ಬಿಂದಾಸ್ ಆಗಿ ವಾಟ್ಸ್ ಅಪ್ ಲ್ಲಿ ಚಾಟ್ ಮಾಡಿ: ಇನ್ನು ಮುಂದೆ ಎಲ್ಲವೂ ಸೇಫ್

Whatsapp

ಚುಪಾ-ಚುಪಿ ಚಾಟ್ ವಾಟ್ಸ್ ಅಪ್ ನಲ್ಲಿ ಚಾಟ್ ಮಾಡುವವರಿಗೆ ಈ ಸುದ್ದಿ ಸಖತ್ ಖುಷಿ ಕೊಡೊದ್ರಲ್ಲಿ ಡೌಟೇ ಇಲ್ಲ. ಸಿಕ್ರೇಟ್ ಚಾಟ್ ಮಾಡೋರಿಗೆ ಇನ್ನು ಮುಂದೆ ಲೀಕ್ ಆಗುವ ಭಯವೇ ಇಲ್ಲ. ಯಾಕಂದ್ರೆ ವಾಟ್ಸ್ ಅಪ್ ಸಿಕ್ಕಾಪಟ್ಟೆ ಸುರಕ್ಷತೆಗಳನ್ನ ಸಧ್ಯದರಲ್ಲೇ ಪರಿಚಯಿಸಲಿದೆಯಂತೆ. ಈಗ ಯಾರ ಜೊತೆಗಾದ್ರು ನೀವು ಬಿಂದಾಸ್ ಆಗಿ ಚಾಟ್ ಮಾಡಬಹುದು, ಬೇಕಾದ ಫೋಟೋ ಕಳಿಸಬಹುದು, ಏನಾದ್ರು ವಿಡಿಯೋ ಶೇರ್ ಮಾಡಬಹುದು. ಎಲ್ಲವೂ ಗುಪ್ತ..ಗುಪ್ತ.

ಯಾಕಂದ್ರೆ ವಾಟ್ಸ್ ಅಪ್ ಬಳಕೆದಾರರ ಸುರಕ್ಷತಾ ದೃಷ್ಟಿಯಿಂದ ಕೆಲವು ಕಠಿಣ ಕ್ರಮಗಳನ್ನ ಕೈಗೊಂಡಿದ್ದು, ಈ ಕಾರಣಕ್ಕೆ ಎಲ್ಲಾ ಚಾಟ್ ಗಳು ಎನ್ ಕ್ರಿಪ್ಟ್ ಆಗಲಿವೆ. ಹೀಗಾಗಿ ನೀವು ಮಾಡುವ ಚಾಟ್ ಗಳನ್ನ ಯಾರಾದ್ರು ಕದಿಯುವದಾಗಲಿ, ಮಾನಿಟರ್ ಮಾಡುವುದಾಗಲಿ ಸಾಧ್ಯವೇಯಿಲ್ಲ. ಎನ್ ಕ್ರಿಪ್ಟ್ ಕ್ರ್ಯಾಕ್ ಮಾಡದೆ ಯಾರಿಗೂ ಮೆಸೆಜ್ ಗಳನ್ನ ಪಡೆಯುವದಕ್ಕೆ ಸಾಧ್ಯವಾಗಲ್ಲ.

ಇಷ್ಟಕ್ಕೂ ಎನ್ ಕ್ರಿಪ್ಟ್ ಎಂದರೇನು?

ಎನ್ ಕ್ರಿಪ್ಟ್ ಎಂಬುದೊಂದು ಕಂಪ್ಯೂಟರ್ ಸುರಕ್ಷತಾ ಕೋಡ್ ಆಗಿದ್ದು, ಅದನ್ನ ಬಳಸಿದಾಗ ಎಲ್ಲಾ ಮಾಹಿತಿಯೂ ಸುದೀರ್ಘ ಕೋಡ್ ಗಳಲ್ಲಿ ಕಾಣಿಸುತ್ತದೆ. ಅದು ಏನೆಂಬುದನ್ನ ಪತ್ತೆ ಹಚ್ಚುವದಕ್ಕೆ ಸಾಧ್ಯವೇಯಿಲ್ಲ. ಎಲ್ಲವೂ ಕೋಡ್ ಗಳ ರೂಪದಲ್ಲಿಯೇ ಕಾಣಿಸುವದರಿಂದ ಮಾಹಿತಿ ಲೀಕ್ ಆಗುವ ಸಾಧ್ಯತೆಯೇ ಇರುವುದಿಲ್ಲ.

ಈಗ ಎಂಡ್ ಟು ಎಂಡ್ ಎನ್ ಕ್ರಿಪ್ಟ್ ಆಗುತ್ತಿರುವುದರಿಂದ ಯಾವುದೇ ಶೇರ್ ಆಗುವ ಮಾಹಿತಿಯನ್ನ ನೀವು ಮತ್ತು ಯಾರಿಗೆ ಕಳುಹಿಸಿರುತ್ತೀರಿ ಅವರು ಮಾತ್ರ ನೋಡುವದಕ್ಕೆ ಸಾಧ್ಯ. ಉಳಿದವರಿಗೆ ಈ ಚಾಟ್ ವಿವರಗಳು ಸಿಗುವುದೇಯಿಲ್ಲ. ಇದು ಅತ್ಯಧಿಕ ಸುರಕ್ಷಾ ವಿಧಾನವಾಗಿದ್ದು, ಹ್ಯಾಕರ್ ಗಳಿಗೆ, ಸೈಬರ್ ಕ್ರೈಮ್ ಮಾಡುವವರಿಗೆ ಈ ಬೆಳವಣಿಗೆ ನುಂಗಲಾರದ ತುಪ್ಪವಾಗಿದೆ.

ಆದ್ರೆ ವಾಟ್ಸ್ ಅಪ್ ನ ಈ ನಡೆಗೆ ಕೇಂದ್ರ ಸರ್ಕಾರ ಹೇಗೆ ಪ್ರತಿಕ್ರಿಯೆ ನೀಡುತ್ತದೆ ಎಂಬುದನ್ನ ಕಾದು ನೋಡಬೇಕಿದೆ. ಕಾರಣ ಆ ಮಾಹಿತಿ ಸರ್ಕಾರಕ್ಕೂ ಸಿಗುವುದು ದುಸ್ತರ ಎಂದಾಗ ಅನುಮತಿ ನೀಡುವದಕ್ಕೆ ಸಾಧ್ಯವಿದೆಯೋ, ಇಲ್ಲವೋ ಎಂಬುದು ಇನ್ನಷ್ಟೇ ತಿಳಿಬೇಕಿದೆ.

Comments are closed.