ಅಂಜಲಿಯನ್ನ ಚಕ್ರವರ್ತಿ ಕಡೆಯವರು ಹುಡುಕಿಕೊಂಡು ಹೋಗಿದ್ರಂತೆ ಹೌದಾ..?

Darshan2

ಡಿಫರೆಂಟ್ ಸಿನಿಮಾ ಅನ್ನು ಕಾರಣಕ್ಕೆ ದರ್ಶನ್ ಅಭಿಮಾನಿಗಳು ‘ಜಗ್ಗುದಾದಾ’ನನ್ನ ನೋಡುವುದಕ್ಕೆ ತುದಿಗಾಲಿನಲ್ಲಿ ನಿಂತಿದ್ದಾರೆ. ಇನ್ನೇನು ಹೆಚ್ಚು ಕಡಿಮೆ ಇನ್ನೊಂದು ತಿಂಗಳಲ್ಲಿ ಥಿಯೇಟರಿನಲ್ಲಿ ದಾದಾ ನಗಿಸಬಹುದು ಎನ್ನುವಾಗಲೇ ಅವರ ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿ ಸಿಕ್ಕಿದೆ. ಹೀಗಾಗಿ ಈ ಸ್ಟಾರ್ ನಟನ ಆರಾಧಕರಿಗೆ ಇದೊಂಥರಾ ಡಬಲ್ ಧಮಾಕ.

 

ಚಾಲೆಂಜಿಂಗ್ ಸ್ಟಾರ್ ದರ್ಶನ್ ಒಂದು ಸಿನಿಮಾ ಮುಗಿಯುವವರೆಗೆ ಮತ್ತೊಂದು ಚಿತ್ರವನ್ನ ಕೈಗೆತ್ತಿಕೊಳ್ಳುವುದಿಲ್ಲ. ಅಲ್ಲದೆ ಆ ಚಿತ್ರದ ಬಗ್ಗೆ ಮಾತನಾಡುವುದೂ ಇಲ್ಲ.. ಸಂಬಂಧಪಟ್ಟವರಿಗೆ ಮಾತನಾಡಲು ಬಿಡುವುದೂ ಇಲ್ಲ. ಹೀಗಿರುವಾಗಲೇ ಅವರು ನಟಿಸುತ್ತಿರುವ ಮುಂದಿನ ಚಿತ್ರದ ಬಗ್ಗೆ ಒಂದು ಮಾಹಿತಿ ಹೊರಬಿದ್ದಿದೆ. ಈ ಸುದ್ದಿಯನ್ನ ಅವರ ಅಭಿಮಾನಿಗಳು ಕೇಳಿದರೆ ಕುಣಿದು ನಲಿದಾಡುವುದು ಗ್ಯಾರಂಟಿ.
ದರ್ಶನ್ 48ನೇ ಸಿನಿಮಾದ ಬಗ್ಗೆ ತಿಳಿದು ಕೊಳ್ಳುವುದಕ್ಕೆ ಅಬಿಮಾನಿಗಳಿಗೆ ಎಲ್ಲಿಲ್ಲದ ಆಸಕ್ತಿ. ಹಾಗಾಗಿ ಈ ಚಿತ್ರದ ಬಗ್ಗೆ ಅಭಿಮಾನಿಗಳಲ್ಲಿ ಹುಟ್ಟಿಕೊಂಡಿರುವ ನಿರೀಕ್ಷೆಗಳು ಸಣ್ಣದೇನಲ್ಲ. ಯಾಕಂದರೆ ದರ್ಶನ್ ನಟಿಸಲಿರುವ ಮುಂದಿನ ಚಿತ್ರ ‘ಚಕ್ರವರ್ತಿ’ಗೆ ನಾಯಕಿ ಯಾರು ಅನ್ನುವ ಕುತೂಹಲಕ್ಕೆ ಚಿತ್ರತಂಡ ತೆರೆ ಎಳೆದ ಕ್ಷಣದಿಂದ ಕುತೂಹಲ  ದುಪ್ಪಟ್ಟಾಗಿದೆ. ಈಗಾಗಲೇ ಗೊತ್ತಿರುವ ಹಾಗೆ ರಣವಿಕ್ರಮ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದ ಕಾಲಿವುಡ್ ನಟಿ ಅಂಜಲಿ ‘ಚಕ್ರವರ್ತಿ’ ಜೊತೆ ಡ್ಯುಯೆಟ್ ಹಾಡಲಿದ್ದಾರೆ.

anjali 3
ಅಷ್ಟಕ್ಕೂ ಚಕ್ರವರ್ತಿಗೆ ಇವರೇ ಯಾಕೆ ಆಯ್ಕೆಯಾದರು ಅನ್ನುವ ಪ್ರಶ್ನೆಗೆ ಗಾಂಧಿನಗರ ಬೇರೆಯದೇ ಉತ್ತರ ಕೊಡುತ್ತಿದೆ. ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಈಕೆ ಅದೃಷ್ಟದ ನಟಿಯಂತೆ. ಅಭಿನಯ ಹಾಗು ಸಹಜ ಸೌಂದರ್ಯದ ಮೂಲಕ ಅಭಿಮಾನಿಗಳ ಮನಗೆದಿದ್ದರೂ, ನಾಯಕಿಯಾಗಿ ನಟಿಸಿದ ಸಿನಿಮಾಗಳು ಗೆದ್ದಿವೆಯಂತೆ. ಹೀಗಾಗಿ ಆಯ್ಕೆ ಆಗಿರಬಹುದು ಅನ್ನುವುದು ಸ್ಯಾಂಡಲ್ ವುಡ್ ಮಂದಿಯ ಗುಸು ಗುಸು..
ಅಂಜಲಿ ‘ಚಕ್ರವರ್ತಿ’ಯ ರಾಣಿಯಾಗುವುದಕ್ಕೆ ಇನ್ನೊಂದು ಕುತೂಹಲಕಾರಿ ಕಾರಣವಿದೆ. ಇತ್ತೀಚಿನ ನಾಯಕಿಯರ ಹಾಗೆ ಝಿರೋ ಸೈಜ್ ಮೇಂಟೇನ್ ಮಾಡುವ ನಟಿಯಲ್ಲ ಈಕೆ. ಆ ಎಲ್ಲಾ ನಾಯಕಿಯರಿಗಿಂತ ಅಂಜಲಿ ಉಲ್ಟಾ. ಹಾಗಾಗಿ ಇವರನ್ನ ಆಯ್ಕೆ ಮಾಡಲಾಗಿದೆ. ಅಲ್ಲದೇ ಈ ಸಿನಿಮಾ ಕೂಡ 80ರ ದಶಕದ ಕಥೆಯಾಗಿರುವುದರಿಂದ ಆ ಕಾಲಕ್ಕೆ ಹೊಂದಿಕೆ ಆಗುವ ನಟಿ ಬೇಕಾಗಿತ್ತು.   ಹೀಗಾಗಿ ಸುಮಾರು 3 ತಿಂಗಳಿಂದ ಹುಡುಕಾಟದಲ್ಲಿದ್ದ ನಿರ್ದೇಶಕ ಚಿಂತನ್ ಗೆ ಸಿಕ್ಕಿದ್ದು ಈಕೆ. ಹೀಗಾಗಿ ‘ಚಕ್ರವರ್ತಿ’ ಖುಷ್ ಹುವಾ ಅಂತ ಮಾತನಾಡಿಕೊಳ್ಳುತ್ತಿದ್ದಾರೆ ಗಾಸಿಪ್ ಮಂದಿ.

Comments are closed.