ಈ ಮನಸ್ಸುಗಳು ಅಂದು ಹೇಗಿದ್ದವು..? ಈಗ ಹೇಗಿದ್ದಾವೆ ನೋಡಿ.. ?

 index bm4

bm3

 

 

 

 

 

ಅಂದು ಆ ಚಿತ್ರದಿಂದ ಭವಿಷ್ಯವನ್ನೇ ಕಂಡುಕೊಂಡ ಜೋಡಿಗಳಿವರು. ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ದುಡ್ಡು ಮಾಡಿತೋ ಇಲ್ಲವೋ.. ಆದರೆ ಈ ಜೋಡಿಗಳಿಗೆ ಮಾತ್ರ ದೊಡ್ಡದೊಂದು ಬ್ರೇಕ್ ಸಿಕ್ಕಿತ್ತು. ಇಲ್ಲಿಂದ ಕನ್ನಡ ಚಿತ್ರರಂಗದಲ್ಲಿ ಈ ಜೋಡಿ ಮತ್ತೆ ಜೊತೆಯಾಗಿ ನಟಿಸಿಲ್ಲ. ಪವನ್ ಕುಮಾರ್ ನಿರ್ದೇಶಿಸಿದ್ದ ಲೂಸಿಯಾದಲ್ಲಿ ಇಬ್ಬರಿಗೂ ಸಿಕ್ಕ ಇಮೇಜ್ ಸ್ಯಾಂಡಲ್‌ವುಡ್‌ನಲ್ಲಿ ಗಟ್ಟಿಯಾಗಿ ನೆಲೆಯೂರುವಂತೆ ಮಾಡಿದೆ. ಈ ಚಿತ್ರದ ಬಳಿಕ ಬೇರೆ ಬೇರೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದವರು ಈಗ ಮತ್ತೆ ಒಂದಾಗುತ್ತಿದ್ದಾರೆ.

ನೀನಾಸಂ ಸತೀಶ್ ಹಾಗು ಶೃತಿ ಹರಿಹರನ್ ಇಬ್ಬರು ಒಟ್ಟಾಗಿ ಮತ್ತೆ ನಟಿಸುತ್ತಿದ್ದಾರೆ. ಈ ಹಿಂದೆ ಮಾಡಿದ್ದ ಮೋಡಿ ಈ ಬಾರಿಯೂ ಮಾಡಿದರೆ, ಸಕ್ಸಸ್‌ಫುಲ್ ಫೇರ್‌ಗಳ ಸಾಲಿಗೆ ಇವರೂ ಸೇರಬಹುದು. ಕೆಲವು ದಿನಗಳ   ಹಿಂದಷ್ಟೇ ಈ ನಟಿಯ ಜೈ ಮಾರುತಿ ೮೦೦ ತೆರೆಕಂಡು ಉತ್ತಮ ಪ್ರದರ್ಶನ ಕಾಣ್ತಿದೆ. ಹಾಗೆ ಗೋಧಿ ಬಣ್ಣ ಸಾಧಾರಣ ಮೈಕಟ್ಟು ಚಿತ್ರ ಕೂಡ ತೆರೆಗೆ ಬರುವುದಕ್ಕೆ ತುದಿಗಾಲಲ್ಲಿ ನಿಂತಿದೆ. ಹೀಗಾಗಿ ಬ್ಯುಸಿ ಶೆಡ್ಯೂಲ್‌ಗಳ ನಡುವೆ ಸತೀಶ್ ಜೊತೆ ನಟಿಸೋಕೆ ಒಪ್ಪಿಗೆ ಸೂಚಿಸಿದ್ದಾರೆ.

bm6

ಇವರೊಂದಿಗೆ ಅಚ್ಯುತ್ ಕುಮಾರ್ ಹಾಗು ತಬಲ ನಾಣಿ ಕೂಡ ನಟಿಸುತ್ತಿರುವುದು ಚಿತ್ರಕ್ಕೆ ಬಲ ನೀಡಿದೆ. ಅಲ್ಲದೆ ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ಖ್ಯಾತಿಯ ಭರತ್ ಬಿ.ಜೆ ಈ ಬ್ಯೂಟಿಫುಲ್ ಮನಸ್ಸುಗಳಿಗೆ ಟ್ಯೂನ್‌ಗಳನ್ನ ಕಂಪೋಸ್ ಮಾಡಲಿದ್ದಾರೆ.
ಅಂದ್ಹಾಗೆ ಇವರಿಬ್ಬರನ್ನ ನೋಡಿ ‘ಬ್ಯೂಟಿಫುಲ್ ಮನಸ್ಸುಗಳು’ ಅಂತ ಟೈಟಲ್ ಇಟ್ಟಿದ್ದಾರೆ ನಿರ್ದೇಶಕರು. ಈ ಹಿಂದೆ ಒಲವೇ ಮಂದಾರ, ಟೋನಿ, ಇತ್ತಿಚೆಗೆ ಬಂದ ಬುಲೆಟ್ ಬಸ್ಯದಂತಹ ಚಿತ್ರಗಳ ಮೂಲಕ ಗಮನ ಸೆಳೆದಿದ್ದ ನಿರ್ದೇಶಕ ಜಯಕೀರ್ತ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಪ್ರೇಮಿಗಳ ದಿನದಂದು ಮುಹೂರ್ತ ಕಂಡಿದ್ದ ಈ ಚಿತ್ರದ ನಾಯಕ ಹಾಗೂ ನಾಯಕಿಯ ಫೋಟೋಶೂಟ್ ನಡೆದಿದ್ದು, ಅದನ್ನ ನೋಡಿದರೆ ಮತ್ತೆ ಲೂಸಿಯಾ ಯಶಸ್ಸು ಕಣ್ಣಮುಂದೆ ಬರಬಹುದು.

ಹೆಚ್ಚು ಕಡಿಮೆ ಮೂರು ವರ್ಷಗಳ ಗ್ಯಾಪ್ ನಂತರ ವೀಕ್ಷಕರು ಮತ್ತೆ ಲೂಸಿಯಾ ಜೋಡಿಯನ್ನು ತೆರೆಮೇಲೆ ಶೀಘ್ರದಲ್ಲೇ ನೋಡಬಹುದು. ಇಲ್ಲಿವರೆಗೂ ಈ ಮನಸ್ಸುಗಳ ಬಗ್ಗೆ ನಿಗಾ ಇಟ್ಟಿರಿ.

 

 

 

Comments are closed.