‘ಮೇ’be ಕಾರ್ಮಿಕರಿಗಾಗಿ ‘ಕಬಾಲಿ’

rajini in kabali

ರಜಿನಿಕಾಂತ್ ಅಭಿನಯದ ‘ಕಬಾಲಿ’ ಸಿನಿಮಾದ ಟೀಸರ್ ಹೊರಬಿದ್ದಿದೆ. ಇದು ಸೂಪರ್ ಸ್ಟಾರ್ ಅಭಿಮಾನಿಗಳಿಗೆ ಸಂಡೇ ಸ್ಪೆಷಲ್. ಈ ವೀಡಿಯೋ ತುಣಕು ನೋಡಿದರೆ, ರಜಿನಿ ಈಸ್ ಬ್ಯಾಕ್ ಅನ್ನಬಹುದು. ೪೫ ಸೆಕೆಂಡ್‌ಗಳ ಈ ಟೀಸರ್ ನೋಡುಗರಿಗೆ ಸಖತ್ ಕಿಕ್ ಕೊಡುತ್ತೆ. ಅಸಲಿ ರಜಿನಿಕಾಂತ್ ಝಲಕ್ ಈ ದೃಶ್ಯದ ಪ್ರತಿ ಪ್ರೇಮ್‌ನಲ್ಲೂ ನೋಡಲು ಸಿಗುತ್ತದೆ.

‘ಕಬಾಲಿ’ ಬಂದರು ದಾರಿ ಬಿಡಿ. ಹೌದು ರಜಿನಿಕಾಂತ್ ಕಬಾಲಿ ಅವತಾರ ಟೀಸರ್‌ನಲ್ಲಿ ರಿವೀಲ್ ಆಗಿದೆ. ಇದು ಸೂಪರ್ ಸ್ಟಾರ್ ಅಭಿಮಾನಿಗಳಿಗೆ ಸಂಡೇ ಸ್ಪೆಷಲ್ ಟ್ರೀಟ್. ಈ ವೀಡಿಯೋ ತುಣಕು ನೋಡಿದರೆ ರಜಿನಿ ಈಸ್ ಬ್ಯಾಕ್ ಅನ್ನಬಹುದು. ೪೫ ಸೆಕೆಂಡ್‌ಗಳ ಟೀಸರ್ ನೋಡಿ ‘interneti’ಗರು ವಾಹ್ ಅಂತಿದ್ದಾರೆ.

ಕಬಾಲಿ ಚಿತ್ರದ ಟೀಸರ್‌ನ್ನ ಇಂದೇ(ಮೇ ೧)ಬಿಡುಗಡೆ ಮಾಡುವುದಕ್ಕೂ ಕಾರಣವಿದೆ. ಚಿತ್ರದಲ್ಲಿ ಅಂತರಾಷ್ಟ್ರೀಯ ಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದಿಸೋ ಗ್ಯಾಂಗ್‌ಸ್ಟರ್ ಆಗಿ ರಜಿನಿಕಾಂತ್ ಅಭಿನಯಿಸಿದ್ದಾರೆ. ಇದೇ ಕಾರಣಕ್ಕೆ ಕಾರ್ಮಿಕರ ದಿನಾಚರಣೆ ಪ್ರಯುಕ್ತ ಕಬಾಲಿ ಟೀಸರ್ ರಿವೀಲ್ ಮಾಡಿದೆ ಚಿತ್ರತಂಡ.

ಪ್ರಮೋಷನ್ ವೀಡಿಯೋದ ಪ್ರತಿ ಪ್ರೇಮ್‌ನಲ್ಲೂ ರಜಿನಿ ಬಾಸ್ ಟ್ರೇಡ್ ಮಾರ್ಕ್ ಸ್ಟೈಲ್‌ನ್ನ ಕಾಣಬಹುದು. ಆ ಲುಕ್, ಆ ಡೈಲಾಗ್ ಡೆಲಿವರಿ, ಆ ಟಿಪಿಕಲ್ ನಗು ಒನ್ಸ್ ಅಗೈನ್ ತಮಿಳು ತಂಬಿಗಳಿಗೆ ಕಿಕ್ ಕೊಡುವಂತಿದೆ. ಯುವ ನಿರ್ದೇಶಕ ಪ.ರಂಜಿತ್ ಕೈಚಳಕ ಟೀಸರ್‌ನಲ್ಲೇ ಅನಾವರಣವಾಗಿದೆ.

ಸಿನಿಮಾದಲ್ಲಿ ರಾಧಿಕಾ ಆಪ್ಟೆ ಕಬಾಲಿ ಮಡದಿಯಾಗಿ ಕಾಣಿಕೊಂಡಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಕನ್ನಡದ ನಟ ಕಿಶೋರ್ ಇಲ್ಲಿ ನೆಗೆಟೀವ್ ರೋಲ್ ಪ್ಲೇ ಮಾಡಿರುವುದು ವಿಶೇಷ. ರಜಿನಿಕಾಂತ್ ಅವರ ಕೊಚಡಿಯನ್, ಲಿಂಗಾ ಸಿನಿಮಾಗಳ ಸೋಲನ್ನ ಕಬಾಲಿ ಸಿನಿಮಾ ಮರೆಸುವ ಲಕ್ಷಣಗಳು ದಟ್ಟವಾಗಿದೆ.

ಹುರುಪುಳ್ಳ ತಂಡವನ್ನ ಕಟ್ಟಿಕೊಂಡು ರಜಿನಿ ಸರ್ ಕಬಾಲಿ ಆಗಿ ಖದರ್ ತೋರಿಸೋಕೆ ಸಿದ್ಧವಾಗಿದ್ದಾರೆ. ಟೀಸರ್ ನೋಡಿದವರಿಗೆ ಭಾಷಾ ಸಿನಿಮಾ ಕಣ್ಮುಂದೆ ಬರುತ್ತದೆ. ಬ್ಯಾಕ್‌ಗ್ರೌಂಡ್ ಸ್ಟೋರ್‌ನಲ್ಲೇ ಮೆಚ್ಚುಗೆ ಗಳಿಸ್ತಾರೆ ಮ್ಯೂಸಿಕ್ ಡೈರೆಕ್ಟರ್ ಸಂತೋಷ್ ನಾರಾಯಣನ್. ಇನ್ನೂ ಕಬಾಲಿ ಖದರ್‌ನ ಫುಲ್ ಮಜಾ ಸವಿಯೋಕೆ ಅಭಿಮಾನಿಗಳು ಕೆಲದಿನಗಳು ಕಾಯಲೇಬೇಕು.

Comments are closed.

Social Media Auto Publish Powered By : XYZScripts.com