ಸೇಫ್ ಸೆಕ್ಸ್ ವಿಷಯದಲ್ಲಿ ಸ್ತ್ರೀಯರಿಗು ಬಂತು ಜವಾಬ್ದಾರಿಯಲ್ಲಿ ಸಮಪಾಲು

ಇನ್ಮೇಲೆ ಅಗತ್ಯಬಿದ್ದಾಗ ಕಾಂಡೊಮ್ ಬಳಸಬೇಕಾದದ್ದು ಕೇವಲ ಗಂಡಸರಿಗಷ್ಟೇ ಅನ್ವಯಿಸುವಂತದ್ದು ಅನ್ನುವಂತಿಲ್ಲ. ಯಾಕಂದ್ರೆ ಹೆಂಗಸರು ಬಳಸಬಹುದಾದ CONDOM ಗಳು ಸಧ್ಯದಲ್ಲೇ ಮಾರುಕಟ್ಟೆಗೆ ಲಗ್ಗೆ ಇಡಲಿವೆಯಂತೆ.

FEMALE CONDOM 1

ಮೊಟ್ಟ ಮೊದಲ ಬಾರಿಗೆ ದೇಶೀಯವಾಗಿ ಅಭಿವೃದ್ಧಿ ಪಡಿಸಿದ ನೈಸರ್ಗಿಕ ಲ್ಯಾಟೆಕ್ಸ್ ಆಧಾರಿತ ಸ್ತ್ರೀಯರ ಕಾಂಡೊಮ್ ಗಳನ್ನ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವರಾದ ಜೆ ಪಿ ನಡ್ಡಾ ಇತ್ತೀಚಿಗೆ ಬಿಡುಗಡೆ ಮಾಡಿದ್ದಾರೆ. ಈ ಕಾಂಡೋಮ್ ಗಳನ್ನ ಪರಿಚಯ ಮಾಡಿದ್ದರಿಂದಾಗಿ ಗರ್ಭನಿರೋಧಕ ಅವಕಾಶಗಳು ಹೆಚ್ಚಾಗಲಿವೆ. ಜೊತೆಗೆ ಕಡಿಮೆ ದರದಲ್ಲಿ ಅನಗತ್ಯ ಗರ್ಭ ಧರಿಸುವ ಕಿರಿಕಿರಿಯಿಂದ ತಪ್ಪಿಸಿಕೊಳ್ಳಬಹುದಾಗಿದೆ.

ವೆಲ್ವೆಟ್ ಹೆಸರಿನ ಈ ಕಾಂಡೋಮ್ ಗಳನ್ನ ಹೆಚ್ ಎಲ್ ಎಲ್ ಲೈಫ್ ಕೇರ್ ಲಿಮಿಟೆಡ್ ಕಂಪನಿಯು ತಯಾರಿಸಲಿದೆಯಂತೆ. SAFE SEX ದೃಷ್ಟಿಯಿಂದ ಈ ಕಾಂಡೊಮ್ ಗಳು ಹೆಚ್ಚು ಪ್ರಯೋಜನಕಾರಿಯಾಗಿದ್ದು, ಮಹಿಳಾ ಸಬಲೀಕರಣದತ್ತ ಇದು ಒಂದು ಮುನ್ನಡೆ ಎನ್ನಬಹುದು. ಹಾಗೆಯೇ ಇದು ಗರ್ಭನಿರೋಧಕದ ಜೊತೆಗ ಹHIV, AIDS ನಂಥಹ ಮಾರಕ ಕಾಯಿಲೆಗಳಿಂದಲೂ ರಕ್ಷಣೆ ನೀಡಲಿದೆ. ಹಾಗೇ ಮಗುವನ್ನ ಪಡೆಯುವ ನಿರ್ಧಾರದಲ್ಲಿ ಹೆಣ್ಣು ಕೂಡಾ ಈ ಮೂಲಕ ತನ್ನ ಹಕ್ಕು ಚಲಾಯಿಸಬಹುದಾಗಿದೆ.

3 thoughts on “ಸೇಫ್ ಸೆಕ್ಸ್ ವಿಷಯದಲ್ಲಿ ಸ್ತ್ರೀಯರಿಗು ಬಂತು ಜವಾಬ್ದಾರಿಯಲ್ಲಿ ಸಮಪಾಲು

 • October 16, 2017 at 4:45 PM
  Permalink

  Only wanna comment on few general things, The website pattern is perfect, the subject material is real good. “Earn but don’t burn.” by B. J. Gupta.

 • October 20, 2017 at 9:33 PM
  Permalink

  Making sure you know all about African Mangoo is very much imptortant to us.

 • October 20, 2017 at 9:43 PM
  Permalink

  Hiya, Could I download your photograph and use that on my website?

Comments are closed.

Social Media Auto Publish Powered By : XYZScripts.com