ಕರ್ನಾಟಕ ಮ್ಯಾಪ್ ಯಡಿಯೂರಪ್ಪ ಕಾರಿನಲ್ಲಿ ಇರೋದ್ಯಾಕೆ…?

yaddyurappa
ಬಿಜೆಪಿ ರಾಜ್ಯಾಧ್ಯಕ್ಷರಾದ ಬಳಿಕ ಕಾಲಿಕೆ ಚಕ್ರ ಹಾಕಿಕೊಂಡು ರಾಜ್ಯಾಧ್ಯಂತ ಪ್ರವಾಸ ನಡೆಸುತ್ತಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮಿಷನ್ 150 ಎಂಬ ಹಿಡನ್ ಅಜೆಂಡಾ ಒಂದನ್ನ ರಚಿಸಿಕೊಂಡಿದ್ದಾರೆ. ರಾಜ್ಯದಲ್ಲಿ 180 ವಿಧಾನಸಬಾ ಕ್ಷೇತ್ರಗಳನ್ನ ಪಟ್ಟಿ ಮಾಡಿಕೊಂಡಿರುವ ಯಡಿಯೂರಪ್ಪ ತಮ್ಮ ಕಾರಿನಲ್ಲಿ ಕರ್ನಾಟಕದ ಮ್ಯಾಪ್ ಒಂದನ್ನ ಸಹ ಖರೀದಿಸಿ ಇಟ್ಟುಕೊಂಡಿದ್ದಾರೆ ಎನ್ನಲಾಗಿದೆ. ಇದೇ ವೇಳೆ 2018ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಗೆ ಯಡಿಯೂರಪ್ಪ ಮಾಸ್ಟರ್ ಪ್ಲ್ಯಾನ್ ಮಾಡ್ತಿದ್ದಾರೆ. ಮಿಷನ್ 150 ಅನ್ನೋ ಮಿಷನ್ ರಾಜ್ಯದಲ್ಲೀಗ ಹೊಸ ಸಂಚಲನ ಮೂಡಿಸಿದೆ.
Yeddy in car
ಬಿ.ಎಸ್.ಯಡಿಯೂರಪ್ಪ ಕರ್ನಾಟಕದ ಬಿಜೆಪಿಯ ಮಾಸ್ ಲೀಡರ್ ಅನ್ನೋದ್ರಲ್ಲಿ ಎರಡು ಮಾತಿಲ್ಲ. ದಕ್ಷಿಣ ಭಾರತದಲ್ಲಿ ಕಾಂಗ್ರೆಸ್ ಸಾಮ್ರಾಜ್ಯ ಕೆಡವಲು ಪ್ರಧಾನಿ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾಗೆ ಸಾರಥ್ಯ ನೀಡಿದ್ದಾರೆ. ಹೀಗಾಗಿ ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ನೇಮಕವಾದ ಬಳಿಕ ರಾಜ್ಯದ ಮೂಲೆ ಮೂಲೆಗಳಲ್ಲಿಗೆ ಕಾಲಿಗೆ ಚಕ್ರ ಹಾಕಿಕೊಂಡು ಪ್ರವಾಸ ನಡೆಸುತ್ತಿರುವ ಯಡಿಯೂರಪ್ಪ 2018ರ ಸಾರ್ವತ್ರಿಕ ಚುನಾವಣೆಗೆ ಮಿಷನ್ 150 ಎಂಬ ಮಾಸ್ಟರ್ ಪ್ಲ್ಯಾನ್ ಒಂದನ್ನ ರಚಿಸಿಕೊಂಡಿದ್ದಾರೆ. ಮುಂದಿನ 2 ವರ್ಷಗಳ ಕಾಲ ರಾಜ್ಯದಲ್ಲಿ ಯಾವುದೇ ಚುನಾವಣೆಗಳಿಲ್ಲದಿರುವ ಕಾರಣ ಯಡಿಯೂರಪ್ಪ ರಾಜ್ಯದಲ್ಲಿ ಕಾಂಗ್ರೆಸ್ ಸಾಮ್ರಾಜ್ಯ ಕೆಡವಲು ಮಾಸ್ಟರ್ ಪ್ಲ್ಯಾನ್ ಒಂದನ್ನ ಹಾಕಿಕೊಂಡಿದ್ದು ಮಾಸ್ಟರ್ ಪ್ಲ್ಯಾನ್ ನ ಕಂಪ್ಲೀಟ್ ಎನ್ ಸುದ್ದಿಗೆ ಲಭ್ಯವಾಗಿದೆ.

