಕೋಟಿ ವಿನಿಯೋಗಿಸಲಾಗಿದೆ.
ಸಾಲಸೌಲಭ್ಯ : ಮಧ್ಯಮಾವಧಿ ಮತ್ತು ದೀರ್ಘಾವಧಿ ಸಾಲ ಮರುಪಾವತಿಗೆ ಅವಧಿ ವಿಸ್ತರಿಸಲಾಗಿದೆ. ಇದರಿಂದ 2,93,444 ರೈತರು ಫಲಾನುಭವಿಗಳಾಗಿದ್ದಾರೆ. 2,07,197
ರೈತರಿಗೆ ಹಿಂದಿನಿಂದಲೂ ಬಾಕಿ ಇದ್ದ ಕೃಷಿ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡಲಾಗಿದ್ದು, ಇದಕ್ಕಾಗಿ 250 ಕೋಟಿ ರೂ ನೆರವು ನೀಡಲಾಗಿದೆ. ಕೇಂದ್ರ ಸರ್ಕಾರದ ನೆರವು
ರಾಜಸ್ಥಾನವನ್ನು ಹೊರತು ಪಡಿಸಿದರೆ ಕರ್ನಾಟಕ ರಾಜ್ಯದಲ್ಲಿಯೇ ಅತೀ ಹೆಚ್ಚು ಬರಪೀಡಿತ ಪ್ರದೇಶವಿದೆ. 5 ವರ್ಷಗಳಿಂದ ರಾಜ್ಯ ಸತತವಾಗಿ ಬರಗಾಲಕ್ಕೆ ತುತ್ತಾಗಿದ್ದು ಇದನ್ನು ಎದುರಿಸಲು ರಾಜ್ಯ ಸರ್ಕಾರ ಹಲವಾರು ಅಲ್ಪಕಾಲೀನ ಮತ್ತು ದೀರ್ಘಕಾಲೀನ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದೆ. ಈ ಎಲ್ಲ ಬರಪರಿಹಾರ ಕಾಮಗಾರಿಗಳನ್ನು ಕಾರ್ಯಗತಗೊಳಿಸಲು ಕೇಂದ್ರ ಸರ್ಕಾರದಿಂದ ಹೆಚ್ಚಿನ ನೆರವನ್ನು ರಾಜ್ಯ ಸರ್ಕಾರ ನಿರೀಕ್ಷಿಸುತ್ತಿದೆ. ರಾಜ್ಯದಲ್ಲಿ ಅನುಷ್ಠಾನದಲ್ಲಿರುವ ಬರಪರಿಹಾರ ಕಾಮಗಾರಿಗಳಿಗೆ ಹೆಚ್ಚುವರಿ ನೆರವು ಹಾಗೂ ಪ್ರಸ್ತಾಪಿತ ಬರಪರಿಹಾರ ಯೋಜನೆಗಳಿಗೆ ವಿಶೇಷ ನೆರವಿನ ರೂಪದಲ್ಲಿ ರೂ. 12,272 ಕೋಟಿ ನೀಡಬೇಕೆಂದು ಕೇಂದ್ರ ಸರ್ಕಾರವನ್ನು ಕೋರಿದ್ದೇವೆ. ಇದರ ವಿವರ ಈ ಕೆಳಗಿನಂತಿದೆ.
ಕ್ರಸಂ. ವಿವರ ಮೊತ್ತ ( ರೂ. ಕೋಟಿ)
 1 .   ಗ್ರಾಮೀಣಾಭಿವೃದ್ಧಿ
*ಎನ್ಆರ್ಡಿಡಬ್ಯೂಪಿ 1206.32
*ಎಂಎನ್ಜಿಇಜಿಎ 786.59
*ಕೆರೆಗಳ ಪುನರ್ಜ್ಜೀವನ 2100
*ಆರ್ಓ ಪ್ಲಾಂಟ್ ಹಾಗು ನೀರು ಶುದ್ಧೀಕರಣ ಘಟಕ 100
2. ಕೃಷಿ ಹಾಗು ತೋಟಗಾರಿಕೆ
*ಜಮೀನಿನ ಕೊಳ ನಿರ್ಮಾಣ ಕಾಮಗಾರಿ 1200
*ಸೂಕ್ಷ್ಮ ನೀರಾವರಿ ( ಮೈಕ್ರೋ) 1870
*ಪಿಎಂಕೆಎಸ್ವೈ 250
*ಸದಾಕಾಲ( ಪೆರೆನಿಯಲ್)ಬೆಳೆಗಳ ಪುನರುಜ್ಜೀವನ 664
*ಶೇಡ್ ನೆಟ್ /ಪಾಲಿ ಹೌಸ್ 1000
3 ಜಲಸಂಪನ್ಮೂಲ
*ಎಐಬಿಪಿ ( 5 ಯೋಜನೆ) 1731.25
*200 ಕೆರೆಗಳ ಪುನರುಜ್ಜೀವನ 300.00
*3820 ಕೊಳವೆಬಾವಿಗಳ ಪುನರುಜ್ಜೀವನ 57.00
*400 ಬ್ಯಾರೇಜ್ಗಳ ದುರಸ್ತಿ 200.00
4. ಅರಣ್ಯ
*2933 ಚೆಕ್ ಡ್ಯಾಂಗಳ ನಿರ್ಮಾಣ 100.50
*12000 ಹೆಕ್ಟರ್ ಪ್ರದೇಶದಲ್ಲಿ ಅರಣ್ಯೀಕರಣ ಮತ್ತು ಪುನರ್ ಉತ್ಪಾದನೆ 70.00
*1248 ಕೆರೆಗಳ ದುರಸ್ತಿ ಮತ್ತು ಪುನರುಜ್ಜೀವನ 80.00
*6 ನಗರಾಭಿವೃದ್ಧಿ
*ಕೆರೆಗಳ ಹೂಳೆತ್ತುವುದು ಮತ್ತು ಕೊಳವೆ ಬಾವಿಗಳ ಪುನರುಜ್ಜೀವನ 250.00
*ನೀರಿನ ಶುದ್ದೀಕರಣ 40.00
*ನೀರು ಸರಬರಾಜು ಯೋಜನೆ 556
        ಒಟ್ಟು ಮೊತ್ತ 12,272

Comments are closed.

Social Media Auto Publish Powered By : XYZScripts.com