ಐ ಲವ್ ಮೈ ‘ಮದರ್’ ಇಂಡಿಯಾ !

 

ಮದರ್ಸ್ ಡೇ ಅಂದರೆ ಎಲ್ಲರಿಗೂ ಅದೆಲ್ಲಿಯದೋ ಸಂಭ್ರಮ. ಅವರ ಬಗ್ಗೆ ಹೇಳಿಕೊಳ್ಳಬೇಕು. ಅವರಿಗೆ ಚಂದದೊಂದು ವಿಶ್ ಮಾಡಬೇಕು. ಜಗತ್ತಿಗೆ ಅವರನ್ನ ಪರಿಚಯಿಸಬೇಕು. ಹೀಗೆ ನಾನಾ ಆಸೆಗಳು ಅಮ್ಮನನ್ನ ಪ್ರೀತಿಸುವ ಪ್ರತಿಯೊಬ್ಬರ ಆಸೆ ಆಗಿರುತ್ತದೆ. ಹಾಗೆ ಬಣ್ಣದ ಪ್ರಪಂಚದಲ್ಲಿರುವವರಿಗೂ ಈ ಆಸೆ ಇದೆ. ಹಾಗಾಗಿ ಬಾಲಿವುಡ್ ನ ಬಾಕ್ಸ್ ಆಫೀಸ್ ಬಾದ್ ಷಾ ಸಲ್ಮಾನ್ ಖಾನ್ ಕೂಡ ಸಲ್ಮಾ ಮತ್ತು ಹೆಲೆನ್ ಇಬ್ಬರು ತಾಯಿಯರೊಂದಿಗೆ ಕಂಡಿದ್ದು ಹೀಗೆ.

salman khan

ಕನ್ನಡ ಹಾಗು ತೆಲುಗು ಎರಡೂ ಚಿತ್ರರಂಗದಲ್ಲಿ ನಟಿಸುತ್ತಿರೋ ನಟಿ ಪ್ರಣೀತ. ಇವರಿಗೂ ತಾಯಿ ಅಂದರೆ ಎಲ್ಲಿಲ್ಲದ ಪ್ರೀತಿ. ಹೀಗಾಗಿ ಮದರ್ಸ್ ಡೇ ಅಂದು ಅಮ್ಮನ ಜೊತೆ ವಿದೇಶದಲ್ಲಿ ತೆಗೆಸಿಕೊಂಡ ಫೋಟೋ ಇದು. ಮೊನ್ನೆ ತಾನೇ ಜೆಸ್ಸಿಯ ಮೂಲಕ ಪ್ರೇಕ್ಷಕರನ್ನ ಮೋಡಿ ಮಾಡಿದ್ದ ಸ್ಯಾಂಡಲ್ವುಡ್ನ ಯುವ ನಟ ಧನಂಜಯ್. ಇನ್ನೂ ಹಲವು ಸಿನಿಮಾಗಳು ಥಿಯೇಟರ್ ಗೆ ಲಗ್ಗೆ ಇಡೋಕೆ ತುದಿಗಾಲಲ್ಲಿ ನಿಂತಿವೆ.. ಇಷ್ಟೊಂದು ಬ್ಯುಸಿಯಾಗಿದ್ದರು ಅಮ್ಮನಿಗೆ ವಿಶ್ ಮಾಡುವುದನ್ನ ಮರೆಯಲಿಲ್ಲ.

pranitha dhananjay

ರಾಜಾ ಹುಲಿ ಚಿತ್ರದ ಯಶಸ್ಸಿನಿಂದ ಕನ್ನಡದ ನೆಲದಲ್ಲಿ ಗಟ್ಟಿಯಾಗಿ ನೆಲೆಯೂರಿರುವ ನಟಿ ಮೇಘನಾ ರಾಜ್. ಹಿರಿಯ ನಟ ಸುಂದರ್ ರಾಜ್ ಹಾಗು ಪ್ರಮೀಳಾ ಜೋಷಾಯ್ ಅವ್ರ ಪುತ್ರಿಯಾಗಿರೋ ನಟಿ ಮೇಘನಾ ಮಲೆಯಾಳಂ ಸಿನಿಮಾಗಳಲ್ಲಿ ನಟಿಸಿದ್ದೇ ಹೆಚ್ಚು. ತನ್ನ ಬಾಲ್ಯದಿಂದ ಹಿಡಿದು ವೃತ್ತಿ ಜೀವನದ ಪ್ರತಿಯೊಂದು ಹಾದಿಯಲ್ಲೂ ಬೆನ್ನುಲುಬಾಗಿ ನಿಂತಿರುವ ಅಮ್ಮನಿಗೆ ನೆನಪಿಸಿಕೊಂಡಿದ್ದು ಈ ಫೋಟೋ ಮೂಲಕ.

