ಸ್ಯಾಮ್ ಸಂಗ್ ತರಲಿದೆಯಂತೆ ಕಣ್ಣೊಳಗೆ ಫಿಕ್ಸ್ ಮಾಡಬಲ್ಲ ಕ್ಯಾಮರಾ

ಇತ್ತೀಚಿಗೆ ಗೂಗಲ್ ಗ್ಲಾಸ್ ಪರಿಚಯಿಸಿದಾಗ ಸಾಕಷ್ಟು ಅಪಸ್ವರಗಳು ಕೇಳಿ ಬಂದಿದ್ದ ಬೆನ್ನಲ್ಲೆ ಸ್ಯಾಮಸಂಗ್ ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಶಾಕಿಂಗ್ ನ್ಯೂಸ್ ಕೊಟ್ಟಿದೆ. ಅದು ಆವಿಷ್ಕಾರದಲ್ಲಿ ಗೂಗಲ್ ನ್ನೆ ಹಿಂದಿಕ್ಕಿದ್ದು ಕಣ್ಣೊಳಗೆ ಲೆನ್ಸ್ ಗಳನ್ನ ಫಿಕ್ಸ್ ಮಾಡಿ ಅದು ಕ್ಯಾಮರಾ ರೀತಿಯಲ್ಲಿ ಕೆಲಸ ಮಾಡಲಿದೆಯಂತೆ. ಅದರ ಸಾಹಸ ಇಷ್ಟಕ್ಕೆ ಮುಗಿಯುವದಿಲ್ಲ. ಆ ಕ್ಯಾಮರಾ ತೆಗೆದ ಫೋಟೋಗಳು ನೇರ ನಿಮ್ಮ ಜೇಬಿನಲ್ಲಿರುವ ಮೊಬೈಲ್ ನಲ್ಲಿ ಬೆಚ್ಚಗೆ ಅಡಗಲಿವೆಯಂತೆ. ಇಂಥ ಬೆಚ್ಚಿ ಬೀಳಿಸುವ ತಂತ್ರಜ್ಞಾನವನ್ನ ಸ್ಯಾಮಸಂಗ್ ಅಭಿವೃದ್ಧಿ ಪಡಿಸಲಿದೆ ಎಂಬ ಸುದ್ದಿ ಹಬ್ಬಿದೆ.

ಈ ತಂತ್ರಜ್ಞಾನದ ಸಾಧ್ಯಾ ಸಾಧ್ಯತೆಗಳು ಏನಿವೆಯೋ ಆ ಸ್ಯಾಮ್ ಸಂಗ್ ಗೆ ಗೊತ್ತು. ಆದ್ರೆ ಕಂಪನಿ ಈಗಾಗಲೇ ಈ ಸಂಶೋಧನೆ ಕುರಿತಂತೆ ಪೆಟೆಂಟ್ ಗೆ ಅರ್ಜಿ ಸಲ್ಲಿಸಿದೆಯಂತೆ. ಸುಮಾರು 29 ಪುಟಗಳ ಪೆಟೆಂಟ್ ನಲ್ಲಿ ಲೆನ್ಸ್ ಗಳು ಸೆನ್ಸಾರ್ ಮತ್ತು ಸ್ಮಾರ್ಟ್ ಫೋನ್ ನ ಸಹಾಯದಿಂದ ಕಣ್ಣಿನ ಚಲನೆಯ ಮೂಲಕ ಕಾರ್ಯನಿರ್ವಹಿಸಲಿವೆ ಎಂದು ವಿವರಿಸಲಾಗಿದೆಯಂತೆ.

ಈ ಲೆನ್ಸ್ ಗಳನ್ನ ನಾವು ದೃಷ್ಟಿ ದೋಷಕ್ಕೆ ಬಳಸುವ ಲೆನ್ಸ್ ಗಳನ್ನ ರೆಟಿನಾ ಮೇಲೆ ಧರಿಸುವಂತೆ ಆರಾಮಾಗಿ ಬಳಸಬಹುದಂತೆ. ಪೆಟೆಂಟ್ ಗೆ ಅನುಮತಿ ಸಿಕ್ಕಿದೆಯೋ ಇಲ್ಲವೋ ಗೊತ್ತಿಲ್ಲ. ಆದ್ರೆ ಈಗಾಗಲೇ ಕೊರಿಯನ್ ಮೂಲದ ಪ್ರಖ್ಯಾತ ಕಂಪನಿಯೊಂದು ಈ ತಂತ್ರಜ್ಞಾನ ಬಳಸಿಕೊಂಡು ಅದಾಗಲೇ ಪ್ರೊಡಕ್ಟ್ ವೊಂದನ್ನ ತಯಾರಿಸುವದಕ್ಕೆ ಪ್ರಾರಂಭಿಸಿದೆಯಂತೆ.

ಸ್ಯಾಮಸಂಗ್ ಹೇಳಿರುವ ಪ್ರಕಾರ ಈ ಲೆನ್ಸ್ ಗಳು ವೈಡರ್ ಆಂಗಲ್ ಇಮೇಜಗಳನ್ನ ನೀಡಲಿದ್ದು, ಸ್ಪಷ್ಟ ಹಾಗೂ ಉತ್ತಮ ಗುಣಮಟ್ಟದ್ದಾಗಿರುತ್ತವಂತೆ. ಒಟ್ಟಿನಲ್ಲಿ ಈಗ ಗೂಗಲ್ ಮತ್ತು ಸ್ಯಾಮಸಂಗ್ ನ ಕಣ್ಣು ಎಲ್ಲರ ಕಣ್ಣ ಮೇಲೆ ಬಿದ್ದಿದ್ದು, ಇದರಿಂದ ಏನೇನು ತಂತ್ರಜ್ಞಾನ ಬರುತ್ತವೆಯೋ ಆ ಭಗವಂತನೇ ಬಲ್ಲ.

Comments are closed.