ಅಣ್ಣಾವ್ರ 10ನೇ ಪುಣ್ಯ ತಿಥಿಯ ವಿಶೇಷಗಳೇನು…?

rajkumar4 rajkumar10 rajkumar799687

ವರನಟ ಡಾ.ರಾಜ್ ಕುಮಾರ್ ಅಸಂಖ್ಯಾತ ಅಭಿಮಾನಿಗಳನ್ನ ಅಗಲಿ ಏಪ್ರಿಲ್ 12ಕ್ಕೆ ಹತ್ತು ವರ್ಷಗಳಾಗೇ ಆಗಿವೆ. ಆದರೂ ಅವರಿಗಿದ್ದ ಅಭಿಮಾನಿಗಳ ಬಳಗ ಹಾಗು ಅಭಿಮಾನ ಇನ್ನೂ ಕಮ್ಮಿಯಾಗಿಲ್ಲ. ಹಾಗಾಗಿ ಈ ದಿನದಂದು ಅಣ್ಣಾವ್ರಿಗೆ ನಮನ ಸಲ್ಲಿಸಲು ರಾಜ್ಯದ ನಾನಾ ಕಡೆಗಳಿಂದ ಕಂಠೀರವ ಸ್ಟುಡಿಯೋಗೆ ಅವರ ಫ್ಯಾನ್ಸ್ ಆಗಮಿಸುತ್ತಿದ್ದಾರೆ. ಅಲ್ಲದೆ  ಸಮಾಧಿ ಪೂಜೆ ಸಲ್ಲಿಸುವುದಕ್ಕೆ  ಪತ್ನಿ ಪಾರ್ವತಮ್ಮ ರಾಜ್ ಕುಮಾರ್ ಸೇರಿದಂತೆ ಅವರ ಮಕ್ಕಳಾದ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ಪುನೀತ್ ರಾಜ್ ಕುಮಾರ್  ಕೂಡ ಆಗಮಿಸಿದ್ದರು.

raj3 raj4

20160411223748

ಇದೇ  ಸಂದರ್ಭದಲ್ಲಿ 2013ರಲ್ಲಿ ಬಿಡುಗಡೆಗೊಂಡಿದ್ದ ಪುಸ್ತಕ ‘ಜನಪದ ನಾಯಕ ಡಾ.ರಾಜ್ ಕುಮಾರ್ ಜನರಿಗೆ ಕೊಟ್ಟಿದ್ದೇನು?’ ಎನ್ನುವ ಪುಸ್ತಕವನ್ನ ಮರುಬಿಡು

ಗಡೆ ಮಾಡಲಾಯಿತು. ಸಾಹಿತಿ ಮತ್ತು ನಿರ್ದೇಶಕ ಬರಗೂರು ರಾಮಚಂದ್ರಪ್ಪ ಈ ಕೃತಿಯ ಲೇಖಕರಾಗಿದ್ದು, ಮರುಮುದ್ರಣಗೊಂಡ ಪುಸ್ತಕವನ್ನ ಅಣ್ಣಾವ್ರ ಅಭಿಮಾನಿಗಳಿಗೆ ಅರ್ಪಿಸಿದರು.

 

ಇದಲ್ಲದೆ ಎಂದಿನಂತೆ ಈ ಬಾರಿಯೂ ದೂರದಿಂದ ಬಂದ ಡಾ.ರಾಜ್ ಕುಮಾರ್ ಅಭಿಮಾನಿಗಳಿಗಾಗಿ ಅನ್ನ ಸಂತರ್ಪಣೆಯನ್ನ ಏರ್ಪಡಿಸಲಾಗಿತ್ತು. ಸಮಾಧಿಯಲ್ಲಿ ಪೂಜೆ ಮುಗಿಸಿದ ಬಳಿಕ ರಾಜ್ ಕುಟುಂಬ ಸದಾಶಿವನಗರದ ಮನೆಯಲ್ಲೂ ಪೂಜಾ ಕಾರ್ಯಗಳಲ್ಲಿ ಭಾಗಿಯಾಗಲಿದೆ.

 

Comments are closed.