ಕಿರಿಕ್ ಪಾರ್ಟಿಗಳು ಮಾಡೋಕೆ ಹೊರಟಿರೋದು ಇದೆನಾ..?

kirik 2

ಅವರೊಂಥರಾ ಕಿರಿಕ್ ಪಾರ್ಟಿ… ಒಬ್ಬರಿಗಿಂತ ಒಬ್ಬರು ತರಲೆಗಳು… ಅವರಲ್ಲಿ ಕೆಲವರು ಈಗಾಗ್ಲೇ ಪಳಗಿರುವ ಪಂಟರು.. ಮತ್ತೆ ಕೆಲವರು ಈಗಷ್ಟೇ ಈ ಗ್ರೂಪ್ ಗೆ ಎಂಟ್ರಿ ಕೊಡುತ್ತಿರುವವರು. ಎಲ್ಲರೂ ಒಟ್ಟಾಗಿ ಸೇರಿಕೊಂಡು ಜಬರ್ ದಸ್ತ್ ಪಾರ್ಟಿ ಮಾಡೋಕೆ ಹೊರ್ಟಿದ್ದಾರೆ. ಅವರ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲದೆ ನೋಡಿ…

ಸಿಂಪಲ್ ಹುಡುಗನ ಹಾಗೆ ಬಂದ ರಕ್ಷಿತ್ ಶೆಟ್ಟಿ ಉಳಿದರು ಕಂಡಂತೆ ಅಂತ ಸಸ್ಪೆನ್ಸ್ ತೋರಿಸಿದ್ದು ನೋಡಿದ್ದೀರಿ.. ಅವರ ಗ್ಯಾಂಗ್‌ನ ಪರಮಾಪ್ತ ಗೆಳೆಯನ ಚೊಚ್ಚಲ ಚಿತ್ರದಲ್ಲಿ ರಿಕ್ಕಿಯಾಗಿ, ನಕ್ಸಲೈಟ್ ಹಿನ್ನಲೆಯಲ್ಲೇ ಪ್ರೇಮಕಥೆಯಲ್ಲಿ ಸಿಕ್ಕಿಕೊಂಡಿದ್ದನ್ನೂ ನೋಡಿದ್ದೀರಿ. ಸರಿ ಮುಂದೆ ಏನು ಮಾಡಬಹುದು..? ಅಂತಿದ್ದವರ ಪ್ರಶ್ನೆಗೆ ಸಿಕ್ಕ ಉತ್ತರ ‘ಪರಂವಾ ಸ್ಟುಡಿಯೋಸ್’… ಇದು ರಕ್ಷಿತ್ ಶೆಟ್ಟಿಯವರದ್ದೇ ಸ್ವಂತ ಪ್ರೊಡಕ್ಷನ್ ಹೌಸ್. ಇದರಲ್ಲಿ ಹೊರ ಬರಿತ್ತಿರುವ ಚೊಚ್ಚಲ ಚಿತ್ರವೇ ಈ ‘ಕಿರಿಕ್ ಪಾರ್ಟಿ’.

kirik party
ಈ ಕಿರಿಕ್ ಪಾರ್ಟಿ ಸ್ಕ್ರಿಪ್ಟ್ ಅನ್ನ ತಮ್ಮ ಚೊಚ್ಚಲ ಚಿತ್ರ ತುಘಲಕ್‌ ಬಳಿಕ ರಕ್ಷಿತ್ ಶೆಟ್ಟಿ ರೆಡಿ ಮಾಡಿಟ್ಟುಕೊಂಡಿದ್ದರಂತೆ. ಅಲ್ದೇ ಕಡಿಮೆ ಬಜೆಟ್‌ನಲ್ಲಿ ಸಿನಿಮಾ ಮಾಡಿ ಮುಗಿಸಬೇಕು ಅನ್ನುವ ಪ್ಲಾನ್ ಕೂಡ ಮಾಡಿದ್ದರು. ಆದರೆ ಈ ಗ್ಯಾಪ್‌ನಲ್ಲಿ ಒಂದಿಷ್ಟು ಏರಿಳಿತಗಳಾಗಿದ್ದರಿಂದ, ಈಗ್ಲೇ ಕಿರಿಕ್ ಪಾರ್ಟಿ ಮಾಡೋದು ಬೇಡ ಅಂತ ಕಥೆಯನ್ನ ಎತ್ತಿಟ್ಟಿದ್ದರಂತೆ. ಈಗ ಅದಕ್ಕೊಂದಿಷ್ಟು ಮಸಾಲೆ ಹಚ್ಚಿ ‘ಪರಂವಾ ಸ್ಟುಡಿಯೋಸ್’ನಲ್ಲಿ ಚೊಚ್ಚಲ  ಚಿತ್ರವಾಗಿ ತೆರೆಮೇಲೆ ತರುವುದಕ್ಕೆ ಸಜ್ಜಾಗಿದ್ದಾರೆ ರಕ್ಷಿತ್ ಶೆಟ್ಟಿ.

ಇನ್ನು ಕಿರಿಕ್ ಪಾರ್ಟಿಯಲ್ಲಿ ಅಂತಹ ಸ್ಪೆಷಾಲಿಟಿ ಏನಿದೆ ಅಂದರೆ, ಇಲ್ಲಿರುವ ಬಹುಪಾಲು ಸನ್ನಿವೇಶಗಳು ರಿಯಲ್ ಅಂತೆ. ರಕ್ಷಿತ್ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದಾಗ ನಡೆದ ಸನ್ನಿವೇಶಗಳೇ ಈ ಚಿತ್ರದ ಮೂಲ ಕಥಾವಸ್ತು. ಇದರಲ್ಲಿ ರಕ್ಷಿತ್ ಇಲ್ಲಿವರೆಗೆ ಎಲ್ಲೂ ಬಾಯಿಬಿಡದ ಲವ್ ಸ್ಟೋರಿವೊಂದಿದೆ ಅನ್ನೋದು ಕುತೂಹಲಕಾರಿ ವಿಚಾರ. ಈ ಕಥೆ ಸಿನಿಮಾ ಮಾಡೋದೆ ಬೇಡ ಅಂತಿದ್ದ ರಕ್ಷಿತ್‌ಗೆ ನಾನೇ ಡೈರೆಕ್ಟ್ ಮಾಡುತ್ತೀನಿ ಅಂತ ಹೇಳಿ ಒಪ್ಪಿಸಿದ್ದು ಗೆಳೆಯ ರಿಷಭ್ ಶೆಟ್ಟಿ. ಹಾಗಾಗಿ ವಿಭಿನ್ನವಾಗಿ ಹೇಳುವುದಕ್ಕೆ ಹೊರಟಿರೋ ಈ ಲವ್ ಸ್ಟೋರಿ ಸ್ಯಾಂಡಲ್ವುಡ್ ಗೆ ವಿಶೇಷವಾದ ಸಿನಿಮಾ ಆದರೂ ಆಗಬಹುದು..
ಈ ಚಿತ್ರಕ್ಕೆ ಹೊಸಬರು ಬೇಕು ಅನ್ನುವ ಕಾರಣಕ್ಕೆ ಸಾಕಷ್ಟು ಆಡಿಷನ್ ಮಾಡಿತ್ತು ರಕ್ಷಿತ್ ಅಂಡ್ ಟೀಂ. ಅಲ್ಲಿ ಸಿಕ್ಕ ಹೊಸ ಪ್ರತಿಭೆಗಳೆ ಮಡಿಕೇರಿಯ ಕುವರಿ ರಶ್ಮಿಕಾ ಮಂದಣ್ಣ ಮತ್ತು ಶಿರಸಿಯ ಸಂಯುಕ್ತಾ ಹೆಗಡೆ. ಇವರಿಬ್ಬರೂ ರಕ್ಷಿತ್ ಶೆಟ್ಟಿ ತಂಡದ ಜೊತೆ ಕಿರಿಕ್ ಮಾಡುವಿದಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ. ಈ ಹಿಂದೆ ಒಂದಿಷ್ಟು ಮಾಡೆಲಿಂಗ್  ಮತ್ತು ನೃತ್ಯದ ಅನುಭವ ಇರುವ ಹುಡುಗಿಯರು ಸಖತ್ ಬೋಲ್ಡ್ ಪಾತ್ರಗಳನ್ನ ಮಾಡಲಿದ್ದಾರಂತೆ..

rakshit-shetty

ಇನ್ನು ಕಾಲೇಜು ಕಾಂಪಸ್ಸಿನಲ್ಲೇ ಹೆಚ್ಚಾಗಿ ನಡೆಯುವ ಈ ಕಥೆಯಲ್ಲಿ ಮನರಂಜನೆಗೇನು ಬರವಿಲ್ಲ ಅನ್ನುತ್ತೆ ಚಿತ್ರತಂಡ. ಒಂದು ಸಿಂಪಲ್ ಸ್ಟೋರಿಯನ್ನ ಹಾಸ್ಯದ ಸುಂದರ ಸನ್ನಿವೇಶಗಳ ಜೊತೆ ಹೇಳುವುದಕ್ಕೆ ಹೊರಟಿರುವುದರಿಂದ ಕಿರಿಕ್ ಪಾರ್ಟಿ ಕನ್ನಡಕ್ಕೆ ಹೊಸತು ಅನ್ನುತ್ತೆ ಟೀಮ್.. ಇನ್ನು ‘ಉಳಿದವರು ಕಂಡಂತೆ’ಯಲ್ಲಿ ಇದ್ದ ತಂಡವೇ ಬಹುತೇಕ ಇಲ್ಲೂ ಇರುವುದರಿಂದ ಪಾರ್ಟಿ ಸಿಕ್ಕಾ-ಪಟ್ಟೆ ಕಿರಿಕ್ ಆಗಿರುತ್ತೆ ಅನ್ನುವುದು ಭವಿಷ್ಯದ ನುಡಿ.

Comments are closed.

Social Media Auto Publish Powered By : XYZScripts.com