meghanaraj

ಉಳಿದವರು ಈ  ನಟನನ್ನ ಹೇಗೆ ಕಂಡರೂ, ರಕ್ಷಿತ್ ಶೆಟ್ಟಿ ಸಿಂಪಲ್ ಹುಡುಗ ಅನ್ನುವುದು ಗೊತ್ತಿರುವ ಸಂಗತಿ. ಅದರಲ್ಲೂ ಅಮ್ಮನೊಂದಿಗೆ ಇರುವಾಗ ತೀರಾ ಸಿಂಪಲ್. ಅದಕ್ಕೆ ಈ ನಟ ಸ್ಯಾಂಡಲ್ ವುಡ್ ನ ಸಿಂಪಲ್ ಸ್ಟಾರ್. ಇನ್ನು ಇವರದ್ದೇ ರಿಕ್ಕಿ ಚಿತ್ರಕ್ಕೆ ನಾಯಕಿಯಾಗಿದ್ದ ಹರಿಪ್ರಿಯ ಅಮ್ಮನೊಂದಿಗೆ ಸ್ಟೈಲಿಷ್ ಆಗಿ ಕ್ಲಿಕ್ಕಿಸಿಕೊಂಡು ಸೆಲ್ಫಿ ಪಿಕ್ ಹೀಗಿದೆ ನೋಡಿ.

hari rakshit shetty

ಇನ್ನು ಟಾಲಿವುಡ್ನ ಸ್ಟೈಲಿಷ್ ಸ್ಟಾರ್ ಕೂಡ ತಮ್ಮ ಟ್ವಿಟರ್ ನಲ್ಲಿ ತಮ್ಮ ತಾಯಿಯೊಂದಿಗೆ ಸೆಲ್ಫಿ ತೆಗೆಸಿಕೊಂಡು ಮದರ್ಸ್ ಡೇ ಅನ್ನು ಆಚರಿಸಿದರು.

allu arjun

 

ತಾಯಂದಿರಿಗೆಲ್ಲರಿಗೂ ಮಕ್ಕಳೇ ಜಗತ್ತು. ಮಕ್ಕಳಿಗೆ ಅಮ್ಮನೇ ಪ್ರಪಂಚ. ಇದೊಂತರ ಭಾವನಾತ್ಮಕ ಸಂಬಂಧ. ಹಾಗಾಗಿ ಏನೇನಕ್ಕೋ ಒಂದೊಂದು ದಿನಾಚರಣೆಗಳಿರುವಂತೆ ಅಮ್ಮಂದಿರನ್ನು ನೆನೆಯಲು ಒಂದು ದಿನ ಅದುವೇ ‘ಅಮ್ಮಂದಿರ ದಿನ’.

ಈ ವಿಶೇಷ ದಿನದಂದು ಅಮ್ಮನ ಕುರಿತು ಕನ್ನಡದ ಖ್ಯಾತ ಕವಿ ಬಿ.ಎಸ್‌. ಲಕ್ಷ್ಮಣ್‌ ರಾವ್‌ ಬರೆದಿದ್ದು ಈ ಸಾಲು ಸದಾ ಕಾಲ ನೆನಪಿನಲ್ಲಿ ಉಳಿಯುತ್ತೆ.
‘ಅಮ್ಮಾ.. ನಿನ್ನ ಎದೆಯಾಳದಲ್ಲಿ ಗಾಳಕ್ಕೆ ಸಿಕ್ಕ ಮೀನು… ಮಿಡುಕಾಡುತಿರುವೆ ನಾನು…
ಕಡಿಯಲೊಲ್ಲೆ ನೀ ಕರುಳ ಬಳ್ಳಿ ಒಲವೂಡುತಿರುವ ತಾಯೇ… ಬಿಡದ ಭುವಿಯ ಮಾಯೆ..’

 

 

 

 

Comments are closed.

Social Media Auto Publish Powered By : XYZScripts.com