ಕೂಸು ಹುಟ್ಟುವ ಮುಂಚೆಯೇ ಕುಲಾವಿ Sold Out !

 

darshan

ಸ್ಯಾಂಡಲ್ ವುಡ್ ಪಾಲಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆಲ್ಲುವ ಕುದುರೆ. ದರ್ಶನ್ ಮೇಲೆ ಹಾಕಿದ ಬಂಡವಾಳಕ್ಕೆ ಯಾವತ್ತೂ ಮೋಸವಿಲ್ಲ ಎನ್ನುವುದು ಗಾಂಧಿನಗರದ ಗಲ್ಲಿಗಳಲ್ಲಿ ಇರುವ ಬಹಳ ಪ್ರಸಿದ್ಧ ಮಾತು. ದರ್ಶನ್ ಸಿನಿಮಾಗೆ ಮಾರ್ಕೆಟ್ ಸಮಸ್ಯೆ ಎಂದಿಗೂ ಕಾಡಿಲ್ಲ. ಈ ಮಾತಿಗೆ ಹೊಸ ಉದಾಹರಣೆಯೊಂದು ಸಿಕ್ಕಿದೆ.

ದರ್ಶನ್ ಅಭಿನಯಿಸಿರುವ ಹೊಸ ಚಿತ್ರ ‘ಜಗ್ಗುದಾದಾ’. ಈ ಚಿತ್ರ ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಆದ್ರೆ ಈ ಚಿತ್ರ ಈಗಾಗ್ಲೇ ಲಾಭದ ದಾರಿಯಲ್ಲಿ ಸಾಗಿದೆ.ಚಿತ್ರ ಪೂರ್ಣವಾಗುವ ಮುನ್ನವೇ ಸಾಕಷ್ಟು ವಹಿವಾಟು ನಡೆಸುತ್ತಿದೆ.
ಅಂದ್ಹಾಗೆ ‘ಜಗ್ಗುದಾದಾ’ ಹಿಂದಿ ಡಬ್ಬಿಂಗ್ ರೈಟ್ಸ್ ಮಾರಾಟವಾಗಿದೆ, ಬರೋಬ್ಬರಿ ಒಂದೂವರೆ ಕೋಟಿ ರೂಪಾಯಿಗೆ!
ಹಾಗಾಗಿ ಚಿತ್ರ ಬಿಡುಗಡೆಗೂ ಮುಂಚೆಯೇ ಸಖತ್ ಹೈಪ್ ಕ್ರಿಯೇಟ್ ಮಾಡಿಕೊಂಡಿದೆ. ಕೇವಲ ಹಿಂದಿ ಒಂದರ ಡಬ್ಬಿಂಗ್ ರೈಟ್ಸ್ ಇಷ್ಟು ಹಣ ತಂದುಕೊಟ್ಟಮೇಲೆ ಬೇರೆ ಭಾಷೆಗಳ ಡಬ್ಬಿಂಗ್, ಸ್ಟಾಟಲೈಟ್ ರೈಟ್ಸ್ ಹೀಗೆ ಬಿಡುಗಡೆಯ ಡೇಟ್ ಫಿಕ್ಸ್ ಆಗೋ ಮುಂಚೆಯೇ ಜಗ್ಗುದಾದಾ ಫುಲ್ ಪ್ರಾಫಿಟ್ಟಿನಲ್ಲಿ ಇರೋದು ಗ್ಯಾರಂಟಿ ಅಂತಿದೆ ಚಿತ್ರತಂಡ.
ಭೂಗತ ಲೋಕದ ಡಾನ್ ಒಬ್ಬನ ಕಥೆಯನ್ನು ಕಾಮಿಡಿ ಹಿನ್ನಲೆಯಲ್ಲಿ ಹೇಳಿರುವ ಕಥೆಯೇ ಜಗ್ಗುದಾದಾ. ದರ್ಶನ್ ಜೊತೆಗೆ ಸೃಜನ್ ಲೋಕೇಶ್, ದೀಕ್ಷಾ ಸೇಥಿ ಮುಂತಾದವರು ‘ಜಗ್ಗುದಾದಾ’ನಲ್ಲಿ ಅಭಿನಯಿಸಿದ್ದಾರೆ.

Comments are closed.

Social Media Auto Publish Powered By : XYZScripts.com