ಜಾಬ್ಸ್ ಇಲ್ಲದ ಆಪಲ್ ಗೆ ಕಡಿಮೆಯಾಗ್ತಿದೆಯಂತೆ ಡಿಮ್ಯಾಂಡ್ !

jobs2

ಮೊಬೈಲ್ ದುನಿಯಾ ಅದೆಷ್ಟು ದೊಡ್ಡದಾಗಿದೆಯೆಂದ್ರೆ ದಿನಕ್ಕೊಂದು ಹೊಸ ಕಂಪನಿ ಹುಟ್ಟಿಕೊಳ್ತಿದೆ. ಜನ ಸ್ಮಾರ್ಟ್ ಆಗ್ತಿದ್ದಾರೋ ಇಲ್ಲವೋ ಗೊತ್ತಿಲ್ಲ, ಆದ್ರೆ ಮೊಬೈಲ್ ಗಳು ಮಾತ್ರ ಸ್ಮಾರ್ಟೋ, ಸ್ಮಾರ್ಟು.. ಆದ್ರೆ ಅದೊಂದು ಫೋನ್ ಬಳಸಬೇಕಂದ್ರೆ ಸ್ಮಾರ್ಟ್ ಆಗಿರಲೇಬೇಕು. ಯಾಕಪ್ಪಾ ಅಂದ್ರೆ ಅದೊಂದು ಫೋನ್ ಇಟ್ಕೊಂಡವ್ನ ನೋಡೋ ರೀತಿನೆ ಬೇರೆ. ಅದೇ ಐ ಫೋನ್ ಕರಾಮತ್ತು.

ಈಗ ಐ ಫೋನ್ ಸ್ಮಾರ್ಟ್ ಫೊನ್ ಸಾಮ್ರಾಟ ಕಣ್ಣ ಮುಚ್ಚಿದ ಮೇಲೆ ಸಾಮ್ರಾಜ್ಯದ ಖದರ್ ಬದಲಾಗುತ್ತಿದೆಯಾ ಅನ್ನೋ ಮಾತು ಟೆಕ್ ಲೋಕದಲ್ಲಿ ಕೇಳಿ ಬರುತ್ತಿದೆ. ಹಲವು ವರ್ಷಗಳಿಂದ ಬಹು ಬೇಡಿಕೆ ಇಟ್ಟುಕೊಂಡಿದ್ದ ಐ-ಫೋನ್ ಗೆ ಈಗ ಬ್ಯಾಡ್ ಟೈಂ ಶುರುವಾಗಿದೆ ಅನ್ನೋ ಮಾತು ಕೇಳಿ ಬರ್ತಿದೆ. ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್ ಫೊನ್ ರಂಗದಲ್ಲಿ ಸಾಕಷ್ಟು ಕಾಂಪಿಟೇಷನ್ ಹುಟ್ಟಿಕೊಂಡಿದ್ದು, ಎಲ್ಲರೂ ಸಂಥಿಂಗ್ ಸ್ಪೇಷಲ್ ಏನಾದ್ರು ಇರಲೇಬೇಕು ಅಂತಾ ಯೋಚಿಸ್ತಿರೋರೆ. ಹೀಗಾಗಿ ಎಲ್ಲಾ ಬ್ರ್ಯಾಂಡ್ ಗಳು ಒಂದಕ್ಕಿಂತ ಒಂದು ವಿಭಿನ್ನವಾಗಿವೆ. ಆದ್ರೆ ಅವುಗಳ ನಡುವೆ ಇವತ್ತು ಐ ಫೋನ್ ಅಂಥಹ ಯುನಿಕ್ ನೆಸ್ ಉಳಿಸಿಕೊಂಡಿಲ್ಲ ಎಂದು ಹೇಳಲಾಗುತ್ತಿದೆ.

ಇತ್ತೀಚಿಗೆ ಮಾರುಕಟ್ಟೆಗೆ ಬಿಡುಗಡೆ ಮಾಡಿದ ಐ ಫೋನ್ 6ಎಸ್ ಮತ್ತು 6ಎಸ್ ಪ್ಲಸ್ ಫೋನ್ ಗಳು ನಿಜಕ್ಕೂ ಆಪಲ್ ಕಂಪನಿಯದ್ದವಾ ಎಂಬ ಅನುಮಾನ ಹುಟ್ಟುಹಾಕಿದ್ದವು. ಕಾರಣ ಮಾರುಕಟ್ಟೆಗೆ ಲಗ್ಗೆ ಇಡುತ್ತಿದ್ದ ಆಂಡ್ರಾಯ್ಡ್ ಮಾದರಿಯ ಫೋನ್ ಗಳು ಎಲ್ಲವೂ ಒಂದೇ ರೀತಿಯಲ್ಲಿದ್ದಾಗ ಐ ಫೋನ್ ಮಾತ್ರ ತನ್ನ ಆಕಾರದಿಂದ ವಿಭಿನ್ನವಾಗಿ ಗುರುತಿಸಿಕೊಂಡಿತ್ತು. ಈಗ ಅದು ಎಲ್ಲಾ ಫೋನ್ ಗಳಂತೆ ಫ್ಯಾಬ್ಲೆಟ್ ಮಾದರಿಗೆ ಬದಲಾಗಿದ್ದು, ಐ ಫೋನ್ ಪ್ರಿಯರನ್ನ ಭಾರಿ ನಿರಾಶೆಗೊಳಿಸಿತ್ತು. ಹೀಗಾಗಿ ಈ ಮಾದರಿಯ ಫೋನ್ಗಳು ಮಾರಾಟದಲ್ಲಿ ಭಾರೀ ಹಿನ್ನಡೆ ಅನುಭವಿಸಿದವು.

ಈಗ ಬರಲಿರುವ ಹೊಸ ಮಾದರಿ ಐ ಫೋನ್ ಎಸ್ ಇ ಬಗ್ಗೆ ಕೂಡಾ ಆಪಲ್ ಫ್ಯಾನ್ಸ್ ಗಳು ಅಂಥಹ ಆಸಕ್ತಿ ತೋರಿಸುತ್ತಿಲ್ಲವಂತೆ. ಜೊತೆಗೆ ಈ ವರ್ಷದ ಮೊದಲ ತ್ರೈ ಮಾಸಿಕದಲ್ಲಿ ಆಪಲ್ ನ ಆದಾಯ ಕಳೆದ 13 ವರ್ಷಗಳಲ್ಲಿಯೇ ತೀರಾ ಕಡಿಮೆಯದ್ದಾಗಿದೆ. ಇದನ್ನೆಲ್ಲಾ ನೋಡಿದಾಗ ಜಾಬ್ಸ್ ನೊಂದಿಗೆ ಆಪಲ್ ಶಕೆಯೂ ಮುಗಿಯಿತಾ ಎಂಬ ಅನುಮಾನ ಮಾರುಕಟ್ಟೆಯಲ್ಲಿ ಹರಿದಾಡುತ್ತಿದೆ.

Comments are closed.