ದನಕಾಯೋನಿಗೆ ಭಟ್ರು ಹೀಗೆಲ್ಲ ಮಾಡಿದ್ರಾ…!?

EDIT STLLS DESIGNS (2)

ಏನೇ ಮಾಡಲಿ ಅದನ್ನ ವಿಭಿನ್ನವಾಗಿ ಮಾಡಬೇಕು ಅನ್ನುವುದು ನಿರ್ದೇಶಕ ಯೋಗ್‌ರಾಜ್ ಭಟ್ ನಿಯಮ. ಅವರು ನಿರ್ದೇಶಿಸಿದ ಸಿನಿಮಾ ಏನಾದರೂ ರಿಲೀಸ್ ಆಗುತ್ತಿದೆ  ಅಂದರಂತು ಮುಗಿದೆ ಹೋಯಿತು, ಪ್ರಮೋಷನ್ ವಿಭಿನ್ನವಾಗಿ ಮಾಡುವುದಕ್ಕೆ ಶುರು ಮಾಡಿಬಿಡುತ್ತಾರೆ. ಈ ಬಾರಿ ಕೂಡ ಹಾಗೆ, ಭಟ್ಟರು ದನಕಾಯೋನಿಂದಲೇ ಚಿತ್ರದ ಧ್ವನಿ ಬಿಡುಗಡೆ ಆಗಿದೆ ಅಂತ ಪ್ರಚಾರ ಮಾಡಿಸಿದ್ದಾರೆ.

ಇದೆಲ್ಲ ಬಿಡಿ ಇಲ್ಲಿ ದನಕಾಯೋಕೆ ಹೊರಟಿರುವುದು ದುನಿಯಾ ವಿಜಿ. ಇವರೇನಾದರೂ ನ್ಯೂಸ್ ಓದಿದರೆ ಹೇಗಿರುತ್ತೆದೆ.. ? ಅನ್ನುವುದು ಭಟ್ರಿಗೆ ಹೊಳೆದಿದ್ದೇ ತಡ  ಅದನ್ನೂ ಮಾಡಿದ್ದಾರೆ. ಹಾಗಂತ ಇವರದ್ದು  ವಾರ್ತಾವಾಚಕರ ಪಾತ್ರ ಅಲ್ಲ. ಫಾರ್ ಎ ಚೇಂಜ್ ದನಕಾಯೋನು ಚಿತ್ರದ ಪ್ರೋಮೊಷನ್‌ಗಾಗಿ ಸುದ್ದಿವಾಚಕರಾಗಿದ್ದಾರಷ್ಟೇ.
EDIT STLLS DESIGNS (1)
ಇನ್ನು ತಮ್ಮದೇ ಶೈಲಿಯಲ್ಲಿ ಕಾಲೆಳೆದು, ಟಾಂಟ್ ಕೊಟ್ಟು ಭಟ್ರು ಬರೆದಿರುವ ಕೆಲವು ಸಾಲುಗಳನ್ನು ದುನಿಯಾ ವಿಜಿ ತಮ್ಮದೇ ಶೈಲಿಯಲ್ಲಿ ಉಡಾಫೆಯ ಟೋನ್‌ನಲ್ಲಿ ಹೇಳಿರುವುದು ಅವರ ಅಭಿಮಾನಿಗಳಿಗೆ ಸಖತ್ ಕಿಕ್ ಕೊಡುವುದಂತೂ ಗ್ಯಾರಂಟಿ. ಅದರಲ್ಲೂ ನಿರ್ಮಾಪಕ ಕನಕಪುರ ಶ್ರೀನಿವಾಸ್‌ರನ್ನು ಪರಿಚಯ ಮಾಡಿರುವ ಪರಿಯನ್ನ ನೋಡಿದ ಮೇಲೆ  ಅದ್ಭುತ ಅನ್ನಲೇ ಬೇಕು.. ಅಂದ ಹಾಗೆ ಎಂದಿನಂತೆ ಈ ಬಾರಿಯೂ ವಿ.ಹರಿಕೃಷ್ಣ ಅವರೇ ಟ್ಯೂನ್ ಅನ್ನ ಹಾಕಿದ್ದಾರೆ.

ದುನಿಯಾ ವಿಜಿ ಮತ್ತು ಪ್ರಿಯಾಮಣಿ ಮುಖ್ಯಪಾತ್ರದಲ್ಲಿ ಅಭಿನಯಿಸಿದ್ದರೂ ದನಕಾಯೋಕೆ ಅರ್ಧ ಇಂಡಸ್ಟ್ರಿನೇ ಬಂದಿದೆಯಂತೆ. ಹಾಗಂತ ಭಟ್ರೇ ಹೇಳಿದ್ದಾರೆ. ಹೀಗಾಗಿ ಪ್ರೋಮೋನೇ ಹೀಗಿದ್ಮೇಲೆ ಚಿತ್ರ ಹೇಗೆಲ್ಲಾ ಇರಬಹುದು ಅಂತ ಯೋಚನೆ ಮಾಡಿ. ಇನ್ನು ಜನ ತಲೆಗೆ ಹುಳ ಬಿಟ್ಟುಕೊಳ್ಳಲಿ ಅಂತ ಭಟ್ರು ಲೈಟಾಗಿ ಈ ವೀಡಿಯೋಗಳನ್ನ ಹರಿಬಿಟ್ಟಿದ್ದಾರೆ. ಈ ಎಲ್ಲಾ ಕಾರಣಕ್ಕೆ  ದನಕಾಯೋನ ಬಗ್ಗೆ ಕ್ಯೂರಿಯಾಸಿಟಿ ಹೆಚ್ಚಿರುವುದು ಭಟ್ರಾಣೆಗೂ ನಿಜ…

Comments are closed.

Social Media Auto Publish Powered By : XYZScripts.com