ಕೋರ್ಟ್ ಕಟಕಟೆಯಲ್ಲಿ ನಿಲ್ಲಿಸ್ತಾರಂತೆ ಮಾಲಾಶ್ರೀ – ಗಂಡುಗಲಿ ಗಲಿಬಿಲಿ

123 manju
ಕನಸಿನ ರಾಣಿ ಹಾಗು ಗಂಡುಗಲಿ ನಿರ್ಮಾಪಕರ ನಡುವಿನ ಕಿತ್ತಾಟ ಮುಗಿಯುವ ಹಾಗೆ ಕಾಣುತ್ತಿಲ್ಲ. ನಿನ್ನೆ ನಿರ್ಮಾಪಕ ಕೆ.ಮಂಜು ಹಾಗು ಇಮ್ರಾನ್ ಸರ್ದಾರಿಯಾ ಸೇರಿ  ಪತ್ರಿಕಾಗೋಷ್ಟಿ ನಡೆಸಿ ಮಾಲಾಶ್ರೀವನ್ನ ತಿರುಗೇಟು ನೀಡಿದ್ದರು. ಇದರ ಬೆನ್ನಲ್ಲೇ ಇಂದು ಮಾಲಾಶ್ರೀ ಪತಿ ರಾಮು ಅವರೊಂದಿಗೆ ಸೇರಿ ಆರೋಪಗಳ ಮಳೆ ಸುರಿಸಿದರು.

ಮಾಲಾಶ್ರೀಯವರನ್ನ ಉಪ್ಪು ಹುಳಿ ಖಾರ ಚಿತ್ರದಿಂದ ಕೈ ಬಿಟ್ಟಿರುವ ಬಗ್ಗೆ ಮೊನ್ನೆ ಅಸಮಧಾನ ವ್ಯಕ್ತಪಡಿಸಿದ್ದರು. ಅಲ್ಲದೆ ನಿರ್ದೇಶಕ ಇಮ್ರಾನ್ ಸರ್ದಾರಿಯಾ ನಟನೆ ಸರಿಯಾಗಿಲ್ಲ ಅಂತ ಹೇಳಿದ್ದಕ್ಕಾಗಿ ಕಣ್ಣೀರಿಟ್ಟಿದ್ದರು. ಅಲ್ಲದೆ ಇದಕ್ಕೆಲ್ಲ ಕಾರಣ ನಿರ್ಮಾಪಕ ಕೆ.ಮಂಜು ಅಂತ ನೇರವಾಗಿ ಆರೋಪ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ಮಂಜು ಹಾಗು ಇಮ್ರಾನ್ ಸರ್ದಾರಿಯಾ ಇಬ್ಬರೂ ಸೇರಿ ಪತ್ರಿಕಾಗೋಷ್ಟಿ ನಡೆಸಿ ಇವರಿಗೆ ತಿರುಗೇಟಿ ನೀಡಿದ್ದರು. ಸೆಟ್ಟಿಗೆ ತಡವಾಗಿ ಬರುತ್ತಿದ್ದಲ್ಲದೆ ಅಭ್ಯಾಸದಲ್ಲಿ ಸರಿಯಾಗಿ ಭಾಗವಹಿಸಿಲ್ಲ ಅಂತ ಆರೋಪಿದ್ದರು. ಇದರಿಂದ ನಿರ್ಮಾಪಕರಿಗೆ ನಾಲ್ಕು ಲಕ್ಷ ನಷ್ಟ ಆಗಿದೆ ಅಂತ ಗಂಭೀರವಾದ ಆರೋಪ ಮಾಡಿದ್ದರು.

imranಇದಕ್ಕೆ ಪ್ರತಿಯಾಗಿ ಇಂದು ಮಾಲಾಶ್ರೀ ಪತಿ ರಾಮು ಅವರೊಂದಿಗೆ ಮಾಧ್ಯಮದ ಮುಂದೆ ಹಾಜರಾಗಿ, ನಿರ್ದೇಶಕ ಇಮ್ರಾನ್ ಸರ್ದಾರಿಯಾ ಮಾಡಿದ ಆರೋಪಗಳೆಲ್ಲ ಸುಳ್ಳು ಅಂತ ಹೇಳಿದರು. ರಿರ್ಹಸಲ್ ಮಾಡುವುದಕ್ಕೆ ಇಮ್ರಾನ್ ಹೇಳಿರಲಿಲ್ಲ. ಬದಲಾಗಿ ತಾನೇ ಕೆಲವು ಸೀನ್‌ಗಳನ್ನ ಮೊದಲೇ ಟ್ರೈ ಮಾಡೋಣ ಅಂತ ಹೇಳಿದ್ದೆ ಅಂತ ಗುಡುಗಿದ್ದಾರೆ. ಅಲ್ಲದೆ ಅದಕ್ಕೆ ಪ್ರತಿಯಾಗಿ ಫೋನ್ ರೆಕಾರ್ಡ್ ಕೂಡ  ನನ್ನ ಬಳಿ ಇದೆ ಅಂತ ಮಾಲಾಶ್ರೀ ಸಮಜಾಯಿಷಿ ಕೊಟ್ಟಿದ್ದಾರೆ..

ಹೀಗಾಗಿ ಸುಳ್ಳು ಆರೋಪಗಳನ್ನ ಮಾಡಿದ್ದರಿಂದ ನಿರ್ದೇಶಕ ಇಮ್ರಾನ್ ಹಾಗು ನಿರ್ಮಾಪಕ ಕೆ.ಮಂಜು ವಿರುದ್ದ ನ್ಯಾಯಾಲಯದಲ್ಲಿ ಕೇಸ್ ದಾಖಲಿಸಲು ತೀರ್ಮಾನಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಕೆ.ಮಂಜು ಹಾಗು ಇಮ್ರಾನ್ ಹೇಗೆ ಪ್ರತಿಕ್ರಿಯಿಸುತ್ತಾರೋ ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.

Comments are closed.

Social Media Auto Publish Powered By : XYZScripts.com