ಚಕ್ರವ್ಯೂಹಕ್ಕೆ ಎಲ್ಲೆಲ್ಲಿ ಹೇಗಿದೆ ರೆಸ್ಪಾನ್ಸ್ ?

_MGL0799 _MGL0755_MGL0833

 

 

 

 

 

 

 

 

ಚಕ್ರವ್ಯೂಹ ಸಿನಿಮಾ ಎಬ್ಬಿಸಿರೋ ಹವಾ ಅಷ್ಟಿಷ್ಟಲ್ಲ.ಕರ್ನಾಟಕ ಮಾತ್ರವಲ್ಲಾ ಫಾರಿನ್‌ನಲ್ಲೂ ಅಪ್ಪು ಪರ್ಫಾಮನ್ಸ್‌ಗೆ ಫ್ಯಾನ್ಸ್ ಜೈ ಹೋ ಅಂತಿದ್ದಾರೆ. ಬಳ್ಳಾರಿಯಲ್ಲಿ ಮುಂಜಾನೆ ಶೋ ಶುರುವಾಗಿದೆ. ದೂರದ ಸಿಡ್ನಿ ಪ್ರೇಕ್ಷಕರು ಪುನೀತ್‌ರಾಜ್‌ಕುಮಾರ್ ಜೊತೆ ಗುರುವಾರವೇ ಚಿತ್ರದ ಪ್ರೀಮಿಯರ್ ಶೋ ನೋಡಿದ್ದಾರೆ. ಆ ಮಟ್ಟಿಗೆ ಚಕ್ರವ್ಯೂಹ ಸಿನಿಮಾ ಕ್ರೇಝ್ ಸೃಷ್ಟಿಸಿದೆ.

ಚಕ್ರವ್ಯೂಹ ಸಿನಿಮಾ ಬಿಡುಗಡೆ ವಿಚಾರದಲ್ಲೂ ದಾಖಲೆ ಬರೆದಿದೆ. ವಿದೇಶದಲ್ಲಿ ೫೦ ಸೇರಿ ಒಟ್ಟು ೩೫೦ ಥಿಯೇಟರ್‌ಗಳಲ್ಲಿ ಸಿನಿಮಾ ಬಿಡುಗಡೆಯಾಗಿದೆ. ಮಲ್ಟಿಫ್ಲೆಕ್ಸ್‌ಗಳಲ್ಲೂ  ಕೂಡ ಟಿಕೆಟ್‌ಗಾಗಿ ಅಭಿಮಾನಿಗಳು ಪರದಾಡುವಂತಾಗಿದೆ. ಅಷ್ಟರಮಟ್ಟಿಗೆ ಪವರ್ ಸ್ಟಾರ್ ಸಿನಿಮಾ ಸದ್ದು ಮಾಡುತ್ತಿದೆ. ಮಲ್ಟಿಫ್ಲೆಕ್ಸ್‌ಗಳಲ್ಲಿ ಮಾತ್ರವೇ ಮೊದಲ ದಿನ ಚಿತ್ರ ೧೯೬ ಶೋ ಪ್ರದರ್ಶನ ಕಂಡಿದೆ.

ಕಾಯಿಸಿ ಸತಾಯಿಸಿ ಥಿಯೇಟರ್‌ಗೆ ಬಂದ ಚಕ್ರವ್ಯೂಹ ಚಿತ್ರ ಅಭಿಮಾನಿಗಳನ್ನ ರಂಜಿಸುವಲ್ಲಿ ಯಶಸ್ಸು ಕಂಡಿದೆ. ಕೆಲ ಥಿಯೇಟರ್‌ಗಳಲ್ಲಿ ಬೆಳ್ಳಂಬೆಳಗ್ಗೆ ಪ್ರದರ್ಶನ ಶುರುವಾಗಿತ್ತು. ಸದ್ಯ ಶೂಟಿಂಗ್ ನಿಮಿತ್ತ ಆಸ್ಟ್ರೇಲಿಯಾದಲ್ಲಿರುವ ಅಪ್ಪು ಸಿಡ್ನಿಯಲ್ಲಿ ಫ್ಯಾನ್ಸ್ ಜೊತೆ ಕೂತು ಪ್ರೀಮಿಯರ್ ಶೋ ವೀಕ್ಷಿಸಿದ್ದಾರೆ. ಆಸ್ಟ್ರೇಲಿಯಾದಲ್ಲಿ ಕನ್ನಡ ಸಿನಿಮಾದ ಪ್ರೀಮಿಯರ್ ಶೋ ಅನ್ನುವುದು ತಮಾಷೆಯ ಮಾತಲ್ಲ. ಅದನ್ನ ಈ ಚಕ್ರವ್ಯೂಹ ಮಾಡಿ ತೋರಿಸಿದೆ.

ತಮಿಳಿನ ಶರವಣನ್ ನಿರ್ದೇಶನದ ಈ ಆಕ್ಷನ್ ಸಿನಿಮಾಗೆ ಬಳ್ಳಾರಿಯಲ್ಲೂ ಸೂಪರ್ ರೆಸ್ಪಾನ್ಸ್ ಸಿಕ್ಕಿದೆ. ಗಡಿನಾಡಿನ ಪ್ರೇಕ್ಷಕರು ರಾತ್ರಿಯಿಡೀ ಥಿಯೇಟರ್ ಮುಂದೆ ಕಾದು ಸಿನಿಮಾ ವೀಕ್ಷಿಸಿ ಖುಷಿಪಟ್ಟಿದ್ದಾರೆ. ಚಿತ್ರದ ಟ್ರೇಲರ್ ಹಾಗೂ ಹಾಡುಗಳು ಈ ಮಟ್ಟಿಗೆ ಅಭಿಮಾನಿಗಳಿಗೆ ಕುತೂಹಲ ಮೂಡುವಂತೆ ಮಾಡಿತ್ತು.

ಆಕ್ಷನ್ ಪ್ರಿಯರಿಗೆ ಚಕ್ರವ್ಯೂಹ ಸಿನಿಮಾ ಹೇಳಿ ಮಾಡಿಸಿದಂತಿದೆ ಅನ್ನುವುದು ವಿಮರ್ಶಕರ ಮಾತು. ಹಾಗಾಗಿ ಮುಂದೆ ಮಾಸ್ ಆಡಿಯನ್ಸ್ ಹೆಚ್ಚಿನ ಸಂಖ್ಯೆಯಲ್ಲಿ ಥಿಯೇಟರ್‌ಗೆ  ಬರುವುದರಲ್ಲಿ ಅನುಮಾನವಿಲ್ಲ. ಆಸ್ಟ್ರೇಲಿಯಾ, ಅಮೇರಿಕಾದಲ್ಲೂ ಈ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು, ವಿದೇಶದ ಕಲೆಕ್ಷನ್ ಲೆಕ್ಕಾಚಾರದಲ್ಲಿ ಚಕ್ರವ್ಯೂಹ ಹೊಸ ದಾಖಲೆ ಬರೆಯುವ ಸಾಧ್ಯತೆಯಿದೆ.

 

Comments are closed.

Social Media Auto Publish Powered By : XYZScripts.com