ಸ್ಯಾಂಡಲ್‌ವುಡ್‌ನಲ್ಲಿ ‘ತಿಥಿ’ ಸಂಭ್ರಮ ಬಲು ಜೋರು !

thithi999
ಒಂದು ಸಿನಿಮಾ ರಿಲೀಸ್ ಆಗುತ್ತಿದೆ ಅಂದರೆ, ಅದಕ್ಕೆ ಅಬ್ಬರದ ಪ್ರಚಾರ ಮಾಡಲೇ ಬೇಕು ಅಂತ ನಂಬಿರೋ ಫಿಲ್ಮ್ ಮೇಕರ್‌ಗಳೇ ಹೆಚ್ಚು.. ಅಂತಹದರಲ್ಲಿ ಇಲ್ಲೊಂದು ಚಿತ್ರ ದೊಡ್ಡ ದೊಡ್ಡ ಕಟ್‌ಔಟ್ ಇಲ್ಲದೆ, ಅವುಗಳನ್ನ ಹೂವಿನಿಂದ ಅಲಂಕರಿಸದೇ, ಕೇವಲ ತನ್ನ ಕಥಾವಸ್ತುವಿನಿಂದಲೇ ಚಿತ್ರಮಂದಿರಕ್ಕೆ ಪ್ರೇಕ್ಷಕರನ್ನ ಸೆಳೆಯುತ್ತಿದೆ. ಅಷ್ಟಕ್ಕೂ ಈ ಮಟ್ಟಿಗೆ ಹವಾ ಸೃಷ್ಟಿಸಿರೋ ಈ ಚಿತ್ರದ ಬಗ್ಗೆ ಒಂದಷ್ಟು ಇಂಟ್ರೆಸ್ಟಿಂಗ್ ವಿಷಯಗಳು ಇಲ್ಲಿವೆ ನೋಡಿ..

ಕೆಲವೊಮ್ಮೆ ನ್ಯಾಷನಲ್ ಅವಾರ್ಡ್ ಗಿಟ್ಟಿಸಿಕೊಂಡ ಸಿನಿಮಾ ಥಿಯೇಟರ್‌ವರೆಗೂ ತಲುಪುವುದೇ ಇಲ್ಲ. ಒಂದಷ್ಟು ದಿನ ಕೇವಲ ಪ್ರಶಸ್ತಿ ಬಂದಿದೆ ಅನ್ನುವ ಗುಂಗಿನಲ್ಲೇ ಮಾಯವಾಗಿ ಬಿಡುತ್ತದೆ. ಎಂತಹ ದಿಗ್ಗಜರೇ ನಿರ್ದೇಶಿಸಿದ ಚಿತ್ರವಾಗಿದ್ದರೂ, ಅವು ಚಿತ್ರಮಂದಿರದವರೆಗೂ ಬರೋಕೆ ತಡವರಿಸಿಬಿಡುತ್ತವೆ. ಹೀಗಿರುವಾಗ ಹೊಸಬರೇ ಸೇರಿ ನಿರ್ಮಿಸಿರೋ ‘ತಿಥಿ’   ಸಿನಿಮಾ ಮಂದಿರಗಳಿಗೂ ಲಗ್ಗೆ ಇಟ್ಟು, ಭಾರೀ ಜನ ಮನ್ನಣೆಗಳಿಸುತ್ತಿದೆ.

thithi 4
ಹಳ್ಳಿಗಾಡಿನ ಸಿನಿಮಾಗಳನ್ನ ನೋಡುವುದಕ್ಕೆ ಹಿಂಜರಿಯೋ ಪ್ರೇಕ್ಷಕರ ಮುಂದೆ, ಹಳ್ಳಿಯೊಂದರಲ್ಲಿ ನಡೆಯುವ ಘಟನೆಯನ್ನ ಹಾಸ್ಯದ ಮೂಲಕ ಹೇಳಿದೆ ಈ ಹೊಸತಂಡ… ಇನ್ನು ಕಥೆ ಹುಟ್ಟಿಕೊಳ್ಲುವುದು ನೂರು ವರ್ಷ ಬಾಳಿ ಬದುಕಿದ ಸೆಂಚುರಿ ಗೌಡನ ಸಾವಿನ ಸುತ್ತಮುತ್ತ. ಸೆಂಚುರಿಗೌಡ ಸತ್ತ ೧೧ ದಿನಗಳಲ್ಲಿ ತಿಥಿ ಕಾರ್ಯ ನೆರವೇರಲಿದ್ದು, ಆ ಅಂತರದಲ್ಲಿ ಅವರ ಮಕ್ಕಳು ಹಾಗು ಮೊಮ್ಮಕ್ಕಳ ನಡುವೆ ಏನೆಲ್ಲ ನಡೆಯುತ್ತೆ ಅನ್ನೋದಕ್ಕೆ ಕಾಮಿಡಿ ಟಚ್ ಕೊಟ್ಟಿದ್ದಾರೆ ಕಥೆಗಾರ ಈರೆಗೌಡ. ಈ ಟಿಪಿಕಲ್ ಸ್ಟೋರಿಯನ್ನ ಚೊಚ್ಚಲ ಬಾರಿಗೆ ನಿರ್ದೇಶಿಸಿದ್ದು ರಾಮ್ ರೆಡ್ಡಿ.
ಮತ್ತೊಂದು ವಿಶೇಷ ಅಂದರೆ, ರಾಷ್ಟ್ರ ಪ್ರಶಸ್ತಿ ಪಡೆದ ಈ ಚಿತ್ರದಲ್ಲಿ ನಟಿಸಿರುವವರೆಲ್ಲ ಕಲಾವಿದರಲ್ಲ. ಅದೇ ಹಳ್ಳಿಯಲ್ಲಿರೋ ಜನರು. ಹೀಗಾಗಿ ಈ ಸಿನಿಮಾ ಭಾರೀ ಕುತೂಹಲ ಮೂಡಿಸಿದೆ. ಇನ್ನು ಈ ವಾರ ತೆರೆಕಂಡಿರೋ ‘ತಿಥಿ’ ಬಹುತೇಕ ಮಲ್ಟಿಪ್ಲೆಕ್ಸ್‌ನಲ್ಲಿ ತೆರೆಕಂಡು ಉತ್ತಮ ಪ್ರದರ್ಶನ ಕಾಣುತ್ತಿದೆ.. ಅಲ್ಲದೆ ವಿಮರ್ಶಕರಿಂದಲೂ ಮೆಚ್ಚುಗೆ ಗಳಿಸಿದೆ..    ಹೀಗಾಗಿ ಈ ವರ್ಷದಲ್ಲಿ ಪವಾಡ ಸೃಷ್ಟಿಸಲಿರುವ ಸಿನಿಮಾಗಳಲ್ಲಿ ‘ತಿಥಿ’ ಮೊದಲನೆಯದಾಗಿ ಹೊರಹೊಮ್ಮಲಿದೆ.

Comments are closed.