ಏನಿದು – ಬಿಎಸ್ ವೈ ಮಿಷನ್ 150 ಪ್ಲ್ಯಾನ್ 

* ಬಿಎಸ್ ವೈ ಕಣ್ಣು ರಾಜ್ಯದ 180 ವಿಧಾನಸಭಾ ಕ್ಷೇತ್ರದ ಮೇಲೆ

* ಬಹುತೇಕ ಕ್ಷೇತ್ರಗಳು ಉತ್ತರ ಕರ್ನಾಟಕದ ಕ್ಷೇತ್ರಗಳು

* ವೀರಶೈವ ಪ್ರಾಬಲ್ಯ ವಿರುವ ಕ್ಷೇತ್ರಗಳ ಮೇಲೆ ಮೊದಲು ಹಿಡಿತ

* ಕನಿಷ್ಟ ೧೫೦ ಸ್ಥಾನಗಳನ್ನು ಗೆಲ್ಲಲೇಬೇಕೆಂದು ಅಜೆಂಡಾ

* ಮಿಷನ್ ಗಾಗಿ ಕರ್ನಾಟಕದ ಮ್ಯಾಪ್ ಖರೀದಿಸಿರುವ ಯಡಿಯೂರಪ್ಪ

* ಮೊದಲ ೬ ತಿಂಗಳಲ್ಲಿ ೧೮೦ ಕ್ಷೇತ್ರಗಳ ಪ್ರವಾಸ

* ಪ್ರವಾಸ ವೇಳೆ ಕ್ಷೇತ್ರಗಳ ನಾಯಕರ ಮಧ್ಯೆ ವೈಮನಸ್ಸು ಪರಿಹಾರಕ್ಕೆ ಸಭೆ

* ಕ್ಷೇತ್ರವಾರು ಪಕ್ಷ ಬಿಟ್ಟು ಹೋಗಿರುವ ನಾಯಕರಿಗೂ ಯಡಿಯೂರಪ್ಪ ಗಾಳ

* ಬಳಿಕ ಮುಂದಿನ ೮ ತಿಂಗಳೊಳಗೆ 180 ಕ್ಷೇತ್ರಗಳಿಗೆ ಅಭ್ಯರ್ಥಿ ಆಯ್ಕೆಗೆ ಕ್ರಮ

* ಚುನಾವಣೆಗೆ ಒಂದು ವರ್ಷದ ಮೊದಲೇ ಅಭ್ಯರ್ಥಿ ಆಯ್ಕೆ ಅಂತಿಮ

* ಸರ್ಕಾರದ ವೈಫಲ್ಯಗಳನ್ನು ಮನೆ ಮನೆಗೆ ತಲುಪಿಸಲು ಅಭ್ಯರ್ಥಿಗಳಿಂದಲೇ ಅಭಿಯಾನ

* ೧೦೦೦ಕ್ಕೂ ಹೆಚ್ಚು ರೈತರ ಆತ್ಮಹತ್ಯೆಯೇ ಬಿಎಸ್ ವೈ ಪ್ರಬಲ ಅಸ್ತ್ರ

* ಈ ಮೂಲಕ ರೈತ ಮತಗಳ ಮೇಲೆ ಬಿಎಸ್ ವೈ ಕಣ್ಣು

ಬಿಎಸ್ ಯಡಿಯೂರಪ್ಪ ರಾಜ್ಯದ 180 ವಿಧಾನಸಭಾ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದು ಈಗಾಗಲೇ ರಾಜ್ಯದ ೧೮೦ ಕ್ಷೇತ್ರಗಳ ಪಟ್ಟಿ ಮಾಡಿಕೊಂಡಿದ್ದಾರೆ. ಇವುಗಳಲ್ಲಿ ಬಹುತೇಕ ಕ್ಷೇತ್ರಗಳು ಉತ್ತರ ಕರ್ನಾಟಕದ ಕ್ಷೇತ್ರಗಳಾಗಿದ್ದು ಅವುಗಳಲ್ಲಿ ಬಹುತೇಕ ವೀರಶೈವ ಪ್ರಾಬಲ್ಯ ವಿರುವ ಕ್ಷೇತ್ರಗಳ ಮೇಲೆ ಮೊದಲು ಹಿಡಿತ ಸಾಧಿಸಲು ಅಜೆಂಡಾ ಹಾಕಿಕೊಂಡಿದ್ದಾರೆ. ಇನ್ನು ಈ 180 ಕ್ಷೇತ್ರಗಳ ಪೈಕಿ ಕನಿಷ್ಟ 150 ಸ್ಥಾನಗಳನ್ನು ಗೆಲ್ಲಲೇಬೇಕೆಂದು ಯಡಿಯೂರಪ್ಪ ಅಜೆಂಡಾ ಹಾಕಿಕೊಂಡಿದ್ದಾರೆ. ಮಿಷನ್ 150 ಗಾಗಿ ಕರ್ನಾಟಕದ ಮ್ಯಾಪ್ ಒಂದನ್ನ ಖರೀದಿಸಿ ತಮ್ಮ ಕಾರಿನಲ್ಲಿಯೇ ಇಟ್ಟುಕೊಂಡಿದ್ದಾರೆ ಯಡಿಯೂರಪ್ಪ.

ಈ 180 ಕ್ಷೇತ್ರಗಳಿಗೆ ಮೊದಲ 6 ತಿಂಗಳಲ್ಲಿ ಪ್ರವಾಸ ನಡೆಸಿ ಪ್ರವಾಸದ ವೇಳೆ ಮೊದಲ ಆದ್ಯತೆ ಈ 180 ಕ್ಷೇತ್ರಗಳಲ್ಲಿರುವ ಬಿಜೆಪಿ ನಾಯಕರ ಮಧ್ಯೆ ಇರುವ ವೈರುದ್ಯ ನಿವಾರಣೆಗೆ ಆದ್ಯತೆ ನೀಡಿ ಸಭೆ ನಡೆಸುವುದು. ಬಳಿಕ ಕ್ಷೇತ್ರವಾರು ಪಕ್ಷ ಬಿಟ್ಟು ಹೋಗಿರುವ ನಾಯಕರಿಗೂ ಯಡಿಯೂರಪ್ಪ ಗಾಳ ಹಾಕಿ ಒಂದೇ ವೇದಿಯಲ್ಲಿ ಕರೆತರಲು ನಿರ್ಧರಿಸಿದ್ದಾರೆ. ಇನ್ನು ಮುಂದಿನ 8 ತಿಂಗಳೊಳಗೆ 180 ಕ್ಷೇತ್ರಗಳಿಗೆ ಅಭ್ಯರ್ಥಿ ಆಯ್ಕೆಗೆ ಯಡಿಯೂರಪ್ಪ ಕ್ರಮ ಕೈಗೊಳ್ಳಲಿದ್ದಾರೆ. ಒಟ್ಟಾರೆ ಯಡಿಯೂರಪ್ಪ ಚುನಾವಣೆಗೆ ಒಂದು ವರ್ಷದ ಮೊದಲೇ 180 ಕ್ಷೇತ್ರಗಳಲ್ಲಿ ಅಭ್ಯರ್ಥಿ ಆಯ್ಕೆ ಅಂತಿಮಗೊಳಿಸಲು ನಿರ್ಧರಿಸಿದ್ದಾರೆ.ಇದೇ ವೇಳೆ ಆಯ್ಕೆಯಾಗುವ ಅಭ್ಯರ್ಥಿಗಳಿಂದ ಸರ್ಕಾರದ ವೈಫಲ್ಯಗಳನ್ನು ಮನೆ ಮನೆಗೆ ತಲುಪಿಸಲು ಅಭಿಯಾನ ನಡೆಸುವುದನ್ನು ಅಂಜೆಡಾ ಹಾಕಿಕೊಂಡಿದ್ದಾರೆ. ಇನ್ನು ಮುಂದಿನ ಸಾರ್ವತ್ರಿಕ ಚುನಾವಣೆಗೆ ರೈತಮತಗಳ ಮೇಲೆ ಕಣ್ಣಿಟ್ಟಿರುವ ಯಡಿಯೂರಪ್ಪ ಸಾವಿರಕ್ಕೂ ಹೆಚ್ಚು ರೈತರ ಆತ್ಮಹತ್ಯೆಯನ್ನೇ ಚುನಾವಣೆ ವೇಳೆ ಪ್ರಬಲ ಅಸ್ತ್ರವನ್ನಾಗಿಸಲು ನಿರ್ಧರಿಸಿದ್ದಾರೆ

ಯಡಿಯೂರಪ್ಪ ಹೀಗೆ ಅಜೆಂಡಾ ಹಾಕಿಕೊಳ್ಳಲೂ ಸಹ ಕಾರಣ ವಿದೆ ಎನ್ನಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಯಡಿಯೂರಪ್ಪ ಮೇಲೆ ಬಹಳ ನಿರೀಕ್ಷೆ ಇಟ್ಟು ರಾಜ್ಯಾಧ್ಯಕ್ಷ ಪಟ್ಟ ನೀಡಿದ್ದಾರೆ ಎನ್ನಲಾಗಿದೆ. ಜೊತೆಗೆ ಎಐಸಿಸಿಗೆ ಎಲ್ಲ ರೀತಿ ನೆರವು ಪೂರೈಕೆ ಆಗ್ತಾ ಇರೋದೇ ದಕ್ಷಿಣ ಭಾರತದ ಕರ್ನಾಟಕದಿಂದ ಹೀಗಾಗಿ ಕರ್ನಾಟಕದ ಕಾಂಗ್ರೆಸ್ ಸಾಮ್ರಾಜ್ಯ ಕೆಡವಿ ಅಲ್ಲಿ ಬಿಜೆಪಿ ಬಾವುಟ ಹಾರಿಸಲೇ ಬೇಕೆಂದು ಹೈಕಮಾಂಡ್ ಯಡಿಯೂರಪ್ಪಗೆ ಖಡಕ್ ಸೂಚನೆ ನೀಡಿದೆ. ಇದಕ್ಕಾಗಿ ಯಡಿಯೂರಪ್ಪಗೆ ಪಕ್ಷ ಸಂಘಟನೆಗಾಗಿ ಪೂರ್ಣ ಸ್ವಾತಂತ್ರದ ಜೊತೆಗೆ ರಾಜ್ಯದಲ್ಲಿ ಯಡಿಯೂರಪ್ಪ ಕೈಗೊಳ್ಳುವ ಎಲ್ಲ ನಿರ್ಧಾರಗಳಿಗೆ ಹೈಕಮಾಂಡ್ ಹಸಿರುವ ನಿಶಾನೆ ನೀಡಲಿದೆ ಎಂದು ಭರವಸೆ ನೀಡಿದೆ. ಹೀಗಾಗಿ ಯಡಿಯೂರಪ್ಪ ಕಾಂಗ್ರೆಸ್ ಸಾಮ್ರಾಜ್ಯ ಕೆಡವಲು ಹಾಗೂ ಹೈಕಮಾಂಡ್ ವಿಶ್ವಾಸ ಉಳಿಸಿಕೊಳ್ಳಲು ಶರವೇಗದಲ್ಲಿ ಸಾಗ್ತಾ ಇದ್ದಾರೆ. ಮಿಷನ್ 150 ನಿಜವಾಗ್ಲೂ ವರ್ಕೌಟ್ ಆಗುತ್ತಾ ಕಾದು ನೋಡಬೇಕಿದೆ.

Comments are closed.