ಇವರೆಲ್ಲಾ ಇದ್ದಾರೆ ಅನ್ನೋದೇ ವಿಶೇಷ !

Babru_Vahana_000319 Babru_Vahana_000349 Babru_Vahana_000471
ಸಾಮಾನ್ಯವಾಗಿ ಯಾವುದಾದರೂ ಹಳೆಯ ಚಿತ್ರವೊಂದು ಅನೇಕ ವರ್ಷಗಳ ನಂತರ ಬಿಡುಗಡೆಯಾಗುತ್ತಿದೆ ಎಂದರೆ ಸಿನಿರಸಿಕರ ಪಾಲಿಗೆ ಅದು ಹಬ್ಬ. ಈ ಏಪ್ರಿಲ್ 22ಕ್ಕೂ ಇದೇ ಬಗೆಯ ಹಬ್ಬದ ಸಡಗರ ಚಿತ್ರಮಂದಿರಗಳಲ್ಲಿ ಕಾಣಲಿದೆ. ಅದಕ್ಕೆ ಕಾರಣ ಡಾ ರಾಜ್ ಕುಮಾರ್ ಅಭಿನಯದ ‘ಬಬ್ರುವಾಹನ’ ಚಿತ್ರ. ಇದೇ ಏಪ್ರಿಲ್ 22ಕ್ಕೆ ಮತ್ತೆ ತೆರೆಕಾಣ್ತಿದೆ.

ಈ ಚಿತ್ರ ಅನೇಕ ಕಾರಣಗಳಿಗೆ ವಿಶೇಷ ಎನ್ನುವುದನ್ನು ಎಲ್ಲರೂ ಒಪ್ಪಬೇಕು. ಡಾ ರಾಜ್ ದ್ವಿಪಾತ್ರ ಅಭಿನಯ, ಚಿತ್ರದ ಸಂಗೀತ, ಅದ್ಧೂರಿ ಸೆಟ್ ಗಳು ಇವೆಲ್ಲಾ ಇಂದಿಗೂ ನೋಡುಗರ ಕಣ್ಣಿಗೆ ಹಬ್ಬವೇ. ಆದರೆ ಇದರಲ್ಲೊಂದು ಅಪರೂಪದ ವಿಚಾರವಿದೆ. ಅದೇನೆಂದರೆ 1977ರಲ್ಲಿ ಮೊದಲ ಬಾರಿಗೆ ತೆರೆಗೆ ಬಂದಿದ್ದ ಈ ಚಿತ್ರದಲ್ಲಿ ನಟಿಸಿದ್ದ ಮೂವರೂ ನಾಯಕಿಯರು ಈಗಲೂ ಬಬ್ರವಾಹನವನ್ನ ಮೆಲುಕು ಹಾಕುತ್ತಿದ್ದಾರೆ

1 1234 tamil-kanchana-sridhar-actress-airhostess-kathalikka-neramillai

ಸಾಮಾನ್ಯವಾಗಿ ಬಹಳ ಹಳೆಯ ಚಿತ್ರಗಳು ಮರುಬಿಡುಗಡೆಯಾದಾಗ ಆ ಚಿತ್ರಕ್ಕಾಗಿ ದುಡಿದ ಬಹುತೇಕರು ಇರುವುದಿಲ್ಲ. ಆದ್ರೆ ಬಬ್ರುವಾಹನದ ಮೂವರು ನಾಯಕಿಯರಾದ ಬಿ ಸರೋಜಾದೇವಿ, ಕಾಂಚನಾ ಮತ್ತು ಜಯಮಾಲಾ ನಮ್ಮ ನಡುವೆ ಇರುವುದು ಚಿತ್ರಪ್ರೇಮಿಗಳಿಗೊಂದು ಅಪರೂಪದ ಸನ್ನಿವೇಶ. ಈ ವಿಚಾರದಲ್ಲಿ ಬಬ್ರುವಾಹನ ಒಂದು ಸ್ಪೆಷಲ್ ಚಿತ್ರವಾಗಿದೆ. ಮತ್ತೆ ಬಿಡುಗಡೆಯಾಗಿರುವ ‘ಬಬ್ರುವಾಹನ’ನನ್ನು ನೋಡಲು ಈ ಮೂರು ಜನ ನಾಯಕಿಯರು ಥಿಯೇಟರ್ ಗೆ ಬರಲಿ ಅನ್ನೋದು ಅಭಿಮಾನಿಗಳ ಆಶಯ…

Comments are closed.

Social Media Auto Publish Powered By : XYZScripts